ಆತಂಕ ಸೃಷ್ಟಿಸುವ ಚೀನಾ ವುಹಾನ್ ಪ್ರಾಂತ್ಯದ ದೃಶ್ಯಗಳು ವೈರಲ್….!

ಚೀನಾದಲ್ಲಿಆತಂಕ ಸೃಷ್ಟಿಸಿರುವ ಕೊರೊನಾ ಸೋಂಕು ಈಗ 15 ರಾಷ್ಟ್ರಗಳಿಗೆ ವ್ಯಾಪಿಸಿದೆ. ಫ್ರಾನ್ಸ್‌, ಜಪಾನ್‌, ಕೆನಡಾ, ಅಮೆರಿಕಗಳಲ್ಲಿಯೂ ಸೋಂಕು ಪತ್ತೆಯಾಗಿದೆ. ಕೊರೊನಾಗೆ ಬಲಿಯಾದವರ ಸಂಖ್ಯೆ 130 ದಾಟಿದೆ. ರೋಗಿಗಳು ಏಕಾಏಕಿ ಹೆಚ್ಚಾಗುತ್ತಿದ್ದಂತೆ ಚೀನಾದಲ್ಲಿ ವೈದ್ಯ ಲೋಕವೇ ಬೆಚ್ಚಿ ಬಿದ್ದಿದೆ. ರಾತ್ರಿ ಹಗಲು ನಿದ್ದೆ ಇಲ್ಲದೆ ರೋಗಗಳನ್ನು ಕಾಪಾಡಲು ವೈದ್ಯರು ಹರಸಾಹಸ ಪಡುತ್ತಿರುವುದು ಕಣ್ಣಲ್ಲಿ ನೀರುರಿಸುತ್ತೆ.

ಹೌದು…  48 ವರ್ಷದಿಂದ 89 ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿಮೃತಪಟ್ಟಿದ್ದಾರೆ. ಕೊರೊನಾ ವೈರಾಣು ಮೊದಲು ಪತ್ತೆಯಾದ ವುಹಾನ್‌ ನಗರ ಸಂಪೂರ್ಣ ಸ್ತಬದ್ಧವಾಗಿದ್ದು, ಜೈಲಿನಂತಾಗಿದೆ.

ಅಲ್ಲಿನ ತಮ್ಮ ನಾಗರಿಕರನ್ನು ಬಿಡುಗಡೆಗೊಳಿಸುವಂತೆ ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಚೀನಾಗೆ ಮನವಿ ಮಾಡಿವೆ. ವುಹಾನ್‌ನಿಂದ 500 ಕಿ.ಮೀ ದೂರದಲ್ಲಿರುವ ಗುವಾಂಗ್‌ಜೌವ್‌ ಪ್ರಾಂತ್ಯದ ಶಾಂಟೌ ನಗರದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹಾಗಾಗಿ ಆ ನಗರವನ್ನು ಸಂಪೂರ್ಣ ಬಂದ್‌ ಮಾಡಿದೆ ಚೀನಾ ಸರಕಾರ. ಕಾರುಗಳು, ಹಡಗುಗಳು ನಗರವನ್ನು ಪ್ರವೇಶಿಸುವಂತಿಲ್ಲ ಎಂದು ಘೋಷಿಸಲಾಗಿದೆ. ಚೀನಾದ ಒಟ್ಟು 29 ನಗರಗಳಲ್ಲಿ ಕೊರೊನಾ ದಾಳಿ ಇಟ್ಟಿದೆ ಎಂದು ಚೀನಾದ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಗಾವೊ ಫು ಹೇಳಿದ್ದಾರೆ.

ಚೀನಾದಲ್ಲಂತೂ ಜನ ಸಾಗರವೇ ಆಸ್ಪತ್ರೆಯತ್ತ ದಾವಿಸುತ್ತಿದೆ. ಮಾಸ್ಕ್ ಗಳಂತೂ ಲೆಕ್ಕವಿಲ್ಲದಷ್ಟು ಮಾರಾಟವಾಗುತ್ತಿವೆ. ಜನ ಕುಳಿತಲ್ಲೇ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಸಹಾಯಹಸ್ತ ನೀಡುವ ಧೈರ್ಯವೂ ಯಾರಿಗಾಗುತ್ತಿಲ್ಲ. ಹೀಗಾಗಿ ವುಹಾನ್ ಪ್ರಾಂತ್ಯ ಅಕ್ಷರಶ: ಭೂತದ ಪಟ್ಟಣವಾಗಿ ಹೋಗಿದೆ.

https://twitter.com/hashtag/coronavirus?src=hashtag_click

ಮತ್ತೊಂದು ಕಡೆಗಳಲ್ಲಿ ವೈದ್ಯರು ಏಕಾಏಕಿ ಕಾಣಿಸಿಕೊಂಡ ಈ ಮಹಾಮಾರಿಯಿಂದ ರೋಗಿಗಳನ್ನ ಕಾಪಾಡಲು ಹಗಲು ರಾತ್ರಿ ನಿದ್ರೆ ಇಲ್ಲ ಸಮಯ ಸಿಕ್ಕ ವೇಳೆ ಆಸ್ಪತ್ರೆಯಲ್ಲಿ ಚೇರ್ ಗಳ ಮೇಲೆ ಕುಳಿತಲ್ಲೇ ಮಾಸ್ಕ್ ಗಳನ್ನ ಧರಿಸಿಕೊಂಡು ಮಲಗುವ ಸಂಕಟ ಎದುರಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights