ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ : ಮಡಿಕೇರಿಯಲ್ಲಿ ಪ್ರವಾಸಿಗರ ದಂಡು
ಇಂದು 2019 ಕಳೆದು 2020 ಗೆ ಎಲ್ಲರೂ ಕಾಲಿಟ್ಟಿದ್ದಾರ. ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಜನರಲ್ಲಿ ಎದ್ದು ಕಾಣುತ್ತಿದೆ.
ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡುಬರುತ್ತಿದ್ದು, ಪ್ರಕೃತಿಯ ತವರು. ಹಸಿರ ಸಿರಿಯ ನಡುವೆ ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ಕೊಡಗಿನಲ್ಲಂತು ಜನರು ಹರ್ಷದ ಹೊಳೆಯಲ್ಲಿ ತೇಲುತ್ತಿದ್ದಾರೆ. ಮಂಜಿನ ನಗರಿ ಮಡಿಕೇರಿ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಆಗಮಿಸುತ್ತಿದರೆ, ಅಬ್ಬಿ ಜಲಪಾತದಲ್ಲಿ 2019 ಕ್ಕೆ ವಿಧಾಯ ಹೇಳಿ ಅದ್ದೂರಿಯಾಗಿ 2020 ಸ್ವಾಗತಿಸಿದ್ದಾರೆ.
ಹಲವು ಸಿಹಿ ಕಹಿಗಳನ್ನೆಲ್ಲಾ ತನ್ನೊಡಲಲ್ಲಿ ಹುದುಗಿಸಿಕೂಂಡು ತೆರೆಮರೆಗೆ ಸರಿದ 2019 ಕ್ಕೆ ಗುಡ್ ಬೈ ಹೇಳಿ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಪ್ರಕೃತಿ ತವರು ಮಡಿಕೇರಿಗೆ ಲಗ್ಗೆಯಿಟ್ಟು ನಿಸರ್ಗದ ಮಡಿಲಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ. ಸುತ್ತಲೂ ಹಚ್ಚ ಹಸಿರಿನಿಂದ ಕಂಗೂಳಿಸೋ ಕಾನನದ ನಡುವೆ ಹಾಲ್ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕೋ ಜಲಧಾರೆ ಇನ್ನೇನು ಬೇಕು ಹೇಳಿ. ಇಷ್ಟು ಸಾಕಲ್ಲವೆ ಇಯರ್ ಎಂಡ್ ಅನ್ನು ಎಂಜಾಯ್ ಮಾಡಲು.