ಕುಮಾರಸ್ವಾಮಿ ಕಣ್ಣೀರು ವಿಕ್ಸ್ ನ‌ ಕಣ್ಣೀರಿರಬೇಕೆಂದು ಸದಾನಂದಗೌಡ ವ್ಯಂಗ್ಯ…

ಜೆಡಿಎಸ್ ಸಮಾವೇಶದಲ್ಲಿ ಕುಮಾರಸ್ವಾಮಿ ಕಣ್ಣೀರು ವಿಕ್ಸ್ ನ‌ ಕಣ್ಣೀರಿರಬೇಕೆಂದು ಬಿಜೆಪಿಯ ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ಕೆ.ಆರ್.ಪೇಟೆಯ ಪಕ್ಷದ ಪ್ರಚಾರದ ವೇಳೆ ಸದಾನಂದಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬನನ್ನು ಒಮ್ಮೆ ಫೂಲ್‌ ಮಾಡಬಹುದು, ಎರಡು ಸಾರಿ ಫೂಲ್ ಮಾಡಬಹುದು, ಮೂರು ಸಾರಿ ಫೂಲ್ ಮಾಡಬಹುದು. ಆದ್ರೆ ಅದೊಂದು ಹೆರಿಟೇಜ್, ದೇವೇಗೌಡ್ರಿಂದ ಹಿಡಿದು ಅಪ್ಪಮಕ್ಕಳಿಗೆಲ್ಲಾ ಕಣ್ಣೀರಾಕೋದು ಹುಟ್ಟುಗುಣ. ಕುಮಾರಸ್ವಾಮಿ ಕಣ್ಣೀರಾರೋದ್ರ ರಹಸ್ಯ ಜಮೀರ್ ಗೆ ಚೆನ್ನಾಗಿ ಗೊತ್ತು. ಗಳಸ್ಯ ಕಂಠಸ್ಥ್ಯ ನಂತೆ ೨೦ ವರ್ಷದ ಫ್ರೆಂಡ್ಸಿಶಿಫ್ ಇದ್ದ ಚೆನ್ನಾಗಿ ಜಮೀರ್ ಹೇಳಿದ್ದಾರೆ. ಬಹುಶಃ ಅದು ವಿಕ್ಸ್ ನ ಕಣ್ಣೀರೇ ಇರಬೇಕೆಂದು ವ್ಯಂಗ್ಯವಾಡಿದ್ದಾರೆ.

ಜನ‌ ಇದನ್ನ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ಜನ ಪ್ರಜ್ಞಾವಂತರಿದ್ದಾರೆ‌‌‌ ಒಳ್ಳೆಯ ರೀತಿಯ ನಿರ್ಧಾರ ತಗೊಂಡು ಮತದಾನ ಮಾಡ್ತಾರೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.