ರಾಜ್ಯದಲ್ಲಿಂದು 69 ಮಂದಿಗೆ ಸೋಂಕು : ಸೋಂಕಿತರ ಸಂಖ್ಯೆ 1056ಕ್ಕೇರಿಕೆ!

ರಾಜ್ಯದಲ್ಲಿ ಇಂದು 69 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1056ಕ್ಕೆ ಏರಿಕೆಯಾಗಿದೆ. ಜೊತೆಗೆ ಹೆಮ್ಮಾರಿಗೆ ಬೀದರ್‍ನ ಓರ್ವ ಸೋಂಕಿತ ಮೃತಪಟ್ಟಿದ್ದಾರೆ. ಬೀದರ್, ಮಂಡ್ಯ, ಕಲಬುರಗಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ.

ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದ ವರೆಗೂ 45 ಕೊರೊನಾ ಕೇಸ್ ದಾಖಲಾಗಿವೆ. ಈ ಪೈಕಿ ಉಡುಪಿ 5, ದಕ್ಷಿಣ ಕನ್ನಡ 16 ಬೀದರ್ 3, ಬಾಗಲಕೋಟೆ 1, ಕೋಲಾರ 1, ಚಿತ್ರದುರ್ಗ 2, ಹಾಸನ 3, ಬೆಂಗಳೂರಿನಲ್ಲಿ 13 ಮತ್ತು ಶಿವಮೊಗ್ಗ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಮಂಡ್ಯದ 13, ಬೀದರ್ ಹಾಗೂ ಹಾಸನದ ತಲಾ 4, ಕಲಬುಗಿಯ ಮೂವರಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ ಮಂಡ್ಯದ 13 ಜನರೂ ಸೇರಿದಂತೆ ಒಟ್ಟು 18 ಮಂದಿ ಸೋಂಕಿತರು ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ರೋಗಿ-1041 ಬೀದರ್‌ನ  52 ವರ್ಷದ ಪುರುಷ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಹೈದರಾಬಾದ್ ಪ್ರಯಾಣ ಹಿನ್ನೆಲೆ ಹೊಂದಿದ್ದರು. ಈ ಮೂಲಕ ಬೀದರ್‌ನಲ್ಲಿ ಕೊರೊನಾ ಸೋಂಕಿನಿಂದ ಈವರೆಗೂ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಹೆಮ್ಮಾರಿಗೆ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

69 ಸೋಂಕಿತರಲ್ಲಿ 4 ಬಾಲಕಿಯರು, ಪುರುಷರು 20, ಮಹಿಳೆಯರು 9, ಯುವಕರು 16 , ಒಂದು ಮಗು, ವೃದ್ಧರು 7, ಬಾಲಕರು 4, ಇಬ್ಬರು ಯುವತಿಯರಿದ್ದಾರೆ. ಆದರೆ ನಿನ್ನೆಗೆ ಹೋಲಿಸಿದರೆ ಇಂದು ಯುವಕರಿಗೇ ಹೆಚ್ಚು ಸೋಂಕು ಹರಡಿರುವುದು ಕಂಡು ಬರುತ್ತದೆ. ನಂತರದಲ್ಲಿ 40 ವರ್ಷ ಮೇಲ್ಪಟ್ಟ ಪುರುಷರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಿರುವುದು ಕಂಡು ಬರುತ್ತದೆ. ಇನ್ನೂ ಮಕ್ಕಳ ವಿಚಾರಕ್ಕೆ ಬಂದರೆ ಇಬ್ಬರು ಬಾಲಕ ಹಾಗೂ ಇಬ್ಬರು ಬಾಲಕಿಯರಿಗೆ ಸೋಂಕು ತಗುಲಿದ್ದಿ ಒಂದು ಮಗು ಕೂಡ ಸೇರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights