ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ: ನಟಿ ರಾಗಿಣಿ ದ್ರಿವೇದಿ ಬಂಧನ

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಇಂದು (ಶುಕ್ರವಾರ) ಬಂಧಿಸಿದ್ದಾರೆ.

ಇಂದು ಬೆಳಗ್ಗೆ ನಟಿ ರಾಗಿಣಿಯನ್ನು ವಿಚಾರಣೆಗೆ ಕರೆತಂದಿದ್ದ ಸಿಸಿಬಿ ಅಧಿಕಾರಿಗಳು, ಸುಮಾರು ಏಳು ಗಂಟೆಗಳ ಸತತ ವಿಚಾರಣೆ ಬಳಿಕ ನಟಿಯನ್ನು ವಶಕ್ಕೆ ಪಡೆಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ರಿವೇದಿಯವರು ಆಪ್ತ ರವಿಶಂಕರ್‌ ಹಾಗೂ ಸಂಜನಾ ಅವರ ಒಡನಾಡಿ ರಾಹುಲ್‌ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರು.

ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಟಿ ರಾಗಿಣಿ ಅವರ ಮೊಬೈಲ್‌ನಲ್ಲಿ ದಾಖಲಾಗಿದ್ದ ಮಾಹಿತಿಯನ್ನು ಪಡೆದುಕೊಂಡಿದ್ದು ಅದರೊಂದಿಗೆ ಅವರ ಮತ್ತು ಡ್ರಗ್ಸ್ ಜಾಲದ ನಡುವಿನ ನಂಟಿನ ಸಂಬಂಧ ಸಾಕಷ್ಟು ಪ್ರಶ್ನೆಗಳೊಂದಿಗೆ ರಾಗಿಣಿಯವರ ತನಿಖೆ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸಾವಿಗೆ ಡ್ರಗ್ಸ್‌ ಕಾರಣ; ಹೆಚ್‌ಡಿಕೆಯನ್ನೂ ವಿಚಾರಣೆಗೊಳಪಡಿಸಿ: ಪ್ರಮೋದ್ ಮುತಾಲಿಕ್‌

ನಿನ್ನೆ, ರಾಗಿಣಿಯವರ ಆಪ್ತ ಆರ್‌ಟಿಒ ಕಚೇರಿಯಲ್ಲಿ ಎರಡನೇ ದರ್ಜೆ ಗುಮಾಸ್ತನಾಗಿ ಕಾರ್‍ಯ ನಿರ್ವಹಿಸುತ್ತಿದ್ದ ರವಿ ಶಂಕರ್‌ನನ್ನು ಬಂಧಿಸಲಾಗಿದ್ದು, ಆತ ಡ್ರಗ್ಸ್‌ ಮಾರಟದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಆ ಕಾರಣಕ್ಕಾಗಿ ಆತನನ್ನು ಸೇವೆಯಿಂದ ಅಮಾನತು ಮಾಡುವಂತೆ ಸರಕಾರದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

Spread the love

Leave a Reply

Your email address will not be published. Required fields are marked *