ಕರ್ನಾಟಕ ಎರಡನೇ ರೋಗಿಯ ಮೇಲೆ ಪ್ಲಾಸ್ಮಾ ಚಿಕಿತ್ಸೆ ಏಕೆ ಬಳಸಲಿಲ್ಲ? : ಇಲ್ಲಿದೆ ಮಾಹಿತಿ..

ಕೊರೊನಾಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರಪಿಗೆ ಒಳಗಾದ ಮೊದಲ ರೋಗಿ ಮೇ 14 ರಂದು ಬಲಿಯಾದರು. ಆದರೆ ಇವರಾದ ಬಳಿಕ ರಾಜ್ಯದಲ್ಲಿ ಯಾರಿಗೂ ಕೂಡ ಪ್ಲಾಸ್ಮಾ ಥೆರಪಿ ನೀಡಲಾಗಿಲ್ಲ. ಇದಕ್ಕೆ ಕಾರಣವೇನು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ಏಪ್ರಿಲ್ 22 ರಂದು ಈ ರೀತಿಯ ಚಿಕಿತ್ಸೆಯನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮೋದನೆ ಪಡೆದ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕವು ಒಂದು. ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ವಿಫಲವಾದ ಕಾರಣ 2ನೇ ಬಾರಿಗೆ ಪ್ಲಾಸ್ಮಾ ಪ್ರಯೋಗಮಾಡಲಾಗಿಲ್ಲ ಎಂದು ಹಲವರು ಭಾವಿಸಿದ್ದಾರೆ. ಆದರೆ ಹೃದಯ ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ 60 ವರ್ಷದ ಕೊರೊನಾ ಸೋಂಕಿತ ಪ್ಲಾಸ್ಮಾ ಥೆರಪಿಗೆ ಒಳಗಾದ ಬಳಿಕ ಮೇ 14 ರಂದು ಬಲಿಯಾದರು. ಈ ರೋಗಿ ಮರಣದಿಂದ ಪ್ಲಾಸ್ಮಾ ಥೆರಫಿ ವಿಫಲವಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಅರ್ಹ ರೋಗಿಯ ಕೊರತೆಯಿಂದಾಗಿ ರಾಜ್ಯದಲ್ಲಿ ಎರಡನೇ ಬಾರಿಗೆ ಪ್ರಾಯೋಗಿಕ ಕಾನ್ವೆಲೆಸೆಂಟ್ ಪ್ಲಾಸ್ಮಾ (ಸಿಪಿ) ಚಿಕಿತ್ಸೆಯನ್ನು ಕೊರೊನಾ ರೋಗಿಗೆ ನೀಡಲು ಪ್ರಯತ್ನಿಸಲಿಲ್ಲ ಎಂದು ಕರ್ನಾಟಕದ ವೈದ್ಯರು ತಿಳಿಸಿದ್ದಾರೆ.

ಹೌದು… ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಪ್ಲಾಸ್ಮಾವನ್ನು ದುರ್ಬಲ ರೋಗಿಗಳಿಗೆ ಚುಚ್ಚಲಾಗುತ್ತದೆ. ಈ ರೋಗಿಗಳು ತೀವ್ರ ನಿಗಾ ಘಟಕ (ಐಸಿಯು)  ಅಥವಾ ವೆಂಟಿಲೇಟರ್ ನಲ್ಲಿರುವ ನಿರ್ಣಾಯಕ ರೋಗಿಗಳಾಗಿರುತ್ತಾರೆ ಎಂದು ಆರೋಗ್ಯ ಇಲಾಖೆ ಈ ಹಿಂದೆ ತಿಳಿಸಿತ್ತು. ಆದರೆ ಪ್ಲಾಸ್ಮಾ ಥೆರಪಿಗೊಳಗಾದ ವ್ಯಕ್ತಿ ಸಾವಿನಿಂದ ಪ್ಲಾಸ್ಮಾ ವಿಫಲಗೊಂಡಿದೆ ಎಂದು ಹೇಳಲಾಗುವುದಿಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ನಿರ್ದೇಶಕ ಡಾ.ಆರ್.ಆರ್.ಜಯಂತಿ ಹೇಳಿದ್ದಾರೆ.

“ಇಲ್ಲಿಯವರೆಗೆ, ನಾವು ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಿಕೊಂಡು (ಒಬ್ಬ) ರೋಗಿಗೆ ಚಿಕಿತ್ಸೆ ನೀಡಲು ಮಾತ್ರ ಪ್ರಯತ್ನಿಸಿದ್ದೇವೆ. ಆರೋಗ್ಯ ಸೇವೆಗಳ ನಿರ್ದೇಶನಾಲಯದ ನಿರ್ದೇಶನದ ಪ್ರಕಾರ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡುವ ಮಾನದಂಡಗಳು ಬಹಳ ಸ್ಪಷ್ಟವಾಗಿವೆ. ನಾವು ಮಾನದಂಡಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ, ”ಎಂದು ಹೇಳಿದ್ದಾರೆ.

 

ಎಚ್‌ಸಿಜಿ ಆಸ್ಪತ್ರೆಗಳ ಈ ಚಿಕಿತ್ಸೆಯ ಮುಖ್ಯ ಸಂಶೋಧಕ ಐಕ್ರೆಸ್ಟ್‌ನ ನಿರ್ದೇಶಕ ಡಾ.ಗುರುರಾಜ್ ಮಾತನಾಡಿ, “ಪ್ಲಾಸ್ಮಾ ಚಿಕಿತ್ಸೆ ನೀಡಲು ಈಗಾಗಲೇ ಸೋಂಕಿನ ಮಿಡ್‌ಫೇಸ್ ತಲುಪಿದ ರೋಗಿಗಳನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಆದರೆ ಹೆಚ್ಚು ತೀವ್ರವಾದ ಉಸಿರಾಟದ ಲಕ್ಷಣಗಳು ತೊಂದರೆ ಇದ್ದರೆ ಚಿಕಿತ್ಸೆ ಸಾಧ್ಯವಾಗದು” ಎಂದಿದ್ದಾರೆ.  “ನಾವು ಒಬ್ಬ ರೋಗಿಗೆ ಚಿಕಿತ್ಸೆ ನೀಡಿದ್ದೇವೆ ಆದರೆ ದುರದೃಷ್ಟವಶಾತ್ ರೋಗಿ ಸಾವನ್ನಪ್ಪಿದ್ದಾನೆ. ಆ ನಿರ್ದಿಷ್ಟ ರೋಗಿಯೊಂದಿಗೆ ಏನಾಯಿತು..? ಚಿಕಿತ್ಸೆ ವಿಫಲವಾಗಲು ಕಾರಣಗೇಳು ಎಂಬುದರ ಬಗ್ಗೆ ಹಾಗೂ  ಚಿಕಿತ್ಸೆಯ ಪ್ರತಿಯೊಂದು ಹಂತದ ಸನ್ನಿವೇಶಗಳ ಈಗ ಮೌಲ್ಯಮಾಪನ ಮಾಡುತ್ತಿದ್ದೇವೆ. ” ಆದಾಗ್ಯೂ, ಪ್ರಯೋಗವು ವಿಫಲವಾಗಿದೆ ಎಂದು ಇದರ ಅರ್ಥವಲ್ಲ ಎಂದು ಅವರು ಹೇಳಿದರು.

ಪ್ಲಾಸ್ಮಾ ವಿಶ್ವದಾದ್ಯಂತ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದೆ. ದುರದೃಷ್ಟವಶಾತ್ ನಮಗೆ, ಮೊದಲ ಪ್ಲಾಸ್ಮಾ ಚಿಕಿತ್ಸೆಗೆ ರೋಗಿ ಆರಂಭದಲ್ಲಿ ಪ್ರತಿಕ್ರಿಯಿಸಿದ್ದರೂ ಸಹ ಬದುಕುಳಿಯಲಿಲ್ಲ. ಕ್ಲಿನಿಕಲ್ ಸನ್ನಿವೇಶದಲ್ಲಿ ಇದು ಒಂದು ಸಂಕೀರ್ಣ ವಿಷಯವಾಗಿದೆ. ನಾನು ಯಾವಾಗಲೂ ಲ್ಯಾಬ್‌ನಲ್ಲಿ ಕುಳಿತು ನಿಖರವಾಗಿ ಏನು ಮಾಡಬೇಕೆಂದು ಹೇಳಬಲ್ಲೆ. ಆದರೆ, ಕ್ಲಿನಿಕಲ್ ಅಭ್ಯಾಸದ ವಿಷಯಕ್ಕೆ ಬಂದಾಗ, ರೋಗಿಯಿಂದ ರೋಗಿಗೆ ಅನುಗುಣವಾಗಿ ಹಲವಾರು ಸಂಗತಿಗಳು ಸ್ಫೋಟಗೊಳ್ಳುತ್ತವೆ. ವಿಶೇಷವಾಗಿ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಎಲ್ಲಾ ರೋಗಿಗಳು ಒಂದೇ ವಿಧವಾದ ಒಂದೇ ರೀತಿಯ ಕಾಯಿಲೆಗಳನ್ನು ಹೊಂದಿರುವುದಿಲ್ಲ. ಆಗ ಚಿಕಿತ್ಸೆಯ ಫಲ ಒಂದೇ ರೀತಿ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಈ ಚಿಕಿತ್ಸೆಯ ವಿಧಾನವನ್ನು ಬಳಸಲು ಸರಿಯಾದ ರೋಗಿಗಳ ಪ್ರೊಫೈಲ್ ಪಡೆಯಲು ನಾವು ವೈದ್ಯರೊಂದಿಗೆ ನಿರಂತರ ಚರ್ಚೆ ನಡೆಸುತ್ತೇವೆ. ಈ ಚಿಕಿತ್ಸೆಯ ಮೂಲಕ, ಲಸಿಕೆ ಮಾಡುವಂತೆ  ವೈದ್ಯರು ಪ್ರಯತ್ನಿಸುತ್ತಿದ್ದಾರೆ” ಎಂದು ಡಾ ಗುರುರಾಜ್ ವಿವರಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights