LockDown: ಹಣಕಾಸಿನ ಸಮಸ್ಯೆಯಿಂದ ಯುವಕ ಆತ್ಮಹತ್ಯೆ

ಲಾಕ್‌ಡೌನ್ ಸಂದರ್ಭಲ್ಲಿ ವ್ಯವಹಾರಗಳು ನಿಂತಿಹೋಗಿದ್ದರಿಂದ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಮುವತ್ತೂರುಕೆರೆ ಸಮೀಪದ ಹುಣಸೆ ಮರಕ್ಕೆ ಮಧು (25) ಎಂಬ ವ್ಯಕ್ತಿಯು ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿದ್ದಾರೆ. ಕೊಡ್ಲಹಳ್ಳಿಯ ಮೂಲ ನಿವಾಸಿಯಾಗಿದ್ದ ಮಧು ಬೆಂಗಳೂರಿನಲ್ಲಿ ಕಾರು ಚಾರಕರಾಗಿ ಕೆಲಸ ಮಾಡುತ್ತಿದ್ದರು. ದೇಶಾದ್ಯಂತ ಲಾಕ್‌ಡೌನ್‌ ಮಾಡಿದ್ದರಿಂದಾಗಿ ತಮ್ಮ ಊರಿಗೆ ಮರಳಿದ್ದರು.

ತಿಂಗಳುಗಳಿಂದ ಉದ್ಯೊಗವಿಲ್ಲದೆ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಮಧು ಮನನೊಂದು ಆತ್ಮಹತ್ಯ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ಅಣ್ಣನಿಗೆ ವಿಡಿಯೋ ಸಂದೇಶ ಕಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights