ಕೊರೊನಾ ಎಫೆಕ್ಟ್ : ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್‌ ರೇಟ್‌ ಪ್ರದರ್ಶನ ಮಾಡದಿದ್ದರೆ ನೋಟಿಸ್‌…?

ಕೊರೊನಾ ಎಫೆಕ್ಟ್ ನಿಂದಾ ಎಲ್ಲೆಡೆ ಮಾಸ್ಕ್ ಧರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡ ಮೆಡಿಕಲ್‌ ಸ್ಟೋರ್ ಗಳು, ಮಾಸ್ಕ್ ಏಜೆಂಟ್ ಗಳು ಮಾಸ್ಕ್ ರೇಟ್ ನ್ನು ಎಗ್ಗಿಲ್ಲದೇ ಫಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದು ಸಾಮಾನ್ಯರ ಜೇಬಿಗೆ ಕತ್ತರಿ ಬೀಳುಸುತ್ತಿದ್ದು, ಇದಕ್ಕೆ ಸದ್ಯ ಮೈಸೂರು ಪಾಲಿಕೆ ಕಡಿವಾಣ ಹಾಕಲು ನಿರ್ಧರಿಸಿದೆ.

ಹೌದು.. ಕೊರೊನಾ ಸೋಂಕು ತಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿ ಜನ ಮಾಸ್ಕ್ ಖರೀದಿಗೆ ಮುಂದಾಗಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಮೆಡಿಕಲ್‌ ಸ್ಟೋರ್‌ ಗಳಲ್ಲಿ ಮಾಸ್ಕ್ ಬೆಲೆ ದುಪ್ಪಟ್ಟು ಮಾಡಿ (70ರೂಪಾಯಿ ಮಾಸ್ಕ್ ಗೆ 300 ರಷ್ಟು  ಬೆಲೆ) ಮಾರಾಟ ಮಾಡಲಾಗುತ್ತಿದೆ. ಇದಕ್ಕ ಸದ್ಯ ಕಡಿವಾಣ ಹಾಕಲು ಮೈಸೂರು ಪಾಲಿಕೆ ಚಿಂತನೆ ನಡೆಸಿದೆ.

ಇನ್ಮುಂದೆ ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್‌ ರೇಟ್‌ ಪ್ರದರ್ಶನ ಮಾಡ್ಬೇಕು.  ಮೆಡಿಕಲ್‌ ಸ್ಟೋರ್‌ನಲ್ಲಿ ಮಾಸ್ಕ್‌ ರೇಟ್‌ ಪ್ರದರ್ಶನ ಮಾಡದಿದ್ದರೆ ಮೆಡಿಕಲ್‌ ಸ್ಟೋರ್‌ಗೆ ಪಾಲಿಕೆಯಿಂದ ನೋಟಿಸ್‌ ಜಾರಿಗೆ ಚಿಂತನೆ ನಡೆಸಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚುವರಿ ಮಾಸ್ಕ್ ಅಗತ್ಯವಾಗಿದ್ದು ಹಾಗೂ ಮಾಸ್ಕ್‌ಗಳನ್ನ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವ ಮತ್ತು  ಮಾಸ್ಕ್‌ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿರುವ ಜೊತೆಗೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ಮಾಸ್ಕ್‌ ದಾಸ್ತಾನು ಮಾಡಿಕೊಂಡಿರುವ ಅನುಮಾನದ ಹಿನ್ನಲೆಯಲ್ಲಿ ಇಂದು ಪಾಲಿಕೆ ಅಧಿಕಾರಿಗಳಿಂದ ಮೆಡಿಕಲ್‌ ಸ್ಟೋರ್‌ಗಳ ಮೇಲೆ ದಿಢೀರ್ ರೆಡ್ ಮಾಡಲಾಗಿದೆ.

 

ಪಾಲಿಕೆ ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಮೈಸೂರು ನಗರದ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಮೆಡಿಕಲ್‌ ಸ್ಟೋರ್‌ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಎಲ್ಲ ಮೆಡಿಕಲ್‌ ಸ್ಟೋರ್ಗಳಿಗೆ ಹೆಚ್ಚುವರಿ ಮಾಸ್ಕ್‌ ದಾಸ್ತಾನು ಮಾಡದಂತೆ ಹಾಗೂ ಮಾಸ್ಕ್‌ ಮಾರಾಟದ ಕುರಿತು ದೂರು ಬಂದರೆ ಮೆಡಿಕಲ್‌ ಸ್ಟೋರ್ ಮೇಲೆ ಮೊಕದ್ದಮ್ಮೆ ದಾಖಲಿಸುವುದಾಗಿ ಎಚ್ಚರಿಕೆ ಕೊಡಲಾಗಿದೆ. ಜೊತೆಗೆ  ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್‌ ರೇಟ್‌ ಪ್ರದರ್ಶನ ಮಾಡದಿದ್ದರೆ ನೋಟಿಸ್‌ ಜಾರಿ ಮಾಡಲು ಚಿಂತನೆ ನಡೆಸಿದೆ. ಈ ಯೋಜನೆ ಬಹುಬೇಗ ಕಾರ್ಯರೂಪಕ್ಕೆ ಬಂದರೆ ಎಗ್ಗಿಲ್ಲದೇ ಮಾಸ್ಕ್ ಗಳ ಬೆಲೆ ನಿಗಧಿ ಮಾಡಿ ಮಾರಾಟ ಮಾಡುತ್ತಿರುವವ ಕೈ ಕಟ್ಟಿಹಾಕಿದಂತಾಗುವುದು ಪಕ್ಕ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕಾರ್ಯ ಬಹುಬೇಗ ಆಗಬೇಕಿದೆ.

ಇಲ್ಲವಾದರೇ ಮಾಸ್ಕ್ ಗಳಿಗೆ ಇಂತಿಷ್ಟು ಬೆಲೆ ನಿಗಧಿಯಾಗದೇ ಹೋದರೆ ಯಾರೂ ಕೂಡ ಪ್ರಶ್ನೆ ಮಾಡದೇ ಹೋದಲ್ಲಿ ಕೇಳಿದಷ್ಟು ಹಣ ಕೊಟ್ಟು ಮಾಸ್ಕ್ ಗಳನ್ನ ಖರೀದಿ ಮಾಡಬೇಕಾದ ಅನಿವಾರ್ಯತೆ ಮುಂದುವರೆಸಬೇಕಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights