ಮೆಸ್ಕಾಂ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ತುಳಿದು ಕಾರ್ಮಿಕ ಸಾವು

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ತುಳಿದು ಕೂಲಿ ಕಾರ್ಮಿಕ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ನಡೆದಿದೆ.

ಮಂಜುನಾಥ್(25) ಮೃತ ದುರ್ದೈವಿ. ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಬೆಳಗ್ಗೆಯೇ ಸ್ಥಳೀಯರು ಮೆಸ್ಕಾಂ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದ್ರೂ ಸರಿ ಮಾಡಿರಲಿಲ್ಲ. ಈ ಮಧ್ಯೆ ಇಂದು ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಕಾರ್ಮಿಕ ಮಂಜುನಾಥ್ ಜಮೀನಿನಿಂದ ಬರುವ ವೇಳೆಯಲ್ಲಿ ವಿದ್ಯುತ್ ತಂತಿಯನ್ನ ತುಳಿದಿದ್ದಾರೆ. ಆಗಲೂ ವಿದ್ಯುತ್ ಪ್ರವಹಿಸ್ತಿದ್ದರಿಂದ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಚಾರ ಗೊತ್ತಾದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ, ಮೆಸ್ಕಾಂ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಸೂಕ್ತ ಪರಿಹಾರ ನೀಡುವರೆಗೂ ಮೃತದೇಹ ಸ್ಥಳದಿಂದ ತೆಗೆಯೋದಿಲ್ಲ ಅಂತಾ ಸ್ಥಳೀಯರು ಪಟ್ಟು ಹಿಡಿದ್ರು, ಒಟ್ಟಿನಲ್ಲಿ ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷಕ್ಕೆ ಒಬ್ಬ ಅಮಾಯಕ ಜೀವ ಬಲಿಯಾಗಿದ್ದು, ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.