ನಾಗರಹೊಳೆ ಅರಣ್ಯದಲ್ಲಿ ಒಂಟಿ ಸಲಗದ ದಾಳಿ : ವಿಡಿಯೋ ನೋಡಿದ ಮಂದಿ ಶಾಕ್!

ನಾಗರಹೊಳೆ ಅರಣ್ಯದಲ್ಲಿ ಒಂಟಿ ಸಲಗದ ದಾಳಿ ಮಾಡಿದ ಘಟನೆ ವೀರನಹೊಸಳ್ಳಿ ರೆಂಜ್‌ನಲ್ಲಿ ನಡೆದಿದ್ದು ವಿಡಿಯೋ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.

ಅರಣ್ಯ ಇಲಾಖೆ ಕ್ಯಾಂಟರ್ ವಾಹನದ ಮೇಲೆ ಒಂಟಿ ಸಲಗ ಆನೆ ದಾಳಿ ನಡೆಸಿದೆ. ರಸ್ತೆ ಮಧ್ಯೆ ತೆರಳುತ್ತಿದ್ದಾಗ ವಾಹನ ಕಂಡು ಕೋಪಗೊಂಡ ಆನೆ ಏಕಾಏಕಿ ವಾಹನದ ಮೇಲೆ ದಾಳಿಗೆ ಮುಂದಾಗಿದೆ.

ತಕ್ಷಣ ಹಿಂಬದಿಯ ಮೂಲಕ ವಾಹನ ಓಡಿಸಲು ಮುಂದಾದ ಚಾಲಕನ ಪ್ರಯತ್ನ ಸಫಲವಾಗಲಿಲ್ಲ. ಮುಂಬದಿಯಿಂದ ಬಂದ ಆನೆ ವಾಹನದ ಮೇಲೆ ದಾಳಿ ಮಾಡಿದೆ.

ದಾಳಿಯಿಂದ ಕ್ಯಾಂಟರ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಜು ಪುಡಿಪುಡಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights