Ind vs China : ಗಡಿಯಲ್ಲಿ 2 ಸಾವಿರ ಯೋಧರ ಜಮಾವಣೆ, ಪ್ರತ್ಯುತ್ತರ ಸೇನೆಯ ವಿವೇಚನೆಗೆ..

ಚೀನಾ ಗಡಿಯಲ್ಲಿ ಭಾರತ ಹೆಚ್ಚಿನ  2 ಸಾವಿರ ಯೋಧರ ಜಮಾವಣೆ ಮಾಡಿದೆ.. ಚೀನಾಕ್ಕೆ ಪ್ರತ್ಯುತ್ತರ ನೀಡುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ.. ಈ ವಿಷಯದಲ್ಲಿ ಸೇನೆ ಸಂಪೂರ್ಣ ಸ್ವತಂತ್ರವಾಗಿದೆ.. ಪ್ರತ್ಯುತ್ತರ ಹೇಗೆ, ಎಲ್ಲಿ ಎಂಬುದು ಸೇನೆಯ ವಿವೇಚನೆಗೆ ಎಂದ ಸರಕಾರ ತಿಳಿಸಿದೆ..

ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ನಿಂತಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಈ ವಿಷಯದಲ್ಲಿ ಸೇನೆಗೆ ಪರಮಾಧಿಕಾರ ನೀಡಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಪಡೆ ಮುಖ್ಯಸ್ಥರಿಗೆ ಅಭಯ ನೀಡಿದ್ದಾರೆ.

ಈ ಮಧ್ಯೆ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಜಮಾವಣೆಯೂ ಹೆಚ್ಚಿದೆ. ಈಗಿರುವ ಯೋಧರ ಜೊತೆಗೆ 2 ಸಾವಿರ ಮಂದಿ ಐಟಿಬಿಪಿ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ರಷ್ಯ ಪ್ರವಾಸಕ್ಕೆ ತೆರಳುವ ಮುನ್ನ ಸೇನಾ ಮುಖ್ಯಸ್ಥರ ಜೊತೆ ಚೀನಾ ಗಡಿ ತಂಟೆಯ ಬಗ್ಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಈ ಭರವಸೆ ನೀಡಿದರು.

ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ಅದು ತನ್ನ ಸರಹದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಚೀನಾದ ಈ ಕ್ರಮಕ್ಕೆ ಸ್ಥಳೀಯ ಮಟ್ಟದಲ್ಲಿಯೇ ಭಾರೆತೀಯ ಗಸ್ತು ಯೋಧರು ತಕ್ಕ ಪ್ರಕ್ರಿಯೆ ನೀಡಿದರಾದರೂ 20 ಮಂದಿ ಹುತಾತ್ಮರಾದರು.

ಈ ಘಟನೆ ನಂತರ ಚೀನಾಕ್ಕೆ ಬುದ್ಧಿ ಕಲಿಸುವಂತೆ ಮೋದಿ ಸರಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಂಬಂಧ ಅವರು ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಸರಕಾರದ ನಡೆಯನ್ನು ವಿವರಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights