ಡೆತ್ ನೋಟ್ ವಾಟ್ಸಪ್ ಸ್ಟೇಟಸ್ ಗೆ ಹಾಕಿದ ಯುವಕ ಶವವಾಗಿ ಪತ್ತೆ….!

ಡೆತ್ ನೋಟ್ ವಾಟ್ಸಪ್ ಸ್ಟೇಟಸ್ ಗೆ ಹಾಕಿದ ಯುವಕ ಸಂಗಮೇಶ್ (೨೨) ಶವವಾಗಿ ಪತ್ತೆಯಾಗಿದ್ದಾನೆ.

ಡೆತ್ ನೋಟ್ ವಾಟ್ಸಪ್ ಸ್ಟೇಟಸ್ ಹಾಕಿದ ಯುವಕ ಕೆಲ ದಿನಗಳಿಂದ ನಾಪತ್ತೆಯಾಗಿದ್ದ, ಸದ್ಯ ಆತನ ಮೃತ ದೇಹ ಘಟಪ್ರಭಾ ನದಿಯಲ್ಲಿ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿಗಳು ಬೋಟ್ ಮೂಲಕ ಶವ ಹೊರ ತೆಗೆದಿದ್ದಾರೆ. ಸೆಪ್ಟೆಂಬರ್ ೨೮ರಂದು ಸ್ಟೇಟಸ್ ಗೆ ಡೆತ್ ನೋಟ್ ಹಾಕಿ ನಾಪತ್ತೆಯಾಗಿದ್ದ ಯುವಕ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿ ಕೆಡಿ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದನು.

ಚಿಚಖಂಡಿ ಕೆಡಿ ಸೇತುವೆಯ ಬಳಿಯ ಘಟಪ್ರಭಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಡೆತ್ ನೋಟ್ ನಲ್ಲಿ ನನ್ನ ಪ್ರೀತಿ ನನಗೆ ಸಿಗಲಿಲ್ಲ, ಕುಟುಂಬಸ್ಥರು ಬೇರೆ ಮದುವೆ ಮಾಡಲು ಹೊರಟ್ರು ಎಂದು ಬರೆದಿದ್ದನು. ಜೊತೆಗೆ ಮದುವೆ, ಕೌಟುಂಬಿಕ ಕಿರುಕುಳದಿಂದ ಮನನೊಂದಿದ್ದನು. ಲೋಕಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights