ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ ಶಾರುಖ್ ಖಾನ್…!

ಕೊರೊನಾ ಸೋಂಕಿನಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಹೀಗಾಗಿ ರಾಜ್ಯಗಳಲ್ಲಿ ದೇಣಿಗೆ ನೀಡುವ ಮೂಲಕ ಜನ ಮಾನವೀಯತೆ ಮೆರೆಯುತ್ತಿದ್ದಾರೆ. ಈ ವಿಚಾರದಲ್ಲಿ ಬಾಲುವುಡ್ ನಟ ಶಾರುಖ್ ಖಾನ್ ಕೂಡ ಸಹಾಯ ಹಸ್ತ ಚಾಚಿದ್ದಾರೆ.

ಈಗಾಗಲೇ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸಲ್ಮಾನ್ ಖಾನ್ ತಮ್ಮದೇ ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಶಾರುಖ್ ಕೂಡ ಸಹಾಯ ನೀಡಲು ಮುಂದಾಗಿದ್ದಾರೆ.

ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನ ನಟ – ನಟಿಯರು ಕೊರೊನಾ ಸಂತ್ರಸ್ತರ ನೆರವಿಗೆ ಕೈಜೋಡಿಸಿದ್ದರು. ಆದರೆ ಬಾಲಿವುಡ್ ನ ಶಾರುಖ್ ಖಾನ್ ಮಾತ್ರ ದೇಣಿಗೆ ನೀಡಿರಲಿಲ್ಲ. ಸದ್ಯ ದೇಣಿಗೆ ನೀಡುವ ಮೂಲಕ ನಟ ಉತ್ತರ ಕೊಟ್ಟಿದ್ದಾರೆ.

ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಿರುವುದಾಗಿ ಶಾರುಖ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ನಮ್ಮ ಕೈಲಾದ ರೀತಿಯಲ್ಲಿ ಎಷ್ಟು ಸಹಾಯ ಮಾಡಲು ಸಾಧ‍್ಯವಾಗುತ್ತದೋ ಅದನ್ನು ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಯಾವ-ಯಾವ ಸಹಾಯಗಳನ್ನು ತಾವು ಮಾಡುತ್ತಿದ್ದೇವೆ ಎಂದು ಪಟ್ಟಿಯನ್ನೇ ಕೊಟ್ಟಿರುವ ಶಾರುಖ್ ಖಾನ್, ತಾವು ಹಾಗೂ ತಮ್ಮ ಉದ್ಯಮಗಳು, ಪ್ರಾಂಚೈಸಿಗಳ ಕಡೆಯಿಂದ ಪ್ರಧಾನಿ ಮಂತ್ರಿ, ಮಹಾರಾಷ್ಟ್ರ ಸಿಎಂ ನಿಧಿ ಹಾಗೂ ಪಶ್ಚಿಮ ಬಂಗಾಳ ಸಿಎಂ ನಿಧಿಗೆ ಆರ್ಥಿಕ ನೆರವನ್ನು ನೀಡುವುದಾಗಿ ಹೇಳಿದ್ದಾರೆ.

ಅರ್ಥ್ ಫೌಂಡೇಶನ್ ಮತ್ತು ಮೀರ್ ಫೌಂಡೇಶನ್ ಜೊತೆಯಾಗಿ ಮುಂಬೈ ಒಂದರಲ್ಲೇ 5500 ಮಂದಿಗೆ ತಿಂಗಳಿಗೆ ಆಗುಷ್ಟು ಅಡುಗೆ ಸಾಮಗ್ರಿಗಳನ್ನು ವಿತರಿಸಿದೆ. ಜೊತೆಗೆ ಅಡುಗೆ ಮನೆಯೊಂದನ್ನು ನಿರ್ಮಿಸಿ ಪ್ರತಿದಿನ 2000 ಸಾವಿರ ಮಂದಿಗೆ ಊಟದ ಸರಬರಾಜು ಮಾಡುತ್ತಿದೆ.

ದಿನಗೂಲಿ ನೌಕರರಿಗೆ ಆಹಾರ ಸಾಮಗ್ರಿಗಳು, ಚಿತ್ರರಂಗದ ದಿನಗೂಲಿ ನೌಕರರಿಗೆ ಸಹಾಯ ಸೇರಿದಂತೆ ಹಲವು ಸಹಾಯಗಳ ಪಟ್ಟಿಯನ್ನು ಶಾರುಖ್ ಖಾನ್ ನೀಡಿದ್ದಾರೆ. ಇದೆಲ್ಲವನ್ನೂ ಅವರು ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ತಮ್ಮನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights