ಕೊರೊನಾ ವಾರಿಯರ್ಸ್ ಸಹಾಯಕ್ಕೆ ಮುಂದೆಬಂತು ‘ಸ್ಕೂಟರ್ ಹೀರೋ’
ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವವರ ಪೈಕಿ ವಾರಿಯರ್ಸ್ ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಇವರ ಸಂಕಷ್ಟದಲ್ಲಿರುವವರ ನೆರವಿಗೆ ನಿಂತವರ ನೆರವಿಗಾಗಿ ‘ಬೌನ್ಸ್’ ಸಂಸ್ಥೆ ಮುಂದೆ ಬಂದಿದೆ. ಆ ಮೂಲಕ ಕೊರೊನಾ ವಾರಿಯರ್ಸ್ ಓಡಾಟಕ್ಕೆ ಸಹಾಯ ಆಗುವಂತೆ ಹೊಸ ಯೋಜನೆಯನ್ನು ಹಾಕಿಕೊಂಡಿದೆ.
ಅಷ್ಟಕ್ಕೂ ಏನಿದು ‘ಸ್ಕೂಟರ್ ಹೀರೋ’ ಅನ್ಕೊಂಡ್ರಾ ಅದಕ್ಕೆ ಉತ್ತರ ಇಲ್ಲಿದೆ ನೋಡಿ. ‘ಬೌನ್ಸ್’ ಸಂಸ್ಥೆ ‘ಸ್ಕೂಟರ್ ಹೀರೋ’ ಎನ್ನುವ ಸೇವೆ ಆರಂಭ ಮಾಡಿದೆ. ಈ ಮೂಲಕ ಜನ ಸಾಮಾನ್ಯರು ಕೊರೊನಾ ಯೋಧರಿಗೆ ಸಹಾಯ ಮಾಡಬಹುದಾಗಿದೆ. ತಮ್ಮ ಬೈಕ್ಗಳನ್ನು ‘ಸ್ಕೂಟರ್ ಹೀರೋ’ ಸೇವೆಗೆ ಸೇರಿಸಬಹುದು ಎಂದು ‘ಬೌನ್ಸ್’ ಸಂಸ್ಥೆ ಹೇಳಿದೆ.
ಮಾತ್ರವಲ್ಲಿ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನವನ್ನು ‘ಸ್ಕೂಟರ್ ಹೀರೋ’ ಸೇವೆಗಾಗಿ scooterhero.bounceshare.com ವೆಬ್ಸೈಟ್ನಲ್ಲಿ ಸೇರ್ಪಡೆಗೆ ಮಾಡಬಹುದಾಗಿದೆ. ಈ ಮೂಲಕ ಕೊರೊನಾ ವಾರಿಯರ್ಸ್ಗೆ ನೆರವು ನೀಡಬಹುದು ಎಂದು ಬೌನ್ಸ್ ಸಂಸ್ಥೆ ತಿಳಿಸಿದೆ.
ಆಸಕ್ತಿ ಇರುವ ಜನರು ‘ಸ್ಕೂಟರ್ ಹೀರೋ’ಗೆ ಬೈಕ್ ಸೇರಿಸುವ ಮೂಲಕ ತಮ್ಮ ಬೈಕ್ ಅನ್ನು ಉಚಿತವಾಗಿ ಪ್ರಯಾಣ ಮಾಡಲು ಕೊರೊನಾ ವಾರಿಯರ್ಸ್ಗೆ ನೀಡಬಹುದು ಅಥವಾ ಕಡಿಮೆ ದರ ತೆಗೆದುಕೊಳ್ಳಬಹುದು. ಈ ರೀತಿ ಕೊರೊನಾ ವಾರಿಯರ್ಸ್ಗೆ ಮನೆಯಲ್ಲಿಯೇ ಕೂತು ಸಹಾಯಹಸ್ತ ಚಾಚಬಹುದು.
ಇನ್ನೊಂದು ಕಡೆ ಲಾಕ್ಡೌನ್ ನಿಂದ ದುಡಿಮೆ ಇಲ್ಲದೆ ಕುಳಿತಿರುವ ಜನ ತಮ್ಮ ಬೈಕ್ಅನ್ನು ಈ ಸೇವೆಗೆ ಸೇರಿಸಬಹುದಾಗಿದೆ. ದಿನಕ್ಕೆ 80 ರೂಪಾಯಿ ಶುಲ್ಕ ವಿಧಿಸುವ ಆಯ್ಕೆ ಇದ್ದು, ಆ ಮೂಲಕ ಸಣ್ಣ ಮೊತ್ತಗಳನ್ನು ಗಳಿಸಬಹುದು.

