ಸ್ಯಾಂಡಲ್ವುಡ್ ನಲ್ಲಿ ಶುರುವಾಯ್ತಾ ಡಿ ಕೆ ಶಿವಕುಮಾರ್ ಸ್ಟೋರಿ.?

ಸ್ಯಾಂಡಲ್ವುಡ್ ನಲ್ಲಿ  ಡಿ ಕೆ ಶಿವಕುಮಾರ್ ಸ್ಟೋರಿ ಟೈಟಲ್ ಸದ್ದು ಮಾಡುತ್ತಿದೆ. ಆ ಮೂಲಕ ಬೆಳ್ಳಿ ಪರದೆ ಮೇಲೆ ರಾಜಕಾರಣಿ ಕಥೆ ಅನಾವರಣವಾಗಲಿದೆಯಾ ಅನುಮಾನ ಶುರುವಾಗಿದೆ.

ಫಿಲ್ಮ್ ಚೇಂಬರ್ ನಲ್ಲಿ ಕನಕಪುರ ಬಂಡೆ ಎಂಬ ಟೈಟಲ್ ಗೆ ಬೇಡಿಕೆ ಇಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ.

ಸದ್ಯ ಕನಕಪುರ ಬಂಡೆ ಅಂತ ಕರೆಸಿಕೊಳ್ತಿರೋದು ಶಾಸಕ ಡಿ ಕೆ ಶಿವಕುಮಾರ್, ಇಡಿ ವಶದಲ್ಲಿ ತನಿಕೆಗೆ ಒಳಪಟ್ಟಿದ್ದಾರೆ. ಸದ್ಯ ಡಿಕೆ ಶಿವಕುಮಾರ್ ಕಥೆ ಸಿನಿಮಾ ರೂಪಕ್ಕೆ ಬರ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.ನಿರ್ದೇಶಕ ನಾಗೇಶ್ ಕನಕಪುರ ಬಂಡೆ ಟೈಟಲ್ ಗಾಗಿ ಫಿಲಂ ಚೇಂಬರ್ ಗೆ ಮನವಿ ಮಾಡಿದ್ದಾರೆ.

ಒಂದು ವೇಳೆ ಟೈಟಲ್ ನೀಡದಿದ್ರೆ ಕೋರ್ಟ್ ಮೊರೆ ಹೋಗೋಕೂ ಕೂಡ ಸಿದ್ದ ಎಂದು ನಿರ್ದೇಶಕ ಹೇಳಿರುವುದಾಗಿ ತಿಳಿದು ಬಂದಿದೆ. ದಾಖಲೆ ರಹಿತ ಆಸ್ತಿ ವಿಚಾರಕ್ಕೆ ಈಡಿ ವಶದಲ್ಲಿರೋ ಡಿಕೆಶಿ ಸಿನಿಮಾದಲ್ಲಿ ಏನೆಲ್ಲಾ ಅಂಶಗಳು ಇರುತ್ತವೆ ಅನ್ನೋ ಕುತೂಹಲ ಹುಟ್ಟಿಸಿದೆ.

ಕನಕಪುರ ಬಂಡೆ ಟೈಟಲ್ ಜೊತೆಗೆ ಇನ್ನೂ ಎರಡು ಟೈಟಲ್ ಗೆ ಬೇಡಿಕೆ.

ಕನಕಪುರ ಬಂಡೆ
ಕನಕಪುರ ಕೆಂಪೇಗೌಡ
ಕನಕಪುರ ಬೆಳಗಾವಿ ಎಕ್ಸ್ ಪ್ರೆಸ್

ಒಟ್ಟು ಮೂರು ಟೈಟಲ್  ರಿಜಿಸ್ಟರ್ ಗಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಗೆ ನಿರ್ದೇಶಕ ನಾಗೇಶ್ ಮನವಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights