ಕೊರೊನಾದಿಂದಾಗಿ ಜಗತ್ತಿನ 130 ಮಿಲಿಯನ್‌ ಮಂದಿ ಹಸಿವಿನಿಂದ ಬಳಲುವಂತಾಗಿದೆ: ವಿಶ್ವಸಂಸ್ಥೆ

ಕೊರೊನಾ ವೈರಸ್‌ನಿಂದಾಗಿ ಜಗತ್ತಿನ 130 ಮಿಲಿಯನ್‌ ಮಂದಿ ಹಸಿವಿನಿಂದ ಬಳಲುವಂತಹ ಪರಿಸ್ಥಿತಿ ಎದುರಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ನಿನ್ನೆರಗುಗೊಳಿಸಿರುವ ಕೊರೊನಾ ವೈರಸ್‌, ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಕೆಲವು ದೇಶಗಳು ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿದರೂ, ವೈರಸ್‌ ಕಂಟ್ರೋಲ್‌ಗೆ ಸಿಗುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಕೆಲವು ದೇಶಗಳಲ್ಲಿ ಕೊರೊನಾ ಸೋಂಕನ್ನು ಎದುರಿಸಲು ಅಗತ್ಯ ತಯಾರಿಗಳನ್ನು ನಡೆಸಿಕೊಂಡರೆ, ಭಾರತದಂತಹ ದೇಶಗಳು ಸೂಕ್ತ ತಯಾರಿ ಮಾಡಿಕೊಳ್ಳವಲ್ಲಿಯೂ ವಿಫಲವಾಗಿವೆ.

ಆದರೆ, ಲಾಕ್‌ಡೌನ್‌ ಮತ್ತು ಸೋಂಕಿನ ಹಾವಳಿಯಿಂದ ಜಗತ್ತಿನಾದ್ಯಂತ 130 ಮಿಲಿಯನ್ (13 ಕೋಟಿ) ಜನರು ಹಸಿವಿನಿಂದ ಬಳಲುವ ಪರಿಸ್ಥಿತಿ ಉಂಟಾಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಕೊರೊನಾ ಸೋಂಕಿನ ನಂತರ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, ಕಳೆದ ವರ್ಷ 10 ಮಿಲಿಯನ್ ಮಂದಿ ಹಸಿವಿನಿಂದ ಬಳಲಿದ್ದರು. ಆದರೆ, ಈ ವರ್ಷ ಕೊರೊನಾ ಸೋಂಕಿನ ಹಾವಳಿಗೆ ತುತ್ತಾಗಿರುವ ಜಗತ್ತಿನಾದ್ಯಂತ 130 ಮಿಲಿಯನ್ ಜನರು ಹಸಿವಿನಿಂದ ಬಳಲುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದೆ.

ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಕೈಗಾರಿಕಾ ಚಟುವಟಿಕೆ ಸ್ಥಬ್ದವಾಗಿದ್ದು, ಉದ್ಯಮ ವಲಯ ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದೆ. ಜಗತ್ತಿನ ಎಲ್ಲ ವಲಯಗಳೂ ತಮ್ಮ ಅಸ್ಥಿತ್ವ ಕಾಯ್ದುಕೊಳ್ಳಲು ತಿಣುಕಾಡುತ್ತಿದೆ. ಕೋಟ್ಯಂತರ ಉದ್ಯೋಗ ನಷ್ಟವಾಗಿದ್ದು, ಜನರ ಆದಾಯದ ಮೂಲವೇ ಇಲ್ಲದಂತಾಗಿದೆ. ಹೀಗಾಗಿ ಜಗತ್ತಿನಾದ್ಯಂತ ಸುಮಾರು 130 ಮಿಲಿಯನ್ ಮಂದಿ ಹಸಿವಿನಿಂದ ಬಳಲಲಿದ್ದಾರೆ.

2014ರಿಂದಲೇ ಜಾಗತಿಕವಾಗಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತಾದರೂ, 2020ರಲ್ಲಿ ಈ ಪ್ರಮಾಣದಲ್ಲಿ ಶೇ.70ರಷ್ಟು ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

Spread the love

Leave a Reply

Your email address will not be published. Required fields are marked *