ಮೈಸೂರು ಅರಮನೆ ಅಂಗಳದಲ್ಲಿ ಆಯುಧ ಪೂಜೆ ಸಂಭ್ರಮ : ದಸರಾ ಆನೆಗಳಿಗೂ ಪೂಜೆ….

ಮೈಸೂರಿನ ಅರಮನೆ ಅಂಗಳದಲ್ಲಿ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಆಯುಧ ಪೂಜೆ ಹಿನ್ನಲೆಯಲ್ಲಿ ಗಜಪಡೆಯ ಆನಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ಈ ಬಾರಿ ಸಚಿವ ಸೋಮಣ್ಣ ಸೂಚನೆ ಮೇರೆಗೆ ಶೋಭ ಕರಂದ್ಲಾಜೆಯಿಂದ ಪೂಜೆ ಮಾಡಿಸಲಾಗುತ್ತಿದೆ. ಅರಣ್ಯ ಇಲಾಖೆ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಡೆಗೆ ಪೂಜೆ ಮಾಡಲಾಯಿತು. ಗಣ್ಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಂಪ್ರದಾಯದಂತೆ ಫಲತಾಂಬೂಲ ನೀಡಿ ಪೂಜೆ ನೇರವೇರಿಸಲಾಯಿತು.

ದಸರಾ ಮೆರವಣಿಗೆಯಲ್ಲಿ ಸುಗಮವಾಗಿ ಆನೆಗಳು ಸಾಗಲಿ‌ಎಂದು ಪೂಜೆ ಮಾಡಲಾಯಿತು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ೧೧ ಆನೆಗಳಿಗೆ ಅಕ್ಕಿ, ಬೆಲ್ಲ,ಕಬ್ಬು ತಿನ್ನಿಸಿ ಸತ್ಕಾರ ನೀಡಿದ ಸಂಸದೆ ಕು. ಶೋಭಾ ಕರಂದ್ಲಾಜೆ ಅವರು ಪೂಜೆ ಮಾಡಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights