ಕೂಲಿಗಾಗಿ ವಲಸೆ ಕಾರ್ಮಿಕರ ಆಕ್ರಂದನ: 70ಕ್ಕೂ ಹೆಚ್ಚು ಕಾರ್ಮಿಕರ ಬಂಧನ

ದುಡಿದ ದುಡಿಮೆಗೆ ಕೂಲಿ ಕೇಳಿ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಘಟನೆ ಗುಜರಾತ್‌ ರಾಜ್ಯದ ಸೂರತ್‌ನಲ್ಲಿ ನಡೆದಿದೆ.

ಸೂರತ್‌ ನಗರಕ್ಕೆ ಉದ್ಯೋಗ ಹರಿಸಿ ದೂರದ ಊರುಗಳಿಂದ ವಲಸೆ ಬಂದಿದ್ದ ಕಾರ್ಮಿಕರು ದೇಶದಾದ್ಯಂತ ಲಾಕ್‌ಡೌನ್‌ ವಿಧಿಸಿರುವ ಕಾರಣದಿಂದ ಕೂಲಿಯೂ ಇಲ್ಲದೆ, ತಮ್ಮೂರಿಗೂ ಹೋಗಲಾರದೆ ಕಂಗಾಲಾಗಿದ್ದರು. ಇಲ್ಲಿಯವರೆಗೆ ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣದಲ್ಲಿ ಜೀವನ ಸಾಗಿಸಿರುವ ಈ ಕಾರ್ಮಿಕರು, ಈಗ ಆಹಾರಕ್ಕೆ ಹಣವೂ ಇಲ್ಲದೆ, ಕೂಲಿಯೂ ಇಲ್ಲದೆ ಪರಿತಪಿಸುತ್ತಿದ್ದಾರೆ.

ಕಟ್ಟಡ ಕೆಲಸ, ಅಮಾಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ತಾವು ಲಾಕ್‌ಡೌನ್‌ಗೂ ಮುನ್ನ ದುಡಿದಿದ್ದ ದುಡಿಮೆಗೆ ಕೆಲಸ ಮಾಡಿಸುವ ಮೇಸ್ತ್ರಿಗಳು ಕೂಲಿ ಕೊಡದೆ ಸತಾಯಿಸಿದ್ದು, ತಾವು ದುಡಿದಿರುವ ಕೆಲಸಕ್ಕೆ ಕೂಲಿ ಕೊಡುವಂತೆ ಹಾಗೂ ಅವರೆಲ್ಲರೂ ತಮ್ಮೂರಿಗೆ ಮರಳಿ ಹೋಗಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನಗರದ ಹೊರ ವಲಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮುಂದಾದ ಸಂದರ್ಭದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು ನಡೆದಿದೆ. ಪ್ರತಿಭಟನೆಯನ್ನು ಹತೋಟಿಗೆ ತಂದಿರುವ ಪೊಲೀಸರು 70 ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಕಾರ್ಮಿಕರ ಪ್ರತಿಭಟನೆಗೆ ಕಾರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights