“ಡಾ.ರಾಜ್ ಬಿಟ್ಟರೆ ಇಡೀ ರಾಜ್ಯವೇ ಅಣ್ಣ ಎಂದು ಕರೆದಿದ್ದು ಕುಮಾರಸ್ವಾಮಿಗೆ ಮಾತ್ರ”

ಡಾ.ರಾಜ್ ಬಿಟ್ಟರೆ ಇಡೀ ರಾಜ್ಯವೇ ಅಣ್ಣ ಎಂದು ಕರೆದಿದ್ದು ಕುಮಾರಸ್ವಾಮಿಗೆ ಮಾತ್ರ. ಕುಮಾರಸ್ವಾಮಿ ಅವರಿಗೆ ಯಾಕೆ ವೈರಾಗ್ಯ.? ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಜಿಟಿಡಿ, ಕುಮಾರಸ್ವಾಮಿ ಅವರಿಗೆ ವೈರಾಗ್ಯ ರಾಜಕೀಯ ನಿವೃತ್ತಿ ಎರಡು ಬೇಡ. ಅವರಿಗೆ ಅದೃಷ್ಟ ಚೆನ್ನಾಗಿದೆ. ಇನ್ನೊಂದು ಬಾರಿ ಮುಖ್ಯಮಂತ್ರಿಯು ಆಗಬಹುದು. ಅವರ ಕುಟುಂಬ ದೈವ ಭಕ್ತ ಕುಟುಂಬ. ಅವರು ಫಿನಿಕ್ಸ್‌ನಂತೆ ಎದ್ದುಬರಬಹುದು. ಅವರು ಅಂದುಕೊಂಡಿದ್ದೆಲ್ಲವು ಆಗಿದೆ. ಮೊದಲ ಬಾರಿ ಎಂಎಲ್‌ಎ ಆದರು ಸಿಎಂ ಆದರು.ಮೂರನೇ ಬಾರಿ ಎಂಎಲ್‌ಎ ಆದರು ಆಗಲೂ ಸಿಎಂ ಆದರು‌. ಆದರೆ ಪಾಪಾ ನಮ್ಮ ರೇವಣ್ಣ ಮಾತ್ರ ಡಿಸಿಎಂ ಆಗೋ ಆಸೆ ಈಡೇರಿಲ್ಲ. ರೇವಣ್ಣ ಡಿಸಿಎಂ ಆಗಲಿ ಅನ್ನೋದು ನನ್ನ ಆಸೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ವೈರಾಗ್ಯ ರಾಜಕೀಯ ನಿವೃತ್ತಿ ಮಾತು ಬೇಡ. ಮೈಸೂರಿನಲ್ಲಿ ವ್ಯಂಗ್ಯವಾಗಿಯೇ ಕುಮಾರಸ್ವಾಮಿಗೆ ಜಿಟಿಡಿ ಸಲಹೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರ :

ಇದೇ ವೇಳೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರ ಮಾತನಾಡಿದ ಜಿಟಿಡಿ,  ರಾಮನಗರ ಜಿಲ್ಲೆಗೆ ತನ್ನದೆ ಆದ ಇತಿಹಾಸ ಇದೆ. ಹೆಸರು ಬದಲಾವಣೆಯ ಚರ್ಚೆ ಬಿಟ್ಟು ಅಭಿವೃದ್ಧಿ ಮಾಡಲಿ. ಪ್ರತಿಕ್ಷೇತ್ರಕ್ಕು ತನ್ನದೇ ಆದ ಇತಿಹಾಸ ಇದೆ. ರಾಮಮಂದಿರ ಯಾಕೆ ಅಯೋಧ್ಯೆಯಲ್ಲೇ ಕಟ್ಟುತ್ತಿದ್ದಾರೆ. ಅದಕ್ಕೆ ಒಂದು ಇತಿಹಾಸ ಇದೆ ಅನ್ನೊ ಕಾರಣಕ್ಕೆ ತಾನೇ. ರಾಮನಗರಕ್ಕು ತನ್ನದೇ ಆದ ಇತಿಹಾಸ ಇದೆ. ರಾಮನಗರದಿಂದ ಹೋದವರು ರಾಜ್ಯವನ್ನ ಆಳಿದಾರೆ. ರಾಮನಗರ ಜಿಲ್ಲೆ ಬೆಂಗಳೂರು, ಮೈಸೂರಿನಂತೆ ಒಂದು ನಗರ ಅಷ್ಟೇ. ರಾಮ ಅಂತ ಹೆಸರಿದೆ ಅನ್ನೋ ಕಾರಣಕ್ಕೆ ಬದಲಾವಣೆ ಬೇಡ. ಈ ಬಗ್ಗೆ ಚರ್ಚೆ ಬಿಟ್ಟು ಅಭಿವೃದ್ಧಿ ಮಾಡಲಿ ಎಂದಿದ್ದಾರೆ.

ಹುಣಸೂರು ಬೈ ಎಲೆಕ್ಷನ್ ಹಾಗೂ ಮೇಯರ್ ಚುನಾವಣೆ ವಿಚಾರ :

ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತಾನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತಾನಾಡದೆಯೆ ರಾಜಕಾರಣ ಮಾಡುತ್ತೇನೆ. ತನ್ನ ಮೌನದ ರಹಸ್ಯ ಬಿಚ್ಚಿಟ್ಟ ಮಾಜಿ ಸಚಿವ ಜಿಟಿ ದೇವೇಗೌಡ. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ಎಂದು ಹುಣಸೂರು ಬೈ ಎಲೆಕ್ಷನ್ ಹಾಗೂ ಮೇಯರ್ ಚುನಾವಣೆ ವಿಚಾರದಲ್ಲಿ ತಟಸ್ಥ ನಿಲುವಿಗೆ ಜಿಟಿಡಿ ಸ್ಪಷ್ಟ‌ನೆ ನೀಡಿದರು.

ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್‌ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ. ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾರ್ಮಿಕ ನುಡಿದಿದ್ದಾರೆ.

ಬಿಜೆಪಿ ಶಾಸಕರು ಹೊರಗೆ ಬರ್ತಾರೆಂಬ ಕುಮಾರಸ್ವಾಮಿ ಹೇಳಿಕೆ :

ಇನ್ನೂ ಬಿಜೆಪಿ ಶಾಸಕರು ಹೊರಗೆ ಬರ್ತಾರೆಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಮಾತನಾಡಿದ ಅವರು, ಈಗ ಯಾರೀ ಬಿಜೆಪಿ ಬಿಟ್ಟು ಹೋಗ್ತಾರೆ.
ಅಧಿಕಾರ ಇದೆ, ಸುಭದ್ರ ಸರ್ಕಾರ ಇದೆ. ಹೋಗೋದಾದ್ರೆ ಮೂರು ವರ್ಷದ ನಂತರ ಹೋಗ್ತಾರೆ. ಅದು ಏನಾದರೂ ಸರಿಯಾದ ಹೊಂದಾಣಿಕೆ ಇಲ್ಲವಾದ್ರೆ ಮಾತ್ರ. 15ಮಂದಿ ಹೋಗಲ್ಲ.. ಹೋಗಲ್ಲ ಅಂತಾನೆ ಬಿಜೆಪಿಗೆ ಹೋದ್ರು. ಕುಮಾರ‌ಸ್ವಾಮಿ ಅಷ್ಟು ದೊಡ್ಡ ಸಂಖ್ಯೆ ಬಿಜೆಪಿಗೆ ಹೋಗೋಲ್ಲ ಅಂತಾನೆ ಅಧಿಕಾರ ಕಳೆದುಕೊಂಡರು. ಮಂತ್ರಿ ಆಗಬೇಕು ಎಂದು ಹೋದವ್ರು ಮತ್ತೇ ಯಾಕೆ ಬರ್ತಾರೆ. ಯಾರು ಕೂಡ ಬಿಜೆಪಿಯಿಂದ ಬರೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಮೈಸೂರಿನಲ್ಲಿ ಜಿಟಿಡಿ ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights