ಹಳ್ಳಿಗಳಲ್ಲಿ ಸಿಗಲಿದೆ 10 ರೂಗೆ ಎಲ್‌ಇಡಿ ಬಲ್ಪ್‌

ಗ್ರಾಮೀಣ ಪ್ರದೇಶಗಳಿಗೆ ಎಲ್‌ಇಡಿ ಬಲ್ಬ್ ಒಂದಕ್ಕೆ 10 ರುಪಾಯಿಯಂತೆ ನೀಡಲು ಭಾರತದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್‌ನಿಂದ (EESL) ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರ್ಕಾರದ ಬೆಂಬಲ ಅಥವಾ ಪ್ರೋತ್ಸಾಹಧನ ಏನನ್ನೂ ಪಡೆಯದೆ ಆರು ಕೋಟಿ ಎಲ್‌ಇಡಿ ಬಲ್ಬ್ ವಿತರಿಸಲು ಅದು ಮುಂದಾಗಿದೆ.

ಸರ್ಕಾರಿ ಸ್ಯಾಮ್ಯದ EESLನ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜಾಗತಿಕ ಮಟ್ಟದಲ್ಲೇ ಅತ್ಯಂತ ಕಡಿಮೆ ಬೆಲೆಗೆ EESL ಎಲ್‌ಇಡಿ ಬಲ್ಬ್ ಒದಗಿಸಲಿದೆ. ಆ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಿದೆ ಎಂದಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ UJALA (ಉನ್ನತ್ ಜ್ಯೋತಿ ಬೈ ಅಫೋರ್ಡಬಲ್ ಲೈಟಿಂಗ್ ಫಾರ್ ಆಲ್) ಯೋಜನೆ ಅಡಿಯಲ್ಲಿ ಇದನ್ನು ಪ್ರಸ್ತಾಪ ಮಾಡಲಾಗಿದೆ, ಇದರಿಂದ ವಿದ್ಯುತ್ ಸಹ ಉಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಕ್ಲೀನ್ ಡೆವಲಪ್‌ಮೆಂಟ್ ಮೆಕಾನಿಸಂ (ಸಿಡಿಎಂ) ಅಡಿಯಲ್ಲಿ ಗ್ರಾಮ UJALA ದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆ ಮೂಲಕ ಕಾರ್ಬನ್ ಕ್ರೆಡಿಟ್ಸ್ ಬರಲಿದ್ದು, 2014ರಲ್ಲಿ ಒಂದು ಎಲ್‌ಇಡಿ ಬಲ್ಬ್‌ಗೆ 310 ರುಪಾಯಿಗೆ ಮಾರಲಾಗುತ್ತಿತ್ತು. ಸರ್ಕಾರದ UJALA ಯೋಜನೆ ಅಡಿ ಅದರ ಬೆಲೆಯನ್ನು 70 ರುಪಾಯಿಗೆ ಕಡಿತ ಮಾಡಲಾಯಿತು. ಈಗಿನ ಯೋಜನೆಯು ಅದನ್ನು ಇನ್ನು ದರಕ್ಕೆ ಒದಗಿಸಲಾಗುತ್ತಿದೆ ಎನ್ನಲಾಗಿದೆ.

ಈಗಿನ ಹೊಸ ಯೋಜನೆ ಅಡಿಯಲ್ಲಿ ಕಾರ್ಬನ್ ಕ್ರೆಡಿಟ್ಸ್‌ನಿಂದ 60 ರುಪಾಯಿ ಬಂದರೆ, ಬಾಕಿ 10 ರುಪಾಯಿಯನ್ನು ಗ್ರಾಮೀಣ ಭಾಗದ ಗ್ರಾಹಕರು ಪಾವತಿಸುತ್ತಾರೆ. ಮೊದಲ ಹಂತವಾಗಿ 1 ಕೋಟಿ ಎಲ್‌ಇಡಿ ಬಲ್ಬ್ ವಿತರಿಸಲಾಗುತ್ತದೆ ಎನ್ನಲಾಗಿದ್ದು, ಒಟ್ಟಾರೆ 4000 ಕೋಟಿ ಹೂಡಿಕೆಯಲ್ಲಿ 600 ಕೋಟಿ ರೂ ಗ್ರಾಮೀಣ ಗ್ರಾಹಕರು ಪಾವತಿಸಿದರೆ, 3400 ಕೋಟಿ ರುಪಾಯಿ ಕಾರ್ಬನ್ ಕ್ರೆಡಿಟ್ ಆದಾಯದ ಮೂಲಕ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

EESL ಪ್ರಕಾರ, ಮೌಲ್ಯದ ದೃಷ್ಟಿಯಿಂದ ವಿಶ್ವದ ಎರಡನೇ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಈಗಿನ ವಿದ್ಯುತ್‌ ಬಲ್ಬ್‌ಗಳ ಮೂಲಕ ಹೆಚ್ಚಿನ ವಿದ್ಯುತ್ ವ್ಯರ್ಥವಾಗುತ್ತಿದೆ. ಸದ್ಯದ ವಿದ್ಯುತ್ ಬೇಡಿಕೆ ಉಚ್ಛ್ರಾಯ ಮಟ್ಟದ 9428 ಮೆಗಾವ್ಯಾಟ್ ತಲುಪುವುದನ್ನು UJALA ಯೋಜನೆಯ ಎಲ್‌ಇಡಿ ಬಲ್ಬ್‌ಗಳನ್ನು ಬಳಸುವ ಮೂಲಕ ತಡೆಯಬಹುದು.


ಇದನ್ನೂ ಓದಿಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಹೆಸರಲ್ಲಿ ಸರ್ಕಾರವನ್ನು ಗುರುತಿಸುವುದು ರದ್ದಾಗಬೇಕು: ಹೈಕೋರ್ಟ್‌ನಲ್ಲಿ ಪಿಐಎಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights