ಪ್ರಣಯ್‌ ಕೊಲೆಗೆ ಎರಡು ಕೋಟಿ ಮೌಲ್ಯದ ಜಮೀನು ಮಾರಿದ್ದ ಮಾರುತಿ ರಾವ್

ದೇಶದಲ್ಲಿ ಪ್ರೀತಿಗೆ ಅಡ್ಡಿಯಾದ ಜಾತಿ ವ್ಯವಸ್ಥೆಗೆ ಸಾಕ್ಷಿಯಾಗಿ  ದಲಿತ ಯುವಕ ಪ್ರಣಯ್ ಕೊಲೆಯ ಹಿಂದಿನ ರಹಸ್ಯಗಳು ಪೋಲೀಸರು  ನ್ಯಾಯಾಲಯಕ್ಕೆ ಸಲ್ಲಿಸಿದ ಜಾರ್ಜ್ ಶೀಟ್‌ನಿಂದ ಹೊರ ಬಂದಿವೆ. ತೆಲಂಗಾಣದ ಮಿರ್ಯಾಲ ಗೂಡದಲ್ಲಿ ಪ್ರೀತಿಸಿ ಮದ್ವೇಯಾಗಿದ್ದ ಪ್ರಣಯ್ ಮತ್ತು ಅಮೃತಳ ಬಗ್ಗೆ ಸಿಟ್ಟಾದ ಹುಡುಗಿಯ ತಂದೆ ಮಾರುತಿರಾವ್ ಪ್ರಣಯ್‌ನನ್ನು ಭೀಕರವಾಗಿ ಕೊಲ್ಲಿಸಿದ್ದ. ಕೆಲವು ದಿನಗಳ ಹಿಂದೆ ಮಾರುತಿ ರಾವ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕೇಸು ಈಗ ನ್ಯಾಯಾಲಯದ ಮುಂದೆ ಬಂದಿದ್ದು ಪೋಲೀಸರು  ಸಲ್ಲಿಸಿದ 1200ಪುಟಗಳ ಚಾರ್ಜ್‌ಶೀಟ್‌ನಲ್ಲಿ ಈ ಕೊಲೆಯ ಸಂಚು ನಡೆದ ರೀತಿಯನ್ನು ದಾಖಲಿಸಿದ್ದಾರೆ.  ಸೀನಿಮೀಯ ರೀತಿಯಲ್ಲಿ ನಡೆದೆರುವ ಈ ಕೊಲೆ ಎರಡು ಕುಟುಂಬಗಳ ಕನಸಗಳನ್ನು ಸಹ ಕೊಂದು ಹಾಕಿದೆ.

ಮಾರುತಿ ರಾವ್ ತನ್ನ ಮಗಳು ಅಮೃತ ಪ್ರೀತಿಸುತ್ತಿರುವ ಬಗ್ಗೆ ತಿಳಿದ ಕೂಡಲೇ …. ಪ್ರೀತಿ ಬೆಳೆಯುವಾಗಲೇ ಅದನ್ನು ಮುರಿದು ಬಿಡಬೇಕು ಎಂದು ಪ್ರಯತ್ನಿಸಿದ್ದಾರೆ. ಇದರಲ್ಲಿ ಸಫಲವಾಗದೆ ಪಿತೂರಿ ಮಾಡಿ ದಾಳಿ ಮಾಡಿ …ಕೊಲ್ಲುವ ಯೋಚನೆ ಮಾಡಿದ್ದಾನೆ.  ಮತ್ತು ಸುಫಾರಿ ನೀಡಿ ಈ ಕೊಲೆ ಮಾಡಿಸಿರುವುದಾಗಿ ತಿಳಿದು ಬಂದಿದೆ.

ಗಂಡ ಪ್ರಣಯ್ ಕಳೆದುಕೊಂಡ ಅಮೃತ ತನ್ನ ಮಗ ನಿಹಾನ್ ಜೊತೆ

ಮಾರುತಿರಾವ್ ಸಹೋದರ ಶ್ರವಾಣ್ ಕೂಡ ಅವರ ಅಣ್ಣನ ಅಣತಿಯಂತೆ ಪ್ರಣಯ್ ಮೇಲೆ ದಾಳಿ ನಡೆಸಿ ಬೆದರಿಸಿದ್ದ ಆದರೆ ಇದಕ್ಕೆ ಪ್ರಣಯ್‌ ಹೆದರಿರಲಿಲ್ಲ.  ಹಾಗಾಗಿ ಪ್ರಣಯ್‌ನನ್ನು ಮುಗಿಸುವುದು ಒಂದೇ ದಾರಿ ಎಂದು ತೀರ್ಮಾನಿಸಿ ಸುಫಾರಿ ಕೊಟ್ಟಿದಾರೆ. ಈ ಕೊಲೆಯನ್ನು ಅತ್ಯಂತ ಯೋಜಿತವಾಗಿ ಮಾಡಿರುವ ಪಾತಕಿಳು ಅನ್ಯಾಯವಾಗಿ ಆಸೆಕಂಗಳ ಯುವಕನನ್ನು ಮುಗಿಸಿ ಹಾಕಿದ್ದಾರೆ.ಈ ಸುಫಾರಿ ನೀಡಲು 2025 ಗಜಗಳಷ್ಟು ಸ್ಥಳವನ್ನು 2ಕೋಟಿರೂಗಳಿಗೆ ಮಾರಟ ಮಾಡಿದ್ದಾರೆ‌. ಹಣ ಸಿದ್ದಮಾಡಿಕೊಂಡ ನಂತರ ತನ್ನ ಸ್ನೇಹಿತ ಕರೀಂ ಮೂಲಕ ಪಾತಕಿ ಬಾರಿಯನ್ನು ಸಂಪರ್ಕಿಸಿದ್ದಾರೆ. ಆತನ ಮೂಲಕ ಆಸ್ಗರ್ ಆಲಿ ಪರಿಚಯ ಮಾಡಿಕೊಂಡು ಆತನಿಗೆ 15ಲಕ್ಷಗಳಷ್ಟು ಮುಂಗಡವಾಗಿ ಹಣ ನೀಡಿದ್ದಾರೆ.

ರಾಜಮಂಡ್ರಿ ಜೈಲಿನಲ್ಲಿ ತನಗೆ ಪರಿಚಯವಾದ ಬಿಹಾರ್‌ಗೆ ಸೇರಿದ ಶುಭಾಷ್ ಶರ್ಮನಿಗೆ ಆಸ್ಗರ್ ಆಲಿ ಇಜ ಕೆಲಸವನ್ನು ಒಪ್ಪಿಸಿದ್ದಾನೆ.  ಮೊದಲು ಪ್ರಣಯ್‌ನನ್ನು 2018ರ ಸೆಪ್ಟೆಂಬರ್ 12ರ ಗಣೇಶನ ಹಬ್ಬದ ದಿನ ಗಣೇಶ ಮೂರ್ತಿಯನ್ನು ತರಲು ಬಂದಿದ್ದಾಗಿ ಕೊಲ್ಲಬೇಕೆಂದು ಪ್ರಯತ್ನಿಸಿ ಜನಸಂಧಣಿ ಜಾಸ್ತಿಯಾಗಿ ಅಲ್ಲಿ ಕೈ ಬಿಟ್ಟೊದ್ದರು . ನಂತರ 14 ರಂದು ಆಸ್ಫತ್ರೆಗೆ ಗರ್ಭಿಣಿ ಅಮೃತಳ ಆರೋಗ್ಯ ತಪಾಸಣೆಗೆ ಬರುವ ವಿಷಯ ಅಮೃತ ತನ್ನ ತಾಯಿಗೆ ಕರೆ ಮಾಡಿ ಹೇಳಿದ್ದಳು. ಈ ವಿಷಯ ತಿಳಿದ ಮಾರುತಿರಾವ್ ಇದನ್ನು ಬಾರಿಗೆ ತಿಳಿಸಿದ. ಇದರಿಂದ ಹೈದಾರಾಬಾದ್‌ನಲ್ಲಿದ್ದ ಶುಭಾಷ್ ಶರ್ಮ ಏಕಾಏಕಿಯಾಗಿ  ಮಿರ್ಯಾಲಗೂಡಕ್ಕೆ ಧಾವಿಸಿದ್ದಾನೆ. ಆಸ್ಗರ್ ಅಲಿ ಆಟೋ ಡ್ರೈವರ್ ನಿಜಾಂ ಜೊತೆ ಸೇರಿ ಆಟೋದಲ್ಲಿ ಆಸ್ಪತ್ರೆ ಕಡೆಗೆ ಹೊರಟ, ಶುಭಾಷ್ ಶರ್ಮ ದ್ವಿ ಚಕ್ರ ವಾಹನದ ಮೇಲೆ ಆಸ್ಫತ್ರೆಗೆ ತೆರಳಿದ . ಶುಭಾಷ್ ಶರ್ಮ ಸರಿಯಾದ  ಸಮಯ ನೋಡಿ ಪ್ರಣಯ್‌ನನ್ನು ಕತ್ತಿಯಿಂದ  ಸಾಯಿಸಿದರು. ಆ ನಂತರ ಆ ಮೂವರು ಪರಾರಿ ಆಗಿದ್ದಾರೆ. ಪ್ರಣಯ್‌ನನ್ನು ಕೊಲ್ಲಲು ಉಪಯೋಗಿಸಿದ ಕತ್ತಿಯನ್ನು ಸ್ಥಳೀಯ ಕೆನಾಲ್‌ನಲ್ಲಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

Pranay amrutha
Pranay Amrutha

ಕೆಟ್ಟ ಜಾತಿ ಮನಸ್ಥಿತಿಯಿಂದ ನಮ್ಮ ದೇಶದಲ್ಲಿ ಸಾಕಷ್ಟು ಮರ್ಯಾದ ಹತ್ಯೆಗಳು ನಡೆದು ಜಾಗತಿಕವಾಗಿ ತಲೆ ತಗ್ಗಿಸುವಂತಾಗಿದೆ. ಆದರೆ ತುಂಬಾ ಓದಿಕೊಂಡಿದ್ದ ಇಬ್ಬರು ಫ್ರೌಢ ಮನಸ್ಸಿನ ಮೇಲ್ಜಾತಿಯ ಹುಡುಗಿ , ಸಮಾಜದಲ್ಲಿ ಕೆಳಜಾತಿಯೆಂದು ಗುರುತಿಸಿರುವ ಕುಟುಂಬದ ಹುಡುಗ ಜೊತೆಗೂಡುವುದನ್ನು ಈ ಸಮಾಜ ಸಹಿಸಿದೆ ಕೊಲೆ ಮಾಡಿದೆ. ಆದರೂ ಸಹ ಅಮೃತ ತನ್ನ ಗಂಡ ಸತ್ತನಂತರ ದಿಟ್ಟವಾಗಿ ನಿಂತು ಗಂಡನ ಕುಟುಂಬದ ಜೊತೆ ನಿಂತು ನ್ಯಾಯಕ್ಕಾಗಿ ಮಾಡಿದ ಹೋರಾಟ ಶ್ಲಾಘನೀಯವಾಗಿದೆ.  ಕೆಲವು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆ ಮಾಡಿಕೊಂಡ ತಂದೆ  ಮಾರುತಿರಾವ್‌ನ ಅಂತಿಮ ದರ್ಶನ ಪಡೆಯಲು ಹೋಗಿದ್ದ ಅಮೃತಳನ್ನು ಆ ಕುಟುಂಬದ ಕೆಲವು ಸ್ವಾರ್ಥಿಗಳು ತಡೆದು ಅವಮಾಣಿಸಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾಗಳಲ್ಲಿ ಜಾತಿ ಮನಸ್ಥಿತಿಯ ಹುಳಗಳ ಅಮೃತಳನ್ನ ಟಾರ್ಗೆಟ್ ಮಾಡಿ ಟ್ರೋಲ್ ಕೂಡ ಮಾಡಿದ್ದಾರೆ. ಇಷ್ಟೆಲ್ಲ ಆದರೂ ತಂದೆ ಆಸ್ತಿ ನನಗೆ ಬೇಡ ತಾಯಿ ಬಂದರೆ ಆಕೆಯ ಜವ್ದಾರಿ ತೆಗೆದುಕೊಳ್ಳುವುದಾಗಿ ದಿಟ್ಟದನಿಯಲ್ಲಿ ಅಮೃತಾ ಹೇಳಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights