ವಿಶ್ವದೆಲ್ಲೆಡೆ ಜನರ ನಿದ್ದೆಗೆಡಿಸಿದ ಕೊರೊನಾ : 3300ಕ್ಕೇರಿದ ಸಾವಿನ ಸಂಖ್ಯೆ…!
ಚೀನಾದ ವುಹಾನ್ ನ ಪ್ಯಾಂತ್ಯದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ವೇಗದಲ್ಲಿ ಮನುಷ್ಯನ ದೇಹಗಳನ್ನ ಯಾವುದೇ ನಿರ್ಬಂಧವಿಲ್ಲದೇ ಸೇರುತ್ತಿದೆ. ಪರಿಣಾಮ ಕೊರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಜೊತೆಗೆ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿಶ್ವದಲ್ಲಿ ಜನರ ನಿದ್ದೆಗೆಡಿಸಿದೆ.
ಹೌದು… ಮಹಮಾರಿ ಕೊರೊನಾ ವೈರಸ್ ಗೆ ವಿಶ್ವಾದ್ಯಂತ ಸುಮಾರು 3300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಅಂತೆಯೇ ಗುರುವಾರದ ವೇಳೆಗೆ 2,241 ಹೊಸ ದೃಢಪಟ್ಟ ಪ್ರಕರಣಗಳು ದಾಖಲಾಗಿದ್ದು, ಒಟ್ಟು 95,333 ಜನರಿಗೆ ಸೋಂಕು ತಲುಗಿದೆ ಎಂದು ಡಬ್ಲ್ಯುಎಚ್ಒದ ಇತ್ತೀಚಿನ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಚೀನಾದಲ್ಲಿ 3,042 ಮಂದಿಗೆ ಹೊಸದಾಗಿ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ಚೀನಾವೊಂದರಲ್ಲೇ ಸೋಂಕಿತರ ಸಂಖ್ಯೆ 80,565ಕ್ಕೇರಿದ್ದು, ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 95,333 ಸಾವಿರಕ್ಕೇರಿದೆ. ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ.