ಮೊದಲು ಮಾನವನಾಗು: ವಾದ – ವಿವಾದ

ಕೊರೊನ ವಿಚಾರವಾಗಿ ಧರ್ಮವನ್ನ ಎಳೆ ತಂದು ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆಗೆ ಚಿತ್ರನಟ ಡಾಲಿ ಧನಂಜಯ್‌ “ಏನಾದರು ಆಗು‌ ಮೊದಲು ಮಾನವನಾಗು” ಎಂಬ ಕುವೆಂಪು ಅವರ ಸಾಲಿನ ಮೂಲಕ ಪಾಠ ಹೇಳಿದ್ದರು.

ಇಟಲಿಯಲ್ಲಿ ಕೊರೊನಾ ವೈರಸ್‌ ದಾಳಿ: 80 ವರ್ಷ ಮೇಲ್ಪಟ್ಟವರಿಗೆ ತೀವ್ರ ನಿಗಾಘಟಕ ಇಲ್ಲ” ಎನ್ನುವ ಸುದ್ದಿಯ ಕೊಂಡಿಯನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಸೂಲಿಬೆಲೆ, “ಜೀಸಸ್‌ ಎಲ್ಲರನ್ನೂ ಪ್ರೀತಿಸುತ್ತಾರೆ” ಎಂಬ ಟ್ಯಾಗ್‌ ಲೈನ್‌ ಹಾಕಿಕೊಂಡಿದ್ದರು.

ಜೀಸಸ್‌ ಎಲ್ಲರನ್ನು ಪ್ರೀತಿಸಿದರೆ ಈ 80 ವರ್ಷ ಮೇಲ್ಪಟ್ಟವರಿಗೆ ತೀವ್ರನಿಗಾಘಟಕ ಏಕಿಲ್ಲ ಎಂದು ಕ್ರಿಶ್ಚಿಯನ್‌ ಧರ್ಮವನ್ನು ಟ್ರೋಲ್‌ ಮಾಡುವುದು ಅವರ ಉದ್ದೇಶವಾಗಿತ್ತು.

ಚಿತ್ರನಟ ಡಾಲಿ ಧನಂಜಯ್‌ ಅವರು ಸೂಲಿಬೆಲೆಯ ಟ್ವೀಟ್‌ಗೆ “ಏನಾದರೂ ಆಗು ಮೊದಲು ಮಾನವನಾಗು” ಎಂದು ಬರೆದು ರೀಟ್ವೀಟ್‌ ಮಾಡಿದ್ದಾರೆ. ಕ್ರಿಶ್ಚಿಯಾನಿಟಿಯನ್ನು ಟ್ರೋಲ್‌ ಮಾಡಲು ಮುಂದಾಗಿದ್ದ ಸೂಲಿಬೆಲೆ, ಈಗ ತಾವೇ ಟ್ರೋಲ್‌ ಆಗುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

https://twitter.com/Dhananjayaka/status/1239791788233113600

ಸಂಘಪರಿವಾದ ಭಕ್ತರು, ಸೂಲಿಬೆಲೆ ಹಿಂಬಾಲಕರು ಧನಂಜಯ್‌ ಅವರ ವೈಯಕ್ತಿಯ ತೇಜೋವಧೆಗೆ ಇಳಿದಿದ್ದಾರೆ. ಸಿನಿಮಾದಲ್ಲಿ ಧನಂಜಯ್‌ ಅಭಿನಯಿಸಿರುವ ವಿಲನ್‌ ಕ್ಯಾರೆಂಕ್ಟರ್‌ಗಳ ಚಿತ್ರಗಳನ್ನು ಪೋಟೋ ಶಾಪ್‌ ಮಾಡಿ ಹರಿಬಿಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಲವರು “ಧನಂಜಯ್‌ ಏನ್‌ ಹೇಳಿದ್ದಾರೆ, ಮೊದಲು ಮಾನವನಾಗು ಅಂತ ಹೇಳಿದ್ದಾರೆ . ಅದೇ ತಪ್ಪಾ, ಆತ ಹಂದಿ-ನರಿ-ಕೋಳಿ-ಕಿರುಬನಾಗು ಎಂದೇನೂ ಹೇಳಿಲ್ಲವಲ್ಲಾ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಸೂಲಿಬೆಲೆಯ ಜನ್ಮಾಂತರ್ಜಾಲವನ್ನು ಜಾಲಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್‌ ಆಗಲು ಆರಂಭವಾದ ನಂತರ ಸುಲಿಬೆಲೆ ಮತ್ತೊಂದು ಟ್ವೀಟ್‌ ಮಾಡಿದ್ದು, ‘‘ನನ್ನ ಟ್ವೀಟ್‌ ಅನ್ನು ನಾನು ಸರಿಮಾಡಿಕೊಳ್ಳುತ್ತಿದ್ದೇನೆ, ಪ್ರಪಂಚದಾದ್ಯಂತ ಸಂಚರಿಸುವ ಮಿಷನರಿಗಳ ಸಂದೇಶವನ್ನು ನಾನು ಟ್ವೀಟ್‌ನಲ್ಲಿ ಹೇಳೀದ್ದೇನೆ. ದೇವರು ಎಲ್ಲರನ್ನೂ ಒಂದೇ ಸಮನಾಗಿ ಪ್ರೀತಿ ಮಾಡುತ್ತಾನೆ. ಆದರೆ 80 ವರ್ಷ ಮೇಲ್ಪಟ್ಟವರನ್ನು ಹೊರತು ಪಡಿಸಿ’ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಇದೂ ಕೂಡ ವಿವಾದಾಸ್ಪದವೇ ಆಗಿದೆ ಎಂಬುದು ಸಾಮಾಜಿಕ ಜಾಲತಾಣಿಗರ ಅಭಿಪ್ರಾಯ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights