ಸಿಡಿಲು ಬಡೆದು ಮನೆಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ….
ಸಿಡಿಲು ಬಡೆದು ಮನೆಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋನಾಳ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಹೌದು… ಶೇಖಪ್ಪ ಅಂಗಡಿ ಎಂಬುವರು ಮನೆಯಲ್ಲಿನ ವಸ್ತುಗಳು ಸುಟ್ಟು ಹಾನಿಯಾಗಿವೆ. ಕಿಟಕಿ ಮೂಲಕ ಸಿಡಿಲು ಮನೆಯೊಳಗೆ ಪ್ರವೇಶಿಸಿ, ಹೊತ್ತಿಕೊಂಡ ಬೆಂಕಿಗೆ ಫ್ರೀಜ್ , ಹಣ, ಬಂಗಾರ, ದವಸ ಧಾನ್ಯ, ಬಟ್ಟೆ ಬರೆಗಳು ಸಿಡಲಿಗಾಹುತಿಯಾಗಿವೆ.
ಸ್ಥಳೀಯರು ರಾತ್ರಿ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಪ್ರವಾಹದಿಂದ ನಲುಗಿದ್ದ ಕುಟುಂಬವೀಗ ಸಿಡಿಲಿನ ಹೊಡೆತಕ್ಕೆ ಮತ್ತೆ ಸಂಕಷ್ಟದಲ್ಲಿದೆ. ಅಂದಾಜು ೩ಲಕ್ಷ೯೫ಸಾವಿರ ಹಾನಿಯಾಗಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ, ಹಾನಿ ಪರಿಶೀಲನೆ ನಡೆಸಿದ್ದಾರೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.