ರಾಜ್ಯದಲ್ಲಿ ಒಂದೇ ದಿನ 38 ಹೊಸ ಕೊರೊನಾ ಕೇಸ್ : 353 ಕ್ಕೇರಿದ ಸೋಂಕಿತರ ಸಂಖ್ಯೆ!
ರಾಜ್ಯದಲ್ಲಿ 8 ಜಿಲ್ಲೆಗಳು ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದ್ದು, ಸದ್ಯ ಹೊಸದಾಗಿ 38 ಕೊರೊನಾ ಪ್ರಕರಣಗಳು ಪತ್ತೆಯಾಗಿ ಜನರಲ್ಲಿ ಆತಂಕ ಹೆಚ್ಚಿಸಿದೆ.
ಮತ್ತೊಂದು ಆತಂಕಕಾರಿ ವಿಚಾರ ಅಂದರೆ ಮೈಸೂರಿನ ಜುಬಿಲಿಯನ್ಸ್ ಕಾರ್ಖಾನೆಯ ಸಂಪರ್ಕದಲ್ಲಿದ್ದ 12 ಜನರಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ಬಳ್ಳಾರಿಯ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬಳ್ಳಾರಿಯಲ್ಲಿ ಒಟ್ಟು 13 ಪ್ರಕರಣ ದಾಖಲಾಗಿವೆ. ದಕ್ಷಿಣ ಕನ್ನಡ ಭಾಗದ ಉಪ್ಪಿನಂಗಡಿಯ 39 ವರ್ಷದ ಓರ್ವ ವ್ಯಕ್ತಿ , ಮಂಡ್ಯದ ಮಳವಳ್ಳಿಯ 3 ಜನ, ಬೀದರ್ 1, ವಿಜಯಪುರ 2, ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 3, ಬೆಂಗಳೂರಿನಲ್ಲಿ 9 ಜನ ಸೋಂಕಿತರು ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹೊಸದಾಗಿ ದಾಖಲಾದ 9 ಜನರ ಪೈಕಿ 6 ಜನರ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಹೀಗಾಗಿ ಸೋಂಕಿತರ ಮೂಲ ಕಂಡು ಹಿಡಿಯುವುದು ಕಷ್ಟವಾಗಿದೆ.
ಒಟ್ಟಾರೆ ರಾಜ್ಯದಲ್ಲಿ ಒಂದೇ ದಿನ 38 ಕೇಸ್ ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 353 ಕ್ಕೇರಿದೆ. ಇವರಲ್ಲಿ 13 ಸಾವು ಸಂಭವಿಸಿದೆ.

