ತಂದೆಯನ್ನು ಎತ್ತಿಕೊಂಡು ನಡೆದ ಮಗ : ಅಯ್ಯೋ.. ಕೊರೊನಾವೇ ನೀನೇಕೆ ಇಷ್ಟು ಕಠೋರ?

ದೇಶದ ಜನರನ್ನ ತಲ್ಲಣಗೊಳಿಸಿದ ಕೊರೊನಾ ಎಗ್ಗಿಲ್ಲದೇ ನುಗ್ಗಿಲ್ಲದೇ ನುಗ್ಗುತ್ತಿದೆ. ಇದರ ವೇಗವನ್ನ ನಿಯಂತ್ರಿಸಲು ದೇಶದೆಲ್ಲೆಡೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದರೆ ಇದಕ್ಕೆ ಬಲಿಯಾಗುತ್ತಿದ್ದಾರೆ ಅಮಾಯಕ ಜನ. ಅನಾರೋಗ್ಯ ತಂದೆಯನ್ನು ಮಗುವಿನಂತೆ ಹೊತ್ತು ಮಗ ಒಂದು ಕಿಲೋ ಮೀಟರ್ ನಡೆದ ಮನಕಲುಕುವ ಘಟನೆಯೊಂದು ನಡೆದಿದೆ.

ಹೌದು… ದೇಶದಲ್ಲಿ ಅದೆಂಥತ ಪ್ರಕರಣಗಳು ಕಣ್ಣಂಚಿನಲ್ಲಿ ನೀರು ತರಿಸಿವೆ ನೋಡಿ. ಅನಾರೋಗ್ಯ ಪೀಡಿತ ತಂದೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿಸಿಕೊಂಡು ಆಟೋರಿಕ್ಷಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ಮಗನನ್ನು ಪೊಲೀಸರು ತಡೆದಿದ್ದಾರೆ. ಬಳಿಕ ದಿಕ್ಕು ತೋಚದ ಮಗ ತನ್ನ 65 ವರ್ಷದ ತಂದೆಯನ್ನು ಎತ್ತಿಕೊಂಡು ಸುಮಾರು 1 ಕಿ.ಮೀ ಬರಿಗಾಲಿನಲ್ಲೇ ನಡೆದಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.

https://twitter.com/ANI/status/1250604467491397633

ಆಟೋದಲ್ಲಿ ಹೋಗುತ್ತಿದ್ದ ಇವರನ್ನು ಪೊಲೀಸರು ತಡೆದಿದ್ದಾರೆ. ಆಸ್ಪತ್ರೆಯ ದಾಖಲಾತಿಗಳನ್ನು ಕೇಳಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾದ ಮಗ ತಂದೆಯನ್ನು ಮಗುವಂತೆ ಎತ್ತಿಕೊಂಡು ಒಂದು ಕಿ.ಮೀ ನಡೆದಿದ್ದಾರೆ.

ಈ ಹಿಂದೆ ಮಹಿಳೆಯೊಬ್ಬರು ಸಾವಿರಾರು ಕಿಮೀಟರಲ್ ಸ್ಕೂಟಿ ಓಡಿಸಿಕೊಂಡು ಮಗನಿಗಾಗಿ ಹೋಗಿದ್ದರು. ಪೊಲೀಸ್ ಪೇದೆಯೊಬ್ಬರು 140 ಕಿ.ಮೀಟರ್ ನಡೆದುಕೊಂಡು ಹೋಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇನ್ನೂ ಕ್ಯಾನ್ಸರ್ ಪತ್ರಿಯನ್ನು ಸೈಕಲ್ ಮೇಲೆ ಕೂಡಿಸಿಕೊಂಡು ಚಿಕಿತ್ಸೆಗಾಗಿ 100 ಕಿ.ಮೀಟರ್ ದೂರದಷ್ಟು ಪತಿ ಹೋಗಿದ್ದರು. ಇನ್ನೂ ಲಾಕ್ ಡೌನ್ ನಿಂದಾಗಿ ಅದೆಷ್ಟೋ ಕೂಲಿ ಕಾರ್ಮಿಕರು ನೂರಾರು ಕಿ.ಮೀಟರ್ ನಡೆದುಕೊಂಡು ಹೋಗಿ ತಮ್ಮ ಊರು ಸೇರಿದ್ದಾರೆ.

ಇಂತಹ ಘಟನೆಗಳು ನಿಜಕ್ಕೂ ಕೊರೊನಾ ಮಹಾಮಾರಿಗೆ ಹಿಡಿ ಶಾಪ ಹಾಕುವಂತೆ ಮಾಡಿದೆ. ಇದೆಲ್ಲದರಿಂದ ಮುಕ್ತರಾಗುವುದು ಯಾವಾಗ ಎಂದು ಕಾದು ಕುಳಿತುಕೊಳ್ಳುದೊಂದೇ ಜನರ ಪಾಲಿಗೆ ಉಳಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights