ನನ್ನ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ : ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟ

ಇಡಿ ಅಧಿಕಾರಿಗಳಿಂದ ಕಾಂಗ್ರೆಸ್ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿಚಾರಣೆ ಜೊತೆಗೆ ಸದ್ಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಸಮನ್ಸ್ ನೀಡಲಾಗಿದೆ. ನನ್ನ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ವಿಚಾರದಲ್ಲಿ 180 ಜನರಿಗೆ ವಿಚಾರಣೆಗೆ ಕರೆದಿದ್ದಾರೆ. ಅದರಲ್ಲೂ ತಮ್ಮನ್ನ ಕೂಡ ಕರೆದಿದ್ದಾರೆಂದು ಹೆಬ್ಬಾಳ್ಕರ್ ಹೇಳಿದಿದ್ದಾರೆ.

ಆದರೆ ಯಾವ ವಿಚಾರಕ್ಕೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಬೆಂಗಳೂರಿನಲ್ಲಿ ವಿಚಾರಣೆಗೆ ಬರುತ್ತೇನೆ. ಇಲ್ಲವೇ ಬೆಳಗಾವಿಯಲ್ಲೇ ವಿಚಾರಣೆ ನಡೆಸಿ ಎಂದು ಕೇಳಿಕೊಂಡಿದ್ದೇನೆ. ಆದರೆ ಇನ್ನೂ ಇಡಿಯಿಂದ ಉತ್ತರ ಬಂದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ. ಹಾಗಿದ್ದರೂ ಯಾಕೆ ಕರೆದಿದ್ದಾರೆ ಎನ್ನುವುದು ವಿಚಾರಣೆಗೆ ಹಾಜರಾದ ಬಳಿಕ ಗೊತ್ತಾಗಬೇಕಷ್ಟೇ ಎಂದು ಹೇಳಿದರು. ಡಿಕೆ ಶಿವಕುಮಾರ್ ಅಕೌಂಟ್ ನಿಂದ ಹೆಬ್ಬಾಳ್ಕರ್‍ ಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಇಡಿಗೆ ದಾಖಲೆ ಲಭ್ಯವಾದ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಿದೆ ಎನ್ನಲಾಗುತ್ತಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.