ರಾಜ್ಯದಲ್ಲಿಂದು 34 ಕೊರೊನಾ ಕೇಸ್ ಪತ್ತೆ : ಒಂದು ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಸಂಜೆ ವೇಳೆ 34 ಕೇಸ್ ಪತ್ತೆಯಾಗಿದ್ದು, ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 959ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
ಹೌದು… ಸಂಜೆಯ ಹೆಲ್ತ್ ಬುಲಿಟಿನ್ ಪ್ರಕಾರ ಕಳೆದ 24 ಗಂಟೆಯಲ್ಲಿ, ರಾಜ್ಯದಲ್ಲಿ ಒಟ್ಟು 34 ಕೊರೊನಾ ಪ್ರಕರಣಗಳು ದಾಖಲಾಗಿವೆ. ಬೀದರ್ 12, ಹಾಸನ 4, ಬೆಂಗಳೂರು 2, ಕಲಬುರಗಿ 8, ದಾವಣಗೆರೆ, ವಿಜಯಪುರ, ಉತ್ತರ ಕನ್ನಡದ ತಲಾ ಇಬ್ಬರಿಗೆ, ದಕ್ಷಿಣ ಕನ್ನಡ, ಬಳ್ಳಾರಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಈ ಪೈಕಿ 7 ಜನರು ಹೊರ ರಾಜ್ಯದಿಂದ ಬಂದಿರುವವರಾಗಿದ್ದಾರೆ. ಇತ್ತ ರೋಗಿ-928 ಬೆಂಗಳೂರಿನ 37 ವರ್ಷದ ನರ್ಸ್ ಆಗಿದ್ದಾರೆ.
ಇಲ್ಲಿಯವರೆಗೆ ರಾಜ್ಯದಲ್ಲಿ 959 ಸೋಂಕಿತರ ಪೈಕಿ 33 ಜನ ಕೊರೊನಾದಿಂದ ಸಾವನ್ನಪ್ಪಿದ್ದು, 451 ಡಿಸ್ಚಾರ್ಜ್ ಆಗಿದ್ದಾರೆ. ಉಳಿದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೇ ನೀಡಲಾಗುತ್ತಿದೆ. ಜೊತೆಗೆ ಕಲಬುರಗಿಯಲ್ಲಿ ಓರ್ವ ಕೊರೊನಾಗೆ ಬಲಿಯಾಗಿದ್ದಾನೆ.ಕಲಬುರಗಿಯ ಕಂಟೈನ್ಮೆಂಟ್ ಝೋನ್ ಸಂಪರ್ಕದಲ್ಲಿದ್ದ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಅವರ ಕೋವಿಡ್-19 ರಿಪೋರ್ಟ್ ಪಾಸಿಟಿವ್ ಬಂದಿದೆ. ಈ ಮೂಲಕ ಕಲಬುರಗಿಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರಿಗೆ ಏಪ್ರಿಲ್ 30ರಂದು ಸೋಂಕು ದೃಢವಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಾವಿನ ಅಧಿಕೃತ ಘೋಷಣೆ ಸಾಧ್ಯತೆ ಇದ್ದು, ದ.ಕ ಸಂಭವಿಸಿದ 4ನೇ ಕೊರೊನಾ ಸಾವು ಇದಾಗಿದೆ.
ಹೊಸದಾಗಿ ದಾಖಲಾದ 26 ಸೋಂಕಿತರಲ್ಲಿ 4 ಜನ ಪುರುಷರಿದ್ದು, ಓರ್ವ ವೃದ್ಧ, 12 ಜನ ಮಹಿಳೆಯರು, ಇಬ್ಬರು ಬಾಲಕರು ಮತ್ತು 6 ಜನ ಬಾಲಕಿ, ಯುವಕರು 6 ಜನ, ಯುವತಿಯರು 3 ಜನ ಇದ್ದಾರೆ. ಅತೀ ಹೆಚ್ಚು ಮಹಿಳೆಯರೇ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಕ್ಕಳಿಗೂ ಸೋಂಕು ಅಧಿಕ ಸಂಖ್ಯೆಯಲ್ಲಿ ಹರಡಿದೆ.

