ಪೆಟ್ರೋಲ್‌, ಡಿಸೆಲ್ ಬೆಲೆಯಲ್ಲಿ ಭಾರಿ ಏರಿಕೆ; ಇಂದಿನ ತೈಲ ದರ ಎಷ್ಟು ಗೊತ್ತೆ?

ಲಾಕ್‌ಡೌನ್‌ನಿಂದಾಗಿ ದೇಶದ ಜನರು ತತ್ತಿರಿಸಿಹೋಗಿದ್ದಾರೆ. ಒಂದೆಡೆ ಉದ್ಯೋಗಗಳನ್ನು ಕಳೆದುಕೊಂಡು ದುಡಿಮೆಯೇ ನಿಂತುಹೋಗಿದ್ದರೆ, ಇನ್ನೊಂದೆಡೆ ಬದುಕಿನ ನಿರ್ವಹಣೆಯ ಚಿಂತೆ ಕಾಡಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗುತ್ತಲೇ ಇದೆ.

ಕಳೆದ ಎಂಟು ದಿನಗಳಿಂದ ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗುತ್ತಿದ್ದು, ದೇಶದ ಮಹಾನಾಗರಗಳಲ್ಲಿ ತೈಲ ದರಗಳು ಹೆಚ್ಚಾಗಿವೆ. ಇಂದಿನ ತೈಲದರಗಳ ಪಟ್ಟಿ ಹೀಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 75.78 ರೂ.(62 ಪೈಸೆ ಏರಿಕೆ)
ಡೀಸೆಲ್: 74.03 ರೂ.(64 ಪೈಸೆ. ಏರಿಕೆ)

ವಾಣಿಜ್ಯ ರಾಜಧಾನಿ ಮುಂಬೈ
ಪೆಟ್ರೋಲ್: 82.70 ರೂ.(62 ಪೈಸೆ ಏರಿಕೆ)
ಡೀಸೆಲ್: 72.64 ರೂ.(64 ಪೈಸೆ. ಏರಿಕೆ)

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ
ಪೆಟ್ರೋಲ್: 77.64 ರೂ.(62 ಪೈಸೆ ಏರಿಕೆ)
ಡೀಸೆಲ್: 69.80 ರೂ(64 ಪೈಸೆ. ಏರಿಕೆ)

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್: 79.53 ರೂ.(62 ಪೈಸೆ ಏರಿಕೆ)
ಡೀಸೆಲ್: 72.18 ರೂ.(64 ಪೈಸೆ. ಏರಿಕೆ)

ರಾಜ್ಯ ರಾಜಧಾನಿ ಬೆಂಗಳೂರು
ಪೆಟ್ರೋಲ್: 78.23 ರೂ.(62 ಪೈಸೆ ಏರಿಕೆ)
ಡೀಸೆಲ್:70.39 ರೂ(64 ಪೈಸೆ. ಏರಿಕೆ)

ಕಳೆದ ಎಂಟು ದಿನಗಳಿಂದ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲೂ ತೈಲ ದರಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹಸಿದ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights