ಮನುಷ್ಯನ ಮಾಂಸವನ್ನು ಪ್ರೈ ಮಾಡಿದ ಕುಡುಕ : ಕೊರೊನಾ ತಪ್ಪಿಸಲು ಮದ್ಯಪಾನ ಮಾಡಿ ಬಲಿ

ಮದ್ಯಪಾನ ಮಾಡಿದರೆ ಕೊರೊನಾ ಸೋಂಕಿನಿಂದ ದೂರವಾಗಬಹುದು ಎನ್ನುವ ಸುಳ್ಳು ಸುದ್ದಿಯನ್ನು ನಂಬಿ ಕುಡಿದ ಜನ ಪ್ರಾಣ ಬಿಟ್ಟ ಘಟನೆ ಇರಾನ್ ನ ನೈರುತ್ಯ ಪ್ರದೇಶದ ಖುಜೆಸ್ತಾನ್ ನಡೆದಿದೆ. ಇನ್ನೂ ಉತ್ತರ ಪ್ರದೇಶದ ಬಿಜ್ನೋರ್ ದಲ್ಲಿ ಕುಡುಕನೊಬ್ಬ ಮನುಷ್ಯನ ಮಾಂಸವನ್ನು ಪ್ರೈ ಮಾಡಿದ ಘಟನೆ ಎಲ್ಲರನ್ನ ಬೆಚ್ಚಿ ಬೀಳಿಸಿದೆ.

ಮನೆಗೆ ಬೆಂಕಿ ಹಚ್ಚಿ ಆ ಕಿಚ್ಚಿನಲ್ಲಿ ಅನ್ನ ಮಾಡೋದು ಅಂದ್ರೆ ಇದೇ ಸಂದರ್ಭ ಇರಬೇಕು ನೋಡಿ. ವಿಶ್ವದೆಲ್ಲೆಡೆ ಜನ ಕೊರೊನಾ ಭೀತಿಯಿಂದ ಮನೆಬಿಟ್ಟು ಹೊರಗಡೆ ಬಾರದಂತಾ ಸ್ಥಿತಿ ಇದೆ. ಆದರೆ ಇದೇ ಸಂದರ್ಭವನ್ನು ಬಳಸಿಕೊಳ್ಳುವ ಕೆಲವರು ಸೋಂಕು ತಡೆಯಲು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.

ಹೌದು… ಇಂತಹ ಸುಳ್ಳು ಸುದ್ದಿ ಹಬ್ಬಿ ಇರಾನ್ ನಲ್ಲಿ 36 ಮಂದಿ ಸಾವನಪ್ಪಿದ್ದಾರೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಕೊರೊನಾ ಪೀಡಿತರು ಕಳ್ಳಭಟ್ಟಿ ಸಾರಾಯಿ ಸೇವನೆ ಮಾಡಿದ ಪರಿಣಾಮ ಸಾವನ್ನಪ್ಪಿದ್ದಾರೆ. ಆದಕಾರಣ ಅಲ್ಲಿನ ಸರ್ಕಾರ ಮದ್ಯಸೇವನೆಗೆ ನಿಷೇಧ ಹೇರಿದೆ ಎನ್ನಲಾಗಿದೆ. ಈಗಾಗಲೇ ಇರಾನ್ ನಲ್ಲಿ ಕೊರೊನಾ ಸೋಂಕಿನಿಂದ 237 ಮಂದಿ ಸಾವನಪ್ಪಿದ್ದು, 7,161 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಇನ್ನೂ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಕುಡುಕನೊಬ್ಬ ಮನುಷ್ಯನ ಮಾಂಸ ಪ್ರೈ ಮಾಡಿದ ಭಯಾನಕ ಘಟನೆ ನಡೆದಿದೆ. ಇಂತಹದೊಂದು ಭಯಾನಕ ಕೆಲಸದ ಮಾಡಿದ್ದು 32 ವರ್ಷದ ಸಂಜಯ್ ಎಂಬಾತ. ಕಂಠಪೂರ್ತಿ ಕುಡಿದು ಸ್ಮಶಾನಕ್ಕೆ ಹೋಗಿದ್ದ ಈತ ಅಲ್ಲಿ ಅರೆ ಬೆಂದ ಹೆಣದ ಕೈ ಮತ್ತು ಬೆರಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಮನೆಗೆ ಬಂದು ತವಾದಲ್ಲಿ ಫ್ರೈ ಮಾಡಿದ್ದಾನೆ. ಇದನ್ನು ಕಂಡು ಹೆದರಿದ ಆತನ ಪತ್ನಿ ಈ ವಿಚಾರವನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ.  ಸ್ಥಳೀಯರು ಸಂಜಯ್ ನನ್ನು ಹಿಡಿದು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದು ಶವದ ಮಾಂಸ ಎಂಬುದಾಗಿ ತಿಳಿದುಬಂದಿದೆ.

ಒಟ್ಟಿನಲ್ಲಿ ಕುಡಿಯುವುದರಿಂದ ಕೊರೊನಾ ಸೋಂಕು ತಡೆಯಬಹುದು ಅನ್ನೋ ಮಂದಿ ಎಚ್ಚೆತ್ತುಕೊಳ್ಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights