ಜೂನ್ 21 ರಂದು ಸೂರ್ಯಗ್ರಹಣ; ಭಾರತದಲ್ಲಿ ಗೋಚರಿಸುತ್ತಾ ಗ್ರಹಣದ ಛಾಯೆ?

ಜೂನ್ 21 ರಂದು ಸೂರ್ಯ ಗ್ರಹಣವು ಸಂಭವಿಸಲಿದೆ. ಈ ಸೂರ್ಯ ಗ್ರಹಣವು ಬೆಂಕಿಯ ಉಂಗುರವನ್ನು ಧರಿಸಿದಂತೆ ಗೋಚರಿಸಲಿದ್ದು, ಗ್ರಹಣದ ಬಗೆಗೆ ಆಸಕ್ತಿ ಹೊಂದಿರುವವರಿಗೆ ಅಚ್ಚರಿಯ ರೀತಿಯಲ್ಲಿರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭಾರತ ಕೂಡ ಸೂರ್ಯ ಗ್ರಹರಣಕ್ಕೆ ಸಾಕ್ಷಿಯಾಗಲಿದ್ದು, ಭಾರತೀಯರೂ ಗ್ರಹಣವನ್ನು ವೀಕ್ಷಿಸಬಹುದು. ದೇಶದ ಹೆಚ್ಚಿನ ಭಾಗಗಳಲ್ಲಿ ಗ್ರಹಣವು ಗೋಚರಿಸಲಿದ್ದು, ಈ ಗ್ರಹಣವು ಕೆಲವು ಭಾಗಗಳಲ್ಲಿ ಸಂಪೂರ್ಣ ಗ್ರಹಣವಾಗಿ ಘೋಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರ್ಯಗ್ರಹಣದ ಮಾರ್ಗವು ರಾಜಸ್ಥಾನದ ಘರ್ಸಾನಾ ಬಳಿ ಬೆಳಿಗ್ಗೆ 10.12ರ ಸುಮಾರಿಗೆ ಪ್ರಾರಂಭವಾಗಲಿದೆ. ಸಂಪೂರ್ಣ ಗ್ರಹಣದ ಹಂತವು ಬೆಳಿಗ್ಗೆ 11.49 ರ ಸುಮಾರಿಗೆ ಪ್ರಾರಂಭವಾಗಿ ಬೆಳಿಗ್ಗೆ 11.50 ಕ್ಕೆ ಕೊನೆಗೊಳ್ಳಲಿದೆ ಎಂದು ಬಿರ್ಲಾ ಪ್ಲಾನೆಟೇರಿಯಂನ ನಿರ್ದೇಶಕ ಡೆಬಿ ಪ್ರಸಾದ್ ಡುಯಾರಿ ತಿಳಿಸಿದ್ದಾರೆ.

ರಾಜಸ್ಥಾನದ ಸೂರತ್‌ಗಲ್ ಮತ್ತು ಅನುಪ್‌ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ ಹಾಗೂ ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದ ಸ್ಥಳಗಳಿಂದ ಒಂದು ನಿಮಿಷಗಳ ಕಾಲ ಗ್ರಹಣದ ಬೆಂಕಿಯ ಉಂಗುರದ ಗೋಚರಿಸುತ್ತದೆ.

ಅಲ್ಲದೆ, ಕಳೆದ ವರ್ಷ ಡಿಸೆಂಬರ್ 26 ರಂದು ಗೋಚರಿಸಿದ್ದ ಬೆಂಕಿಯ ಉಂಗುರದ ರೀತಿಯಲ್ಲಿ ಈ ಬಾರಿ ಇರುವುದಿಲ್ಲ. ಸ್ವಲ್ಪ ಕಿರಿದಾಗಿರುತ್ತದೆ ಎಂದು ಡುಯಾರಿ ಹೇಳಿದರು.

“ಗ್ರಹಣದ ಸಮಯದಲ್ಲಿ ಚಂದ್ರನು ತನ್ನ ಅಂಡಾಕಾರದ ಕಕ್ಷೆಯಲ್ಲಿ ಭೂಮಿಯಿಂದ ದೂರದಲ್ಲಿರಬೇಕು. ಇಲ್ಲವಾದಲ್ಲಿ ಸೂರ್ಯನ ಪ್ರಕರತೆಯನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ಚಂದ್ರನ ಕತ್ತಲೆಯ ಸುತ್ತಲೂ ಕಿರಿದಾದ ಬೆಳಕಿನ ಬೆಳಕು ಉಂಟಾಗುತ್ತದೆ. ಇದು ಬೆಂಕಿಯ ಉಂಗುರವನ್ನು ಸೃಷ್ಟಿಸಿದಂತೆ ಗೋಚರಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಭಾಗಶಃ ಗ್ರಹಣ ಬೆಳಿಗ್ಗೆ 10.46ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 2.17ಕ್ಕೆ ಕೊನೆಗೊಳ್ಳಲಿದೆ. ನವದೆಹಲಿಯಲ್ಲಿ ಬೆಳಿಗ್ಗೆ 10.20 ರಿಂದ ಮಧ್ಯಾಹ್ನ 1.48 ರವರೆಗೆ, ಮುಂಬೈಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.27 ರವರೆಗೆ, ಚೆನ್ನೈನಲ್ಲಿ ಬೆಳಿಗ್ಗೆ 10.22ರಿಂದ ಮಧ್ಯಾಹ್ನ 1.41 ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಿಗ್ಗೆ 10.13 ರಿಂದ ಮಧ್ಯಾಹ್ನ 1.31ರ ನಡುವೆ ಗ್ರಹಣದ ಛಾಚೆ ಗೋಚರಿಸಲಿದೆ.

ಸೂರ್ಯ ಗ್ರಹಣ - ವಿಕಿಪೀಡಿಯ

ಜೂನ್ 21 ರ ಸೂರ್ಯ ಗ್ರಹಣವು ಆಫ್ರಿಕಾದಲ್ಲಿ ಮೊದಲು ಗೋಚರಿಸಲಿದೆ. ನಂತರ ದಕ್ಷಿಣ ಸುಡಾನ್, ಇಥಿಯೋಪಿಯಾ, ಯೆಮೆನ್, ಓಮನ್, ಸೌದಿ ಅರೇಬಿಯಾ, ಹಿಂದೂ ಮಹಾಸಾಗರ ಮತ್ತು ಪಾಕಿಸ್ತಾನದ ಮೂಲಕ ರಾಜಸ್ಥಾನದಲ್ಲಿ ಗೋಚರಿಸಲಿದ್ದು ಭಾರತಕ್ಕೆ ಪ್ರವೇಶಿಸಲಿದೆ. ಈ ಸಂಪೂರ್ಣ ಗ್ರಹಣಕ್ಕೆ ಈ ಎಲ್ಲಾ ದೇಶಗಳು ಸಾಕ್ಷಿಯಾಗಲಿದ್ದಾರೆ. ಗ್ರಹಣವು ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ ಕೊನೆಗೊಳ್ಳುವುದಕ್ಕೂ ಮುನ್ನ ಟಿಬೆಟ್, ಚೀನಾ, ತೈವಾನ್ ‌ಗಳಲ್ಲಿಯೂ ಗೋಚರಿಸಲಿದೆ.

ಸೂರ್ಯ, ಚಂದ್ರ ಮತ್ತು ಭೂಮಿ- ಮೂರು ಸರಳ ರೇಖೆಯಲ್ಲಿ ಮತ್ತು ಬಹುತೇಕ ಒಂದೇ ಸಮತಲದಲ್ಲಿ ಬಂದಾಗ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಮತಲದಲ್ಲಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ.

ಈ ಬಾರಿಯ ಸೂರ್ಯ ಗ್ರಹಣವು ಜೂನ್ 21 ರಂದು ಸಂಭವಿಸಲಿದ್ದು. ಭಾರತೀಯರೂ ಗ್ರಹಣವನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.