ಕನ್ನಡ ಮಾಧ್ಯಮಗಳು ಜಿಲ್ಲಾ ಕೇಂದ್ರಗಳಲ್ಲಿ ಕೊರೊನಾ ಆಸ್ಪತ್ರೆ ತೆರೆಯುತ್ತಿವೆ? ಇದು ಸತ್ಯವೇ?

ಟಿವಿ9, ಪಬ್ಲಿಕ್‌ ಟಿವಿ, ಸುರ್ವಣ ನ್ಯೂಸ್‌ ಚಾನೆಲ್‌ಗಳ ಮಾಲೀಕರು ಕರ್ನಾಟಕದ ಪ್ರತಿ ಜಿಲ್ಲಾ ಮಟ್ಟದಲ್ಲಿಯೂ 100 ಹಾಸಿಗೆಗಳ ಕೊರೊನಾ ಆಸ್ಪತ್ರೆಗಳನ್ನು ತೆರೆಯುತ್ತಿದ್ದು, ಕೊರೊನಾ ರೋಗಿಗಳನ್ನು ಅವರೇ ಮನೆ ಬಾಗಿಲಿಗೆ ಬಂದು ಕರೆದೊಯ್ಯುತ್ತಾರೆ ಎಂದು ಮಾಹಿತಿಯೊಂದು ಹರಿದಾಡುತ್ತಿದೆ. ಇದು ಸತ್ಯವೇ ಇಂದು ಹಲವರಲ್ಲಿ ಪ್ರಶ್ನೆ ಮೂಡಿದೆ. ಆದರೆ, ಮಾಧ್ಯಮಗಳ ಕಿರುಚಾಟ ತಾಳಲಾರದ ಟ್ರೋಲಿಗರು ಇದನ್ನು ಹರಿಬಿಟ್ಟಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮಗಳು, ತಮ್ಮ ಮಾಧ್ಯಮ ನೀತಿಗಳನ್ನು ಮರೆತು ದಶಕಗಳೇ ಕಳೆಯುತ್ತಿವೆ. ಸಮಾಜದಲ್ಲಾಗುವ ತಪ್ಪುಗಳನ್ನು ತಿದ್ದುವ, ಸರ್ಕಾರ, ಸಂಸ್ಥೆಗಳನ್ನು ಪ್ರಶ್ನಿಸುವ, ಅವುಗಳ ಧೋರಣೆಯನ್ನು ಕಟುವಾಗಿ ಟೀಕಿಸುವ ಪತ್ರಿಕಾ ಸ್ವಾತಂತ್ರ್ಯವನ್ನು ಒಂದು ಸಿದ್ದಾಂತ, ಬಂಡವಾಳಕ್ಕೆ ಮಾರಿಕೊಂಡಿವೆ.

ಇತ್ತಿಚೆಗೆ ದೇಶದಲ್ಲಿ ಕೊರೊನಾ ವೈರಸ್‌ ಹರಡುವಿಕೆ ಆರಂಭವಾದಾಗಿನಿಂದ ಮೋದಿ ಸರ್ಕಾರವನ್ನೂ, ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿವೆ. ಕೊರೊನಾ ವಿರುದ್ದ ರಣಕಲಿ, ಮೋದಿ ಮಂತ್ರ, ಮೋದಿ ರಣತಂತ್ರ, ಮೋದಿ ಅಬ್ಬರಕ್ಕೆ ಕೊರೊನಾ ಸೈಲೆಂಟ್‌ ಎಂದೆಲ್ಲಾ ಸ್ಟೋರಿ ಮಾಡಿ ಬೊಬ್ಬೆಹೊಡೆಯಲಾರಂಭಿಸಿದ್ದವು.

ಲಾಕ್‌ಡೌನ್‌ ನಂತರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದ ಸಂದರ್ಭದಲ್ಲಿಯೂ ಮಾಧ್ಯಮಗಳ ಮೋದಿ ಭಜನೆ ತಪ್ಪಿರಲಿಲ್ಲ. ಮಧ್ಯಾಹ್ನದಿಂದ ಸಂಜೆಯವರೆಗೂ ಕೊರೊನಾವೈರಸ್‌ನಿಂದಾದ ಸಮಸ್ಯೆಗಳ, ಸೋಂಕಿತರು, ಸೋಂಕಿನಿಂದ ಸಾವನ್ನಪ್ಪಿದವರ ಬಗ್ಗೆ ಕೊರೊನಾಘಾತ, ಕೊರೊನಾ ರಣಕೇಕೆ ಎಂದು ಬೊಬ್ಬೆಹೊಡೆಯುವ ಇದೇ ಮಾಧ್ಯಮಗಳು ಬೆಳ್ಳಂಬೆಳಗ್ಗೆ ಕೊರೊನಾ ವಿರುದ್ಧ ಮೋದೊ ಹಾಗೇ-ಹೀಗೆ ಎಂದೆಲ್ಲ ತಲೆ ಬುಡ ಇಲ್ಲದಂತೆ ಕಿರುಚುವುದನ್ನು ಶುರುಮಾಡುತ್ತವೆ.

ಇದರ ಜೊತೆಗೆ ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಆರಂಭವಾದಾಗಲೂ ವಾಸ್ತವಕ್ಕಿನ್ನ ಹೆಚ್ಚಾಗಿ ಮೋದಿಯನ್ನು ಅಟ್ಟಕ್ಕೇರಿಸಿದ್ದೇ ಹೆಚ್ಚು. ಮೋದಿ ಹೇಳಿಕೆಯಿಂದಾಗಿ ದೇಶಕ್ಕೆ ಮುಖಭಂಗವಾಗುವಂತೆ ಚೀನಾ ಅದನ್ನು ಬಳಸಿಕೊಂಡಾಗಲೂ ಮಾಧ್ಯಮಗಳ ಮೋದಿ ಭಜನೆ ಮಾತ್ರ ನಿಲ್ಲಲಿಲ್ಲ.

ಇದೆಲ್ಲವನ್ನೂ ನೋಡಿ ರೋಸಿ ಹೋಗಿರುವ ಕರ್ನಾಟಕದ ಜನರು ಮಾಧ್ಯಮಗಳನ್ನೇ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಟಿವಿ9, ಪಬ್ಲಿಕ್‌ ಟಿವಿ, ಸುರ್ವಣ ನ್ಯೂಸ್‌ ಚಾನೆಲ್‌ಗಳ ಮಾಲೀಕರು ಕರ್ನಾಟಕದ ಪ್ರತಿ ಜಿಲ್ಲಾ ಮಟ್ಟದಲ್ಲಿಯೂ 100 ಹಾಸಿಗೆಗಳ ಕೊರೊನಾ ಆಸ್ಪತ್ರೆಗಳನ್ನು ತೆರೆಯುತ್ತಿದ್ದು, ಕೊರೊನಾ ರೋಗಿಗಳನ್ನು ಅವರೇ ಮನೆ ಬಾಗಿಲಿಗೆ ಬಂದು ಕರೆದೊಯ್ಯುತ್ತಾರೆ ಎಂದು ಪತ್ರಿಕಾ ಜಾಹಿರಾತಿನ ರೀತಿಯ ಪ್ರಕಟಣೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಅದರಲ್ಲಿರುವ ಸಂಪರ್ಕ ಸಂಖ್ಯೆಗೆ ಹಲವರು ಕರೆ ಮಾಡಿ ಮೂರು ಮಾಧ್ಯಮಗಳನ್ನೂ ಆಸ್ಪತ್ರೆ ನಿರ್ಮಾಣದ ಬಗ್ಗೆ ವಿಚಾರಿಸಲಾರಂಭಿಸಿದ್ದಾರೆ. ಇದು ಸದ್ಯ ಮಾಧ್ಯಮಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಆದರೆ, ಕರ್ನಾಕಟದ ಯಾವ ಮಾಧ್ಯಮವೂ ಕೊರೊನಾ ಆಸ್ಪತ್ರೆಗಳನ್ನು ತೆರೆಯುತ್ತಿಲ್ಲ ಎಂಬುದಷ್ಟೇ ವಾಸ್ತವದ ಸಂಗತಿ

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights