ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್ : ಜೂನ್ 1 ರಿಂದ ಹೊಸ ಎಪಿಸೋಡ್ ಸ್ಟಾರ್ಟ್

ಕೊರೊನಾ ವೈರಸ್ ಹರಡುವ ಭೀತಿಯಿಂದ ಮಾರ್ಚ್ 19 ರಿಂದ ಬಂದ್ ಆಗಿದ್ದ ಧಾರವಾಹಿ ಶೂಟಿಂಗ್ ಇಂದಿನಿಂದ ಪುನ: ಆರಂಭಗೊಳ್ಳಲಿದ್ದು, ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಂತಾಗಿದೆ.

ಹೌದು… ಇಂದಿನಿಂದ ಸೀರಿಯಲ್ ಶೂಟಿಂಗ್ ಆರಂಭಗೊಂಡಿದ್ದು, ಜೂನ್ ಒಂದರಿಂದ ಹೊಸ ಎಪಿಸೋಡ್ ಗಳು ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲಿವೆ. ಈ ಮೂಲಕ ಶೂಟಿಂಗ್ ಇಲ್ದೆ ಮಂಕಾಗಿದ್ದ ಕಿರುತೆರೆ ನಟ-ನಟಿಯರ ಮೊಗದಲ್ಲಿ ಮಂದಹಾಸ ಮೂಡಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದ ಕಿರುತೆರೆ ಲೋಕ ಸದ್ಯ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವ ಆಶಾಭಾವವನ್ನು ಹೊಂದಿದೆ.

ಕೊರೊನಾ ಲಾಕ್ ಡೌನ್ ಆರಂಭವಾದಾ ನಮತರ ರಾಜ್ಯದಲ್ಲಿ ಸರಿಸಮಾರು 120 ಧಾರವಾಹಿಗಳು ಶೂಟಿಂಗ್ ಸಂಪೂರ್ಣವಾಗಿ ಬಂದ್ ಮಾಡಿದ್ದವು. ಇದರಿಂದಾಗಿ ಶೂಟಿಂಗ್ ನಲ್ಲಿ ಕೆಲಸ ಮಾಡುವ ಸಣ್ಣ ಕಾರ್ಮಿಕರಿಂದ ಹಿಡಿದು ಧಾರವಾಹಿ ನಿರ್ಮಾಪಕ, ನಿರ್ದೇಶಕ ಹಾಗೂ ಹೂಡಿಕೆದಾರರಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಸಾಕಷ್ಟು ನಷ್ವನ್ನೂ ಅನುಭವಿಸಿದ್ದು, ಸರ್ಕಾರಕ್ಕೆ ಕಿರುತೆರೆ ಆರಂಭಕ್ಕೆ ಅನುಮತಿ ಕೋರಿ ಅರ್ಜಿಕೂಡ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ಧಾರವಾಹಿ ಶೂಟಿಂಗ್ ಆರಂಭಗೊಂಡಿದೆ.

ಆದರೆ ಶೂಟಿಂಗ್ ವೇಳೆ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ವೈರಸ್ ಹರಡದಂತೆ ಟೆಲಿವಿಷನ್ ಅಸೋಸಿಯೇಷನ್ ಮುಂಜಾಗೃತ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ. ಮಾತ್ರವಲ್ಲದೇ ಕಲಾವಿದರು ಮೇಕಪ್ ಕಿಟ್ ಗಳನ್ನು ತಾವೇ ತರಬೇಕು. ಶೂಟಿಂಗ್ ಸ್ಥಳದಲ್ಲಿ 20 ಕ್ಕೂ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್‍ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ.

ಹೀಗೆ ಕೆಲ ಷರತ್ತುಗಳ ಅನ್ವಯ ಧಾರವಾಹಿ ಶೂಟಿಂಗ್ ಗೆ ಅನುಮತಿ ನೀಡಲಾಗಿದ್ದು, ಇಂದಿನಿಂದ ಶೂಟಿಂಗ್ ಆರಂಭಗೊಂಡಿದೆ. ಜೂನ್ 1 ರಿಂದ ಹೊಸ ಎಪಿಸೋಡ್ ಗಳು ಪರದೆ ಮೇಲೆ ಕಾಣಲಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights