ಸ್ಯಾನಿಟೈಸರ್ ಜೊತೆಗೆ ಕೆಮ್ಮಿನ ಔಷಧಿ ಸೇವಿಸಿ ವಿದ್ಯಾರ್ಥಿ ಸಾವು…!
ಕಾಲೇಜ್ ವಿದ್ಯಾರ್ಥಿಯೋರ್ವ ಸ್ಯಾನಿಟೈಸರ್ ಜೊತೆಗೆ ಕೆಮ್ಮಿನ ಔಷಧಿ ಸೇವಿಸಿದ ಪರಿಣಾಮ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮೂಲದವನಾದ ಸುದೀಪ್ ಕೈರಾನ್ ಸಾವನ್ನಪ್ಪಿದ ವಿದ್ಯಾರ್ಥಿ. ಧಾರವಾಡದ ಹೊಯ್ಸಳ ನಗರದಲ್ಲಿ ಈ ಸ್ಯಾನಿಟೈಸರ್ ಜೊತೆಗೆ ಕೆಮ್ಮಿನ ಔಷಧಿ ಸೇವಿಸಿ ಪ್ರಾನಬಿಟ್ಟಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದನು.
ಸುದೀಪ್ ಕೈರಾನ್ ವಿದ್ಯಾಭ್ಯಾಸಕ್ಕಾಗಿ ಧಾರವಾಡದ ಹೊಯ್ಸಳ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು. ಲಾಕ್ಡೌನ್ ಪರಿಣಾಮ ಮದ್ಯ ಸಿಗದ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಜೊತೆ ಕೆಮ್ಮಿನ ಔಷಧಿ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಸ್ಯಾನಿಟೈಸರ್ ಮತ್ತು ಕೆಮ್ಮಿನ ಔಷಧಿ ಬಾಟಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಶವವನ್ನು ಧಾರವಾಡದ ಜಿಲ್ಲಾಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ.