ದಿಲ್ಲಿಗೆ ಶಿಫ್ಟ್ ಆಗ್ತಾರಾ ಮೋಹಕ ತಾರೆ ರಮ್ಯಾ?
ಮೋಹಕ ತಾರೆ ರಮ್ಯಾ ಎಲ್ಲಿದ್ದಾರೆ? ದೇಶದಲ್ಲಿ ಇದ್ದಾರೋ ಇಲ್ಲ ದೇಶಾಂತರ ಹೋಗಿದ್ದಾರೋ ಎಂದು ಕೇಳುತ್ತಿದ್ದವರಿಗೆ ಇಲ್ಲಿದೆ ಉತ್ತರ. ಹೌದು ನಟಿ ಕಂ ರಾಜಕಾರಣಿ ರಮ್ಯಾ ದಿಲ್ಲಿಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.
ಅಂದ ಹಾಗೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರೂ ಆಗಿದ್ದ ರಮ್ಯಾ ಈಗ ಯಾವ ಮಿಡಿಯಾದ ಸಹವಾಸವೂ ಬೇಡ ಎಂದು ತಮ್ಮ ಫೋನನ್ನೇ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ. ಬೇಕಾದವರಿಗೆ ಮಾತ್ರ ಅವರೇ ನೇರವಾಗಿ ಕರೆ ಮಾಡುತ್ತಾರಂತೆ.
ನಟಿ ರಮ್ಯಾ ಕುರಿತಾದ ಈ ವಿವರಣೆ ನೀಡಿರುವುದ ಬೇರೆ ಯಾರೂ ಅಲ್ಲ ಅವರ ತಾಯಿಯವರೇ ಖಾಸಗಿ ಚಾನೆಲ್ಗೆ ಇಷ್ಟೆಲ್ಲ ಪ್ರವರ ನೀಡಿದ್ದಾರೆ.ಕೆಳ ದಿನಗಳ ಹಿಂದೆ ಖಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಾಮಾಜಿಕ ಜಾಲತಾಣಗಳಿಮದ ದೂರ ಇರುವಂತೆ ಫರ್ಮಾನು ಹೊರಡಿಸಿದ್ದರು. ಹೀಗಾಗಿ ರಮ್ಯಾ ಸೈಲೆಂಟ್ ಆಗಿದ್ದಾರೆ ಎಂದು ರಮ್ಯಾ ಅವರ ತಾಯಿ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ರಮ್ಯಾ ಅವರ ಮದುವೆ ಕುರಿತಾದ ವದಂತಿಗಳಿಗೂ ಅವರು ತೆರೆ ಎಳೆದಿದ್ದು ಸದ್ಯ ಅಂತಹ ಯಾವುದೇ ಬೆಳವಣಿಗೆ ಇಲ್ಲ ಎಂದಿದ್ದಾರೆ. ದೀರ್ಘಕಾಲದ ಒಡನಾಡಿಗಳಾಗಿದ್ದ ರಮ್ಯಾ ಹಾಗೂ ರಫೇಲ್ ಸಂಬಮಧ ಮುರಿದುಬಿದ್ದಿದ್ದೆ ಎಂದೂ ರಮ್ಯಾ ಅವರ ತಾಯಿ ಹೇಳಿದ್ದಾರೆ