ಆನ್‌ಲೈನ್ ತರಗತಿ : ಗೊಂದಲಕ್ಕೆ ಎಡೆ ಮಾಡಿದ ಇಬ್ಬರ ಸಚಿವರ ಹೇಳಿಕೆ

ಆನ್‌ಲೈನ್ ತರಗತಿಗಳಲ್ಲಿ ರಾಜ್ಯ ಸರ್ಕಾರವು ಎರಡು ಧ್ವನಿಗಳಲ್ಲಿ ಮಾತನಾಡಿದ್ದು ಸದ್ಯ ಗೊಂದಲವನ್ನು ಸೃಷ್ಟಿ ಮಾಡಿದೆ.

ರಾಜ್ಯ ಸರ್ಕಾರ ಗುರುವಾರ ಆನ್‌ಲೈನ್ ತರಗತಿಗಳನ್ನು ನಡೆಸುವ ವಿಷಯದ ಬಗ್ಗೆ ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ್ದು, ಕ್ಯಾಬಿನೆಟ್‌ನೊಳಗಿನ ಸಮನ್ವಯದ ಕೊರತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

ಆನ್‌ಲೈನ್ ತರಗತಿಗಳ ನಿಷೇಧವನ್ನು 7 ನೇ ತರಗತಿಯವರೆಗೆ ವಿಸ್ತರಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ಈ ವಿಚಾರ ಇನ್ನೂ ಚರ್ಚೆಯಲ್ಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿ ಮಾಧುಸ್ವಾಮಿ ಹೇಳಿಕೆ ನಿರಾಕರಿಸಿದ್ದಾರೆ.

ಸದ್ಯ ಈ ವಿಚಾರ ಸಾಕಷ್ಟು ಗೊಂದಲಗಳಿಗೆ ಕಾರತಣವವಾಗಿದೆ. ಶಿಶುವಿಹಾರದಿಂದ 5 ನೇ ತರಗತಿಯವರೆಗೆ  ಕಲಿಯುವ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ಶಾಲೆಗಳು ನಡೆಸಬಾರದು ಎಂದು ಸುರೇಶ್ ಕುಮಾರ್ ಘೋಷಿಸಿದ ಒಂದು ದಿನದ ನಂತರ ಭಿನ್ನಾಭಿಪ್ರಾಯದ ಹೇಳಿಕೆಗಳು ಬಂದಿವೆ.

ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ವಿವರಿಸಿದ ಮಾಧುಸ್ವಾಮಿ, ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳು ನಿಷೇಧವನ್ನು 7 ನೇ ತರಗತಿಯವರೆಗೆ ವಿಸ್ತರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಎಂದಿದ್ದಾರೆ.

ಸುರೇಶ್ ಕುಮಾರ್ ಮತ್ತು ಮಾಧುಸ್ವಾಮಿ  ಅವರ ವಿಭಿನ್ನ ಹೇಳಿಕೆಗಳು  ಸಾರ್ವಜನಿಕರಲ್ಲಿ ಗೊಂದಲವನ್ನು ಹುಟ್ಟುಹಾಕಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಆನ್‌ಲೈನ್ ತರಗತಿ : ಗೊಂದಲಕ್ಕೆ ಎಡೆ ಮಾಡಿದ ಇಬ್ಬರ ಸಚಿವರ ಹೇಳಿಕೆ

 • August 21, 2020 at 6:50 pm
  Permalink

  Awesome issues here. I am very glad to look your article.
  Thank you so much and I’m looking forward to contact you.
  Will you please drop me a mail?

  Reply

Leave a Reply

Your email address will not be published.

Verified by MonsterInsights