ಚೀನಾವನ್ನು ಕೆಂಗಣ್ಣಿನಿಂದ ಎದುರಿಸಬೇಕಾದ ಮೋದಿ ಮೌನವಾಗಿದ್ದೇಕೆ? ನೆಟ್ಟಿಗರ ಆಕ್ರೋಶ! 

ಕಳೆದ ಎರಡು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಲ್ಬಣಗೊಂಡಿದೆ. ಸೋಮವಾರ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ 20 ಸೈನಿಕರನ್ನು ಚೀನಾ ಸೈನಿಕರು ಹತ್ಯೆ ಮಾಡಿದ್ದಾರೆ. ದೇಶದ ಸೈನಕರ ಹತ್ಯೆಗೆ ಇಡೀ ದೇಶವೇ ಮರುಕ ಪಡುತ್ತಿದೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೌನ ದೇಶದ ಯೋಧರ ಹತ್ಯೆ ಬಗ್ಗೆ ಮೌನ ತಾಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತೀಯ ಸೈನಿಕರ ಹತ್ಯೆಯಾಗಿ ಎರಡು ದಿನಗಳು ಕಳೆದರೂ ಪ್ರಧಾನಿ ಮೋದಿಯವರು ಭಾರತ ಮತ್ತು ಚೀನಾ ಗಡಿಯ ಬಗ್ಗೆ ಕ್ರಿಯೆ-ಪ್ರತಿಕ್ರಿಯೆ ಯಾವುದೂ ಇಲ್ಲದೆ ಮೌನಕ್ಕೆ ಶರಣಾಗಿದ್ದಾರೆ.

2013ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮೋದಿಯವರು ‘ಕೇಂದ್ರ ಸರ್ಕಾರವು ಚೀನಾ ಮುಂದೆ ಸಲಾಮು ಹೊಡೆಯುತ್ತಿದೆ. ಇಂತಹ ಸರ್ಕಾರದಿಂದ ಏನು ಮಾಡಲು ಸಾಧ್ಯ’ ಎಂದು ವಾಗ್ದಾಳಿ ನಡೆಸಿದ್ದರು. ಇಂದು ಅದೇ ಮೋದಿಯವರು ಅದೇ ಕೇಂದ್ರ ಸರ್ಕಾರದ ಪ್ರಧಾನಿಯಾಗಿದ್ದಾರೆ. ಆದರೆ, ಅವರೇನು ಮಾಡುತ್ತಿದ್ದಾರೆ? ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

“ಚೀನಾದ ಆಕ್ರಮಣಗಳ ಸಮಸ್ಯೆಯು ಕೊರೊನಾ ಸೋಂಕು ಮತ್ತು ಅದಕ್ಕೂ ಮೊದಲಿಂದಲೂ ಇರುವ  ಆರ್ಥಿಕತೆಯ ಸ್ಥಿತಿಯಂತೆಯೇ ಇದೆ. ನಾವು ಎಲ್ಲವನ್ನೂ ನಿರಾಕರಣೆಯಿಂದ ನೋಡುತ್ತೇವೆ. ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳುವ ಹೊತ್ತಿಗೆ, ಆ ವಿಷಯಗಳು ನಮ್ಮ ನಿಯಂತ್ರಣ ದಾಟಿರುತ್ತವೆ” ಎಂದು ಪ್ರಿತೀಶ್‌ ನ್ಯಾಂಡಿ ಅವರು ಟ್ವೀಟ್‌ ಮಾಡಿದ್ದು, ಮೋದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯತನವನ್ನು ಪ್ರಶ್ನಿಸಿದ್ದಾರೆ.

ಪಿಎಂ ಮೋದಿಯವರು ಟ್ವೀಟ್‌ ಬಳಸುವು ರೀತಿಯು ನಿಗೂಢವಾಗಿದೆ. ಸುಶಾಂತ್ ರಜಪೂತ್ ನಿಧನರಾದಾಗ ಅವರು ಸಂತಾಪ ಸೂಚಿಸಿದ್ದಾರೆ. ಅದು ಬಹಳ ಮೆಚ್ಚುಗೆಯ ವಿಚಾರ. ಆದರೆ, ನಮ್ಮ 20 ಧೈರ್ಯಶಾಲಿ ಯೋಧರು ಚೀನಿಯರ ಆಕ್ರಮಣಕ್ಕೆ ತುತ್ತಾಗಿದ್ದಾರೆ. ಯೋಧರ ವಿಚಾರದಲ್ಲಿ ಅವರು ಮೌನವಾಗಿದ್ದಾರೆ. ಇದು ಅದ್ಭುತ” ಎಂದು ಪವನ್ ಕೆ ವರ್ಮಾ ಅವರು ಟೀಕಿಸಿದ್ದಾರೆ.

ಬಾಯ್‌ಕೋಟ್ ಬಿಜೆಪಿ ಎನ್ನಲು ಇದು ಸರಿಯಾದ ಸಮಯ. ಎನಫ್‌ ಈಸ್‌ ಎನಫ್‌ ಎಂದು ರೋಹನ್‌ ಗುಪ್ತಾ ಹೇಳಿದ್ದಾರೆ.

ಇದು ಸ್ಪಷ್ಟವಾಗಿ ನಾಚಿಕೆಗೇಡು. ನಮ್ಮ ಮೂಕ ಸರ್ಕಾರವು ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ಸಾರಿಯಾದುದ್ದಲ್ಲ; ಅದರ ಸಹಚರರಾದ ಮಾಧ್ಯಮಗಳಲ್ಲಿ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ದೂಷಿಸುವುದು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದು. ಇದು ಪ್ರಧಾನ ಮಂತ್ರಿ ಮಾತನಾಡುವ ಸಮಯ” ಎಂದು ಶಶಿ ತರೂರ್ ಅವರು ಟ್ವೀಟ್‌ ಮಾಡಿದ್ದಾರೆ.

ಎರಡು ತಿಂಗಳ ಹಿಂದೆ ಉಂಟಾದ ಭಾರತ ಮತ್ತು ಚೀನಾ ನಡುವಿನ ಸಂಘರ್ಷವು ಪಾಂಗೊಂಗ್ ಸರೋವರದ ಬಳಿಯಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿ (ಪಿಎಲ್‌ಎ)ಯು ತಮ್ಮ ಸೈನಿಕರನ್ನು ನಿಯೋಜಿಸ ಮೇಲೆ ಮತ್ತಷ್ಟು ಉಲ್ಬಣಗೊಂಡಿದೆ. ಈಗ ಅದು ಮುಖಾಮುಖಿ ಘರ್ಷಣೆಗೆ ಇಳಿದಿದ್ದು, ಗಡಿಯಲ್ಲಿ ಮುಂದೇನಾಗಬಹುದು ಎಂದು ಭಾರತೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಗಡಿಯಲ್ಲಿನ ಪರಿಸ್ಥಿತಿಗಳ ಬಗ್ಗೆ ಮಾತನಾಡಬೇಕಾದ ಮೋದಿಯವರು ಮೌನಕ್ಕೆ ಶರಣಾಗಿರುವುದು ಭಾರತೀಯರನ್ನು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights