ಮಗುವಿಗೆ ಜನ್ಮವಿತ್ತ ಕೊರೊನಾ ಸೋಂಕಿತೆ; ನೋಡಲು ಬಾರದು ಕುಟುಂಬಸ್ಥರು!

ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮಗುವಿಗೆ ಉಸಿರಾಟದ ತೊಂದರೆ ಇರುವುದರಿಂದ ತೀವ್ರ ನಿಘಾ ಘಟಕದಲ್ಲಿ ಮಗುವನ್ನು ಉಪಚಾರ ಮಾಡಲಾಗುತ್ತಿದೆ. ಹೀಗಾಗಿ, ಮಗುವನ್ನು ಹೆತ್ತರೂ ಅದನ್ನು ನೋಡಲಾಗದ ಸ್ಥಿತಿಯಲ್ಲಿ ತಾಯಿ ಇದ್ದಾರೆ.

ತಾಯಿಗೆ ಕೊರೊನಾ ದೃಢಪಟ್ಟಿರುವುದರಿಂದಾಗಿ ಮಗುವಿನ ತಂದೆ ಹಾಗೂ ಸಂಬಂಧಿಕರಾರು ಇವರನ್ನು ನೋಡಲು ಬಂದಿಲ್ಲ. ಹೀಗಾಗಿ ಎಲ್ಲರೂ ಇದ್ದರೂ ನವಜಾತ ಶಿಶು ಹಾಗೂ ಬಾಣಂತಿ ಅನಾಥರಾಗಿದ್ದಾರೆ. ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳೇ ತಾಯಿ ಹಾಗೂ ಮಗುವನ್ನು ಉಪಚಾರ ಮಾಡುತ್ತಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ  23 ವರ್ಷದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆ ಬಂದು ದಾಖಲಾಗಿದ್ದರು. ಆದರೆ ಆಕೆಗೆ ಮೊನ್ನೆ ಕೊರೋನಾ ಸೋಂಕು ತಗಲಿರುವದು ದೃಢಪಟ್ಟಿತ್ತು . ನಿನ್ನೆ ಮುಂಜಾನೆ ಹೆರಿಗೆ ನೋವು ಕಂಡು ಬಂದಿರೋದರಿಂದ ಅವಳಿಗೆ ಸೀಜರಿನ್ ಮಾಡುವ ಮೂಲಕ ಹೆರಿಗೆ ಮಾಡಿಸಿಕೊಳ್ಳಲಾಗಿದೆ.

ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಗೆ ಗದಗ ಜಿಮ್ಸ್ ವೈದ್ಯರಾದ ಡಾ: ಶಿವನಗೌಡ, ಡಾ: ಶೃತಿ ಬಾವಿ, ಡಾ: ಅಜಯ ಬಸರೀಗಿಡದ ನೇತೃತ್ವದಲ್ಲಿ ಹೆರಿಗೆ ಮಾಡಿಸಲಾಗಿದೆ. ನವಜಾತ ಶಿಶು 2.7 ಕಿ‌ ಜಿ ತೂಕ ಇದ್ದು, ಶಿಶುವಿಗೆ ಉಸಿರಾಟದ ತೊಂದರೆ ಕಂಡು ಬಂದಿರೋದರಿಂದ ಕೋವಿಡ್-19 ಟೆಸ್ಟ್ ಒಳಪಡೆಸಲಾಗಿದ್ದು, ವರದಿ ಬರುವುದು ಬಾಕಿ ಇದೆ.

ತಾನೇ ಹೆತ್ತ ಮಗುವನ್ನು ಕೈಯಾರೆ ಎತ್ತಿಕೊಂಡು  ಎದೆ ಹಾಲು ಉಣಿಸದ ಸ್ಥಿತಿಯಲ್ಲಿ ಹೆತ್ತಮ್ಮ. ಬಂಧು ಬಳಗ ಇದ್ರು ಬಾಣಂತಿ ಅನಾಥಳಾಗಿದ್ದಾಳೆ. ಈಕೆಯ ಸ್ಥಿತಿ ನೋಡಿ ಕುಟುಂಬದವರು ಮರುಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights