ಕಾಂಗ್ರೆಸ್‌ ತನ್ನ ಅಸ್ತಿತ್ವಕ್ಕಾಗಿ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು: ಆರ್ ಧರ್ಮಸೇನಾ

ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌, ತನ್ನ ಜನಪ್ರಿಯತೆಯನ್ನು ಮರಳಿ ಪಡೆಯಬೇಕಾದರೆ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಆರ್ ಧರ್ಮಸೇನಾ ಅಭಿಪ್ರಾಯ ಪಟ್ಟಿದ್ದಾರೆ.

ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಬದಲಾವಣೆಯನ್ನು ಸ್ವೀಕರಿಸಬೇಕಾಗಿದ್ದು, ಇಂದಿನ ಕಾಲಕ್ಕೆ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಧರ್ಮಸೇನಾ, ಹಿಂದೂಗಳ ಹಿತಾದೃಷ್ಟಿಯಿಂದ ಕಾಂಗ್ರೆಸ್ ಕೊಡುಗೆ ನೀಡಿದೆ. ಮರೆತುಹೋಗಿರುವ ಪಕ್ಷದ ಕೊಡುಗೆಗಳನ್ನು ಮರಳಿ ಪಡೆಯಲು ಹಿಂದೂ ಕೋಶವೊಂದನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ಬಾಬು ಜಗಜೀವನ ರಾಮ್ ಮತಾಂತರವಾಗದಂತೆ ತಡೆಗಟ್ಟಿದ್ದು, ಮತ್ತಿತರ ಪಕ್ಷದ ಧಾರ್ಮಿಕ ವಿಚಾರಗಳನ್ನು ಉಲ್ಲೇಖಿಸಿದ ಧರ್ಮಸೇನಾ, ಪ್ರತಿ 10 ವರ್ಷಗಳಿಗೊಮ್ಮೆ ರಾಜಕೀಯ ಪರಿಸ್ಥಿತಿ ಬದಲಾವಣೆಯಾಗಲಿದೆ. ಜನ ಸಂಘ
ಮತ್ತಿತರ ಕಾರಣದಿಂದಾಗಿ ಬಿಜೆಪಿ ವಿಕಾಸನಗೊಂಡಿದೆ. ನಾವು ಕೂಡಾ ಬದಲಾವಣೆಯನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಧರ್ಮಸೇನಾ ಹೇಳಿದ್ದಾರೆ.


ಇದನ್ನೂ ಓದಿ:  ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್‌ ಕಾರ್ಯಕರ್ತೆ ವಿರುದ್ಧ ಅಶ್ಲೀಲ ಕಮೆಂಟ್‌: 07 ಜನರ ವಿರುದ್ಧ FIR ದಾಖಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights