ನಿಮ್ಮನ್ನ ಗೆಲ್ಲಿಸಿದ್ದಕ್ಕೆ ರೈತರಿಗೆ ಏನು ಮಾಡಿದ್ರಿ ? : ಹೆಚ್.ವಿಶ್ವನಾಥ್ಗೆ ಗ್ರಾಮಸ್ಥರ ತರಾಟೆ…
ಹುಣಸೂರು ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪ್ರಚಾರದ ವೇಳೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.
ಹುಣಸೂರು ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮೊನ್ನೆ ದೊಡ್ಡಹೆಜ್ಜೂರು ಗ್ರಾಮದಲ್ಲಿ ವಿಶ್ವನಾಥ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಶ್ರವಣನಹಳ್ಳಿಯಲ್ಲಿ ಹಳ್ಳಿಹಕ್ಕಿಯನ್ನ ಮತದಾರರು ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನ ಗೆಲ್ಲಿಸಿದ್ದಕ್ಕೆ ರೈತರಿಗೆ ಏನು ಮಾಡಿದ್ರಿ ? ಎಂದು ಶ್ರವಣನಹಳ್ಳಿಯಲ್ಲಿ ವಿಶ್ವನಾಥ್ಗೆ ಮತದಾರ ಪ್ರಶ್ನೆ ಹಾಕಿದ್ದಾರೆ.ಜೊತೆಗೆ ನಮ್ಮನ್ನ ಕೇಳದೆ ಏಕೆ ರಾಜಿನಾಮೆ ನೀಡಿದ್ರಿ ಅಂತ ತರಾಟೆ ತೆಗೆದುಕೊಂಡಿದ್ದಾರೆ.
ಹೌದು ಹೌದು ಎಂದು ಸಮಾಧಾನ ಮಾಡಲು ಯತ್ನಿಸಿದ ವಿಶ್ವನಾಥ್ ಗೆ ಗ್ರಾಮಸ್ಥರು ಪುನ: ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಗೊಂಡಿದೆ.