ರಾಜ್ಯದಲ್ಲಿಂದು 63 ಕೊರೊನಾ ಪ್ರಕರಣ ಪತ್ತೆ : 925ಕ್ಕೇರಿದ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು 63 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗಿನ ವರದಿ ಪ್ರಕಟವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.

ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು.  ಆದರೆ ಸಂಜೆ ವೇಳೆಗೆ 21 ಪ್ರಕರಣಗಳು ದಾಖಲಾಗಿದ್ದು ಒಟ್ಟು ನಿನ್ನೆ ಸಂಜೆಯಿಂದ ಇಂದು ಸಂಜೆ ವೇಳೆಗೆ 63 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಹೊರ ರಾಜ್ಯಬಂದಿರುವ 31 ಜನರಿಗೆ ಸೋಂಕು ಬಂದಿದೆ. ದಾವಣಗೆರೆಯಲ್ಲಿ 12, ಕೋಲಾರ 5, ಗದಗ 3, ಬಾಗಲಕೋಟೆಯಲ್ಲಿ 15, ಧಾರವಾಡ 9, ಹಾಸನ 5, ಬೀದರ್ 2, ಕಲಬುರಗಿ 1, ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಯಾದಗಿರಿ 2, ಮಂಡ್ಯ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮತ್ತು ಬೆಂಗಳೂರಿನಲ್ಲಿ 4 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

ಯಾದಗಿರಿ, ಮಂಡ್ಯ, ಬಾಗಲಕೋಟೆ, ಧಾರವಾಡ , ಹಾಸನ, ಗದಗ, ಕೋಲಾರ , ದಾವಣಗೆರೆ ಜಿಲ್ಲೆಗಳಿಗೆ ಅಹಮದಾಬಾದ್, ಮುಂಬೈ, ಒಡಿಶಾ, ಚೆನ್ನೈ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳವರಲ್ಲಿ ಸೋಂಕು ಪತ್ತೆಯಾಗಿದೆ.

ಯಾದಗಿರಿಗೆ ಅಹಮದಾಬಾದ್ ನಿಂದ ಆಗಮಿಸಿದ 2, ಮಂಡ್ಯಕ್ಕೆ ಮುಂಬೈನಿಂದ ಆಗಮಿಸಿದ ಓರ್ವರು, ಬಾಗಲಕೋಟೆಯ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 15, ಧಾರವಾಡದ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ 12, ಹಾಸನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ಐವರು, ಗದಗದಲ್ಲಿ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಮೂವರು, ಕೋಲಾರಕ್ಕೆ ಚೆನ್ನೈ ಮತ್ತು ಒಡಿಶಾಗೆ ಪ್ರಯಾಣ ಬೆಳೆಸಿದ ಐವರು ಮತ್ತು ದಾವಣಗೆರೆಯಲ್ಲಿ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 925 ತಲುಪಿದೆ. ಇವರ ಪೈಕಿ 433 ಜನರು ಗುಣಮುಖರಾಗಿದ್ದಾರೆ. 32 ಜನರು ಮೃತಪಟ್ಟಿದ್ದಾರೆ. ಉಳಿದ 460ರಲ್ಲಿ 449 ಜನರು ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ. 11 ಜನರನ್ನು ಐಸಿಯುನಲ್ಲಿ ಇರಿಸಲಾಗಿದೆ. ಮಂಗಳವಾರ 7 ಜನರು ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆಯಲ್ಲಿ 6, ವಿಜಯಪುರದಲ್ಲಿ ಒಬ್ಬರು ಬಿಡುಗಡೆ ಹೊಂದಿದ್ದಾರೆ.

ಬೆಂಗಳೂರು ನಗರದಲ್ಲಿ 182 ಸೋಂಕಿತರಿದ್ದು, ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆಯಾಗಿದೆ. ಬೆಳಗಾವಿ 113 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೈಸೂರು 88 ಪ್ರಕರಣಗಳೊಂದಿಗೆ 3, ದಾವಣಗೆರೆ 83 ಪ್ರಕರಣಗಳೊಂದಿಗೆ ನಾಲ್ಕನೇ ಮತ್ತು ಕಲಬುರಗಿ 73 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿದೆ.

https://twitter.com/DHFWKA/status/1260096397099008003

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights