ಬೆಂಗಳೂರಿನಲ್ಲಿ ಇಂದೂ ಕೂಡ NPR-NRC-CAA ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ…
CAA NRC ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದೂ ಕೂಡ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಬಳಿ ಸೇರಿದ ವಿದ್ಯಾರ್ಥಿಗಳು CAA NRC ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ವಿದ್ಯಾರ್ಥಿಗಳು ಅಂಬೇಡ್ಕರ್ ಫೋಟೊ ಹಿಡಿದು ಪೌರತ್ವ ಕಾಯ್ದೆಯ ವಿರುದ್ಧದ ಘೋಷಣೆಗಳುಳ್ಳ ಭಿತ್ತಿಪತ್ರಗಳೊಂದಿಗೆ ಸಂಜೆ 5 ಗಂಟೆಗೆ ಪ್ರತಿಭಟನೆ ಆರಂಭಿಸಿದ್ದಾರೆ. ಮುಂದಿನ ಸಾಲಿನಲ್ಲಿ ಪರಸ್ಪರ ಕೈ ಕೈ ಹಿಡಿದು ಪ್ರತಿಭಟನೆ ಮುನ್ನಡೆಸಿದರೆ ಅವರ ಹಿಂದೆ ನಾಗರಿಕರು ಬೆಂಬಲ ನೀಡಿದ್ದಾರೆ.
ಜಯನಗರ ಎನ್ಎಂಕೆಆರ್ವಿ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಮಾತನಾಡಿ “ಇಂದಿನ ಮಕ್ಕಳಾದ ನಾವು ನಾಳಿನ ಪ್ರಜೆಗಳು. ಹಾಗಾಗಿ ಅಸಂವಿಧಾನಕ ಹಾಗು ಬೇಧ ಭಾವ ಉತ್ತೇಜಿಸುವ NPR-NRC-CAA ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಬೆಂಗಳೂರಿನ ವಿದ್ಯಾರ್ಥಿಗಳು ವಿರೋಧಿಸುತ್ತೇವೆ” ಎಂದು ತಿಳಿಸಿದ್ದಾರೆ.
ದೇಶದಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಐಕ್ಯಮತ್ಯದೊಂದಿಗೆ ನಾವಿಂದು ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಧರ್ಮದ ಆಧಾರದಲ್ಲಿ ಈ ದೇಶದ ಒಗ್ಗಟ್ಟನ್ನು ಒಡೆಯುವ CAA NRCಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.