Film news: ಸಿನೆಮಾ ಚಿತ್ರೀಕರಣಕ್ಕೆ OK ಓಕೆ ಎಂದ ಸರಕಾರ, ನಿಟ್ಟುಸಿರು ಬಿಟ್ಟ ಕಲಾವಿದರು..
ಲಾಕ್ಡೌನ್ ಕಾರಣ ಕಳೆದ ಮೂರು ತಿಂಗಳಿನಿಂದ ಬಸವಳಿದಿದ್ದ ಚಲನಚಿತ್ರ ರಂಗ ಖುಷಿ ಪಡುವಂತಹ ಸುದ್ದಿಯನ್ನು ರಾಜ್ಯ ಸರಕಾರ ನೀಡಿದೆ. ಚಲನಚಿತ್ರ ಹಾಗೂ ಟಿವಿ ಧಾರಾವಾಹಿಗಳ ಚಿತ್ರೀಕರಣ ಮತ್ತಿತರ ನಿರ್ಮಾಣ ಚಟುವಟಿಕೆಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಅರ್ಧಕ್ಕೆ ನಿಂತಿದ್ದ ಚಲನಚಿತ್ರಗಳ ಚಿತ್ರೀಕರಣಕ್ಕೆ ಸರಕಾರ ಅಸ್ತು ಎಂದಿದೆ.
ಇದರಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದ ಅದೆಷ್ಟೋ ಚಿತ್ರಗಳ ನಿರ್ಮಾಪಕ/ನಿದೇರ್ಶಕ/ನಟ-ನಟಿಯರು/ತಂತ್ರಜ್ಞರಿಗೆ ಸಾಕಷ್ಟು ನೆರವಾಗಲಿದೆ. ಲಾಕ್ಡೌನ್ ಕಾರಣ ಸ್ತಬ್ಧಗೊಂಡಿದ್ದ ಕನ್ನಡ ಚಿತ್ರರಂಗ ಮತ್ತೆ ಸಿನೆಮಾ ನಿರ್ಮಾಣ ಚಟುವಟಿಕೆಗಳಿಂದ ನಳನಳಿಸಲು ಈ ಆದೇಶ ಅನುಕೂಲ ಮಾಡಿಕೊಡಲಿದೆ.
ಲಾಕ್ಡೌನ್ ಸಡಿಲಿಕೆ ಸಂಬಂಧ ಕೇಂದ್ರ ಸರಕಾರ ಹೊರಡಿಸಿರುವ ನಿಮಯಾವಳಿಗಳಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಕಾರಣ ಅನುಮತಿ ನೀಡಲಾಗುತ್ತಿದೆ ಎಂದು ರಾಜ್ಯ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಚಿತ್ರೀಕರಣ ಪುನಾರಂಭದ ಸಂದರ್ಭದಲ್ಲಿ ಕೋವಿಡ್ ಕುರಿತಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು (ಸಾಮಾಜಿಕ ಅಂತರ, ಮುಸುಕು) ಪಾಲಿಸುವಂತೆಯೂ ಆದೇಶಿಸಲಾಗಿದೆ.
ಸರ್ಕಾರ ಶೂಟಿಂಗ್ಗೆ ಆಕ್ಷನ್ ಕಟ್ ಹೇಳಿದ್ದು, ಶೂಟಿಂಗ್ ಅಂತ್ಯಕ್ಕೆ ಬಂದು ನಿಲ್ಲಿಸಲಾಗಿದ್ದ ಪುನೀತ್ ಅಭಿನಯದ ‘ಯುವರತ್ನ’, ಶ್ರೀ ಮುರುಳಿ ಅಭಿನಯದ ಮದಗಜ, ಶಿವರಾಜ್ಕುಮಾರ್ ಅಭಿನಯದ ಭಜರಂಗಿ 2, ಯಶ್ ಅವರ ಕೆಜಿಎಫ್ 2, ಸುದೀಪ್ ಅವರ ಫ್ಯಾಂಟಮ್, ದರ್ಶನ್ ಅಭಿನಯದ ರಾಜ ವೀರ ಮದಕರಿ ನಾಯಕ, ಉಪೇಂದ್ರ ಅವರ ಕಬ್ಬ ಮತ್ತು ಬುದ್ದಿವಂತ 2, ದ್ರುವ ಸರ್ಜಾರ ಪೊಗರು, ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾಗಳು ಸಧ್ಯ ಚಿತ್ರೀಕರಣವನ್ನು ಮರ ಆರಂಭಿಸಲಿವೆ.

