Ladakh ಗಡಿ ಸಂಘರ್ಷ: ಭಾರತ-ಚೀನಾ ಸೇನೆಯ ಉನ್ನತ ಹೈಕಮಾಂಡರ್ ಸಭೆ

ಲಡಾಕ್ ಗಡಿಯಲ್ಲಿ ಸೃಷ್ಟಿಯಾಗಿರುವ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಇಂದು  ಭಾರತ ಮತ್ತು ಚೀನಾ ಸೈನ ಉನ್ನತ ಹೈಕಮಾಂಡರ್ ಮಟ್ಟದ ಸಭೆ ನಡೆಸಲಿದೆ.

ಎರಡೂ ಮಿಲಿಟರಿಗಳ ಮಧ್ಯೆ ಮಂಗಳವಾರ ಉನ್ನತ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ ಎಂದು ನಿರ್ದಿಷ್ಟ ಮೊದಲೇ ತಿಳಿಸಲಾಗಿತ್ತು. ಎರಡೂ ದೇಶಗಳ ಮೇಜರ್ ಜನರಲ್  ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಮೂರನೇ ಹೈಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ.

ಎರಡೂ ದೇಶಗಳ ಕಮಾಂಡರ್ ಅಧಿಕಾರಿಗಳ ಮಧ್ಯೆ ಮೂರು ಹಂತಗಳಲ್ಲಿ ಸಭೆ ನಡೆಯುತ್ತವೆ, ಇದರಲ್ಲಿ ಸ್ಥಳೀಯ ಕಮಾಂಡರ್ ಅಥವಾ ಕರ್ನಲ್ ಮಟ್ಟ, ಸ್ಟೇಷನ್ ಕಮಾಂಡರ್ (ನಿಯೋಗ ಮಟ್ಟ) ಅಥವಾ ಬ್ರಿಗೇಡಿಯರ್ ಮಟ್ಟ ಮತ್ತು ಅತ್ಯುನ್ನತವಾದದ್ದು ಎಚ್‌ಎಲ್‌ಸಿಎಂ ಎಂದು ಕರೆಯಲ್ಪಡುವ ಪ್ರಮುಖ ಸಾಮಾನ್ಯ ಮಟ್ಟವಾಗಿದೆ. ಇವುಗಳು ತುರ್ತು ಸಭೆಗಳಾಗಿದ್ದು, ತೀರಾ ಅಗತ್ಯವಿರುವ ಸಂದರ್ಭಗಳಲ್ಲಿ ಚರ್ಚೆ ನಡೆಸುವ ಸಭೆಗಳಾಗಿರುತ್ತದೆ. ಉಳಿದ ದಿನಗಳಲ್ಲಾದರೆ ಪ್ರಮುಖ ದಿನಗಳಲ್ಲಿ ಮಾತ್ರ ನಿಗದಿತ ಸಭೆಗಳು ನಡೆಯುತ್ತವೆ.

ಇದುವರೆಗೂ ಇರಡು ಸಭೆಗಳು ನಡೆದಿದ್ದು, ಮೊದಲ ಸಭೆಗಳಲ್ಲಿ ಎರಡೂ ಕಡೆಯವರು ತಮ್ಮ ಅಭಿಪ್ರಾಯಗಳನ್ನು ಮಾತ್ರ ಮಂಡಿಸಿದರು. ಎರಡನೇ ಸಭೆಯಲ್ಲಿ ಕೆಲವು ಅಂಶಗಳ ಮೇಲೆ ಒಪ್ಪಂದವಾಗಿತ್ತು. ಆದರೆ ಆ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಎರಡನೇ ಎಚ್‌ಸಿಎಲ್‌ಎಂ ಸಭೆಯ ನಂತರವೇ ಲಡಾಕ್ ಗಡಿ ಭಾಗದಿಂದ ಭಾರೀ ವಾಹನಗಳನ್ನು ಹಿಂದಕ್ಕೆ ಸರಿಸಲಾಯಿತು. ಈ ಸಭೆಯಲ್ಲಿ ಭಾರತದ ಅಭಿಪ್ರಾಯಗಳನ್ನು ಮಂಡಿಸುಲು ಮತ್ತಷ್ಟು ಅವಕಾಶವಿದೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಲಡಾಕ್ ನಲ್ಲಿ ಮೇ 5-6ರ ಮಧ್ಯರಾತ್ರಿ ಸೈನ್ಯವನ್ನು ಚೀನಾ ನಿಯೋಜಿಸಿತು. ಎರಡು ದೇಶಗಳ ಸೈನಿಕರು ಪಿಂಗೊಂಗ್ ತ್ಸೋ ಸರೋವರದ ಉತ್ತರ ಪಾರ್ಶ್ವದ ಮೇಲೆ ಫಿಂಗರ್ ಫೈವ್ ಎಂಬ ಸ್ಥಳದಲ್ಲಿ ಪರಸ್ಪರ ಘರ್ಷಣೆ ನಡೆಸಿದರು. ಘರ್ಷಣೆಯಲ್ಲಿ ಎರಡೂ ದೇಶಗಳ ಹೆಚ್ಚಿನ ಸಂಖ್ಯೆಯ ಸೈನಿಕರು ಗಾಯಗೊಂಡಿದ್ದಾರೆ. ಅಂದಿನಿಂದ ಲಡಾಕ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights