ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗೆ ಸಜ್ಜಾದ ರೈತಸಂಘ

ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾನೂನು ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ, ಕೃಷಿಗೆ ಕಾರ್ಪೋರೆಟ್ ಕಂಪನಿಗಳ ಪ್ರವೇಶದ ವಿರುದ್ದ ಹೋರಾಟಕ್ಕೆ ರೈತ ಸಂಘ ಮುಂದಾಗಿದೆ.

ಕೃಷಿ ವಲಯಕ್ಕೆ ಬಂದೊದಗಿದ ಅಪಾಯಗಳಲ್ಲಿ ಭೂ ಸುಧಾರಣಾ ಕಾಯ್ದೆಯು ಮೊದಲ ಅಪಾಯವಾಗಿದ್ದು, ಈ ಕಾಯ್ದೆಯನ್ನು ರೈತರ ಉದ್ದಾರಕ್ಕೆ ಆಗಲಿ ಅಥವಾ ಸಾರ್ವಜನಿಕರ ಹಿತಾಸಕ್ತಿಗೊಸ್ಕರವಾಗಿ ಜಾರಿಗೊಳಿಸಿಲ್ಲ ಎಂದು ರೈತಸಂಘ ಆರೋಪಿಸಿದೆ.

ವಿದೇಶಿ ಕಂಪನಿಗಳು ಮತ್ತು ಕಾರ್ಪೋರೆಟ್ ಕಂಪನಿಗಳ ಪ್ರವೇಶಕ್ಕಾಗಿ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಕೃಷಿಯಿಂದ ರೈತನನ್ನು ಹೊರದೂಡುವ ಕಾರ್ಯತಂತ್ರವೇ ಕಾಯ್ದೆಯ ತಿದ್ದುಪಡಿಯ ಮುಖ್ಯ ಅಂಶವಾಗಿದೆ ಎಂದು ರೈತ ಸಂಘವು ತಿಳಿಸಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಈಗಾಗಲೆ ಸುಗ್ರೀವಾಜ್ಞೆಯೊಂದಿಗೆ ಹೊರ ಬಂದಿದ್ದು, ರೈತನಿಂದ ರೈತನ ಮಾರುಕಟ್ಟೆಯನ್ನು ಕೈ ತಪ್ಪಿಸುವ ಹಾಗೂ ಖಾಸಗೀ ಲೂಟಿ ಕೋರರಿಗೆ ನೆರವು ನೀಡುವ ಸಂಚು ಇದರ ಹಿಂದಿದೆ ಎಂದು ಹೇಳಿದೆ.

ಈ ಕಾರಣಕ್ಕಾಗಿ ಎಪಿಎಂಸಿ ಕಾಯ್ದೆ ಕಾಲಂ 8 ರ ತಿದ್ದುಪಡಿಯು ಬರುವ ಎಂಎನ್‍ಸಿಗಳು ಹಾಗೂ ಕಾರ್ಪೋರೆಟ್ ಕಂಪನಿಗಳಿಗೆ ಯಾವುದೇ ಬಾದಕವಿಲ್ಲದ ಅವಕಾಶಗಳನ್ನು ಕಲ್ಪಿಸಲಾಗಿದ್ದು, ರೈತನ ಕೃಷಿ ಮಾರುಕಟ್ಟೆಗೆ ಪರ್ಯಾಯವಾಗಿ ಕಂಪನಿಗಳೇ ಮಾರುಕಟ್ಟೆಯನ್ನು ತೆರೆಯಬಹುದಾದಂತಹ ಅವಕಾಶವನ್ನು ನೀಡಲಾಗಿದೆ. ಹಾಗಾಗಿ ರೈತ ಮಾರುಕಟ್ಟೆಯನ್ನು ಕಳೆದುಕೊಂಡು ನಾಳೆ ಕಂಪನಿಯ ಮುಂದೆ ತಲೆಬಗ್ಗಿಸಿ ನಿಲ್ಲುವಂತಹ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಹೋರಾಟದ ರೂಪುರೇಷೆ ನಿರ್ಧರಿಸಲು ಜೂನ್ 8 ರಂದು ದಾವಣಗೆರೆಯಲ್ಲಿ ರಾಜ್ಯ ಸಮಿತಿ ಸಭೆ ಕರೆಯಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳೀದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights