ಕೊರೊನಾ ಆರ್ಥಿಕ ಸಂಕಷ್ಟ : ಕ್ಯಾಬ್ ಚಾಲಕ ಆತ್ಮಹತ್ಯೆಗೆ ಶರಣು..!

ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ದೇಶವೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಕಳೆದ ವಾರವಷ್ಟೇ ಪ್ರಧಾನಿ ಮೋದಿ ಅವರು ದೇಶದ ಆರ್ಥಿಕ ಪುನರ್ ಚೇನತಕ್ಕಾಗಿ 20 ಲಕ್ಷ ಕೋಟಿ ಘೋಷಿಸಿದ್ದರು. ಆದರೆ ಈ ಪರಿಹಾರ ರಾಜ್ಯಗಳಿಗೆ ತಲುಪುವ ಹೊತ್ತಿಗೆ ಅದೆಷ್ಟು ಜನ ತಮ್ಮ ಪ್ರಾಣವನ್ನ ಬಲಿ ಕೊಡ್ತಾರೋ ಗೊತ್ತಿಲ್ಲ. ಜೀವನ ನಡೆಸುವುದು ಕಷ್ಟವಾಗಿದೆ ಎಂದು ಡೆತ್ ನೋಟ್ ಬರೆದಿಟ್ಟ ಕ್ಯಾಬ್ ಚಾಲಕನ್ನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೌದು… ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬೆಂಗಳೂರಿನ ಮಣಿ ಆತ್ಮಹತ್ಯೆಗೆ ಬಲಿಯಾದ ಮೊದಲ ಚಾಲಕ. ರಾಮಮೂರ್ತಿನಗರದ ನಿವಾಸಿ ಮಣಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕ್ಯಾಬ್ ಚಾಲಕರಾಗಿದ್ದ ಮಣಿ ಜೀವನ ನಿರ್ವಹಣೆ ಸಾಧ್ಯವಾಗದೆ ಹತಾಶೆಯಲ್ಲಿ ಸಾವಿನ ಕಾಲಿಗೆ ಎರಗಿದ್ಧಾರೆ. ಜೀವನ ನಡೆಸುವುದು ಕಷ್ಟವಾಗಿದೆ ಎಂದು ಇವರು ಡೆತ್ ನೋಟ್ ಬರೆದಿಟ್ಟಿರುವುದು ತಿಳಿದುಬಂದಿದೆ.

ಮೊನ್ನೆಯಷ್ಟೇ 4.0 ಲಾಕ್ ಡೌನ್ ಜಾರಿಗೊಂಡಿದೆ. ಇದರ ಬೆನ್ನಲ್ಲೆ ವಾಹನಗಳ ಸಂಚಾರಕ್ಕೆ ಷರತ್ತು ಬದ್ಧ ಸಡಿಲಿಕೆಗೊಳಿಸಲಾಗಿದೆ. ಆದರೆ ಕೊರೊನಾ ಹರಡುವ ಭೀತಿಯಿಂದ ರಸ್ತೆಗಿಳಿದ ಆಟೋ, ಕ್ಯಾಬ್ ಗಳನ್ನು ಹತ್ತಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅದೆಷ್ಟೋ ಚಾಲಕರು ನಿರಾಸೆಗೊಂಡಿದ್ದಾರೆ. ಮುಂದಿನ ಜೀವನದ ಬಗ್ಗೆ ಆತಂಕಗೊಂಡಿದ್ದಾರೆ. ಇದರ ಬೆನ್ನಲ್ಲೇ ಕ್ಯಾಬ್ ಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಷ್ಟದ ಪರಿಸ್ಥಿತಿಯಲ್ಲಿದ್ದ ಮಣಿ ಕುಟುಂಬವನ್ನು ನಡೆಸುವುದು ಇತ್ತೀಚೆಗೆ ಅಸಾಧ್ಯ ಎನಿಸಿತ್ತು. ಮನೆ ಬಾಡಿಗೆ, ಇಎಂಐ ಹಣ ಪಾವತಿಗೆ ಒತ್ತಡಗಳಿದ್ದವು. ಹೀಗಾಗಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಮಣಿ ಎಂಥಹ ಕೇವಲ ಒಬ್ಬ ಚಾಲಕನ ಪರಿಸ್ಥಿತಿ ಅಲ್ಲ. ಬಹುತೇಕ ಆಟೋ, ಕ್ಯಾಬ್ ಚಾಲಕರ ಸ್ಥಿತಿ ಕೂಡ ಇದೇ ಆಗಿದೆ. ಚಾಲಕರ ಆರ್ಥಿಕ ನೆರವಿಗಾಗಿ ರಾಜ್ಯದ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights