ಟಿಕ್‌ ಟಾಕ್ ಬ್ಯಾನ್‌ನಿಂದ ಕಂಪನಿಗಾದ ನಷ್ಟವೆಷ್ಟು ಗೊತ್ತೆ?

ಚೀನಾ ಮೂಲಕ ಜನಪ್ರಿಯ ಆಪ್ ಟಿಕ್‌ ಟಾಕ್‌ ಸೇರಿದಂತೆ 59 ಆಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಟೆಕ್ ದೈತ್ಯ ಕಂಪನಿ ಯುನಿಕಾರ್ನ್ ಬೈಟ್ ಡ್ಯಾನ್ಸ್ ಲಿಮಿಟೆಡ್ ತನ್ನ ಜನಪ್ರಿಯ ಆ್ಯಪ್ ಟಿಕ್‌ ಟಾಕ್ ಸೇರಿದಂತೆ ಮೂರು ಆ್ಯಪ್ ನಿಷೇಧದಿಂದ 6 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ವರದಿ ಮಾಡಿದೆ.

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹಪೀಡಿತ ಚಟುವಟಿಕೆಗಳಲ್ಲಿ ತೊಡಗುವುದು, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ” ಗಾಗಿ ಭಾರತವು ಹಲವು ಆಪ್‌ಗಳನ್ನು ನಿರ್ಬಂಧಿಸಿದೆ. ಅವುಗಳಲ್ಲಿ ಟಿಕ್‌ಟಾಕ್, ಯುಸಿ ಬ್ರೌಸರ್ ಮತ್ತು ವೀಚಾಟ್ ಸೇರಿವೆ.

6 ಬಿಲಿಯನ್ ಡಾಲರ್‌ ಮೊತ್ತವು ಭಾರತದಿಂದ ನಿಷೇಧಿಸಲ್ಪಟ್ಟ ಎಲ್ಲಾ ಇತರ ಚೀನೀ ಅಪ್ಲಿಕೇಶನ್‌ಗಳ ಒಟ್ಟು ನಷ್ಟಕ್ಕಿಂತ ಹೆಚ್ಚಾಗಿರುತ್ತದೆ ಎಂದು ಚೀನಾದ ಕೈಕ್ಸಿಂಗ್ಲೋಬಲ್.ಕಾಮ್ ವರದಿ ಮಾಡಿದೆ.

ಟಿಕ್‌ ಟಾಕ್‌ ಪ್ರಪಂಚಾದ್ಯಂತ ಪ್ರಸಿದ್ದ ಆಪ್ ಆಗಿದೆ. ಚೀನಾ ಹೊರತುಪಡಿಸಿ ಭಾರತದಲ್ಲಿಯೇ ಅತಿ ಹೆಚ್ಚಿನ ಗ್ರಾಹಕರನ್ನು ಅದು ಹೊಂದಿತ್ತು ಎನ್ನಲಾಗಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಟಿಕ್‌ಟಾಕ್ ಅನ್ನು 6.1 ಕೋಟಿ ಜನ ಡೌನ್ ಲೋಡ್ ಮಾಡಿದ್ದರು. ಇದು ವಿಶ್ವಾದ್ಯಂತ ಅದರ ಒಟ್ಟು ಡೌನ್‌ಲೋಡ್‌ಗಳಲ್ಲಿ 30.3% ರಷ್ಟಿದೆ ಮತ್ತು 2019 ರ ಒಟ್ಟು ಭಾರತದ ಡೌನ್‌ಲೋಡ್‌ಗಳ ಡಬಲ್ ಆಗಿದೆ ಎಂದು  ಸೆನ್ಸಾರ್ ಟವರ್ ವರದಿ ಮಾಡಿದೆ.

ತನ್ನ ಹೇಳಿಕೆಯಲ್ಲಿ, ಟಿಕ್‌ಟಾಕ್ ಇಂಡಿಯಾ ಭಾರತದಲ್ಲಿನ ಬಳಕೆದಾರರ ಯಾವುದೇ ಮಾಹಿತಿಯನ್ನು “ಚೀನಾ ಸರ್ಕಾರ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದೊಂದಿಗೆ” ಹಂಚಿಕೊಂಡಿಲ್ಲ ಎಂದು ಹೇಳಿದೆ.

“ಭವಿಷ್ಯದಲ್ಲಿಯೂ ಸಹ ನಾವು ನಾವು ಹಾಗೆ ಮಾಡುವುದಿಲ್ಲ” ಎಂದಿರುವ ಟಿಕ್‌ ಟಾಕ್ ಇದು ಬಳಕೆದಾರರ ಗೌಪ್ಯತೆ ಮತ್ತು ಸಮಗ್ರತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರತಿಪಾದಿಸಿದೆ.

“ನಿಷೇಧ ಕುರಿತು ಪ್ರತಿಕ್ರಿಯಿಸಲು ಮತ್ತು ಸ್ಪಷ್ಟೀಕರಣಗಳನ್ನು ಸಲ್ಲಿಸಲು ಅವಕಾಶಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಮಧ್ಯಸ್ಥಗಾರರನ್ನು ಭೇಟಿ ಮಾಡಲು ನಮ್ಮನ್ನು ಆಹ್ವಾನಿಸಲಾಗಿದೆ” ಎಂದು ಟಿಕ್‌ಟಾಕ್‌ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ.

“ಟಿಕ್‌ ಟಾಕ್ 14 ಭಾರತೀಯ ಭಾಷೆಗಳಲ್ಲಿ ಲಭ್ಯಗೊಳಿಸುವ ಮೂಲಕ ಅಂತರ್ಜಾಲವನ್ನು ಪ್ರಜಾಪ್ರಭುತ್ವಗೊಳಿಸಿದೆ. ನೂರಾರು ಮಿಲಿಯನ್ ಬಳಕೆದಾರರು, ಕಲಾವಿದರು, ಕಥೆ ಹೇಳುವವರು, ಶಿಕ್ಷಣತಜ್ಞರು ಮತ್ತು ಪ್ರದರ್ಶಕರು ತಮ್ಮ ಜೀವನೋಪಾಯಕ್ಕಾಗಿ ಅದನ್ನು ಅವಲಂಬಿಸಿರುತ್ತಾರೆ, ಅವರಲ್ಲಿ ಅನೇಕರು ಮೊದಲ ಬಾರಿಗೆ ಇಂಟರ್ನೆಟ್ ಬಳಕೆದಾರರಾಗಿದ್ದಾರೆ” ಎಂದು ನಿಖಿಲ್ ಗಾಂಧಿ ಹೇಳಿದ್ದಾರೆ.

ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯು ಭಾರತದಲ್ಲಿ 2,000 ಕ್ಕೂ ಹೆಚ್ಚು ಪೂರ್ಣಕಾಲೀಕ ಸ್ಥಳೀಯ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಈಗ ನಿಷೇಧವು ಬಹಳ ಕಾಲ ಮುಂದುವರೆಯುವ ಸ್ಥಿತಿಯಿದ್ದು ಇವರೆಲ್ಲರೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.


ಇದನ್ನೂ ಓದಿ: ಚಿನ್ನದ ಮಾಸ್ಕ್ ಮಾಡಿಸಿಕೊಂಡ ಭೂಪ: ಇದಕ್ಕೆ ಖರ್ಚಾದ ಹಣವೆಷ್ಟು ಗೊತ್ತೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights