ಅನಂತಪದ್ಮನಾಭ ದೇವಾಲಯವನ್ನು ರಾಜಮನೆತನದ ಒಡೆತನಕ್ಕೆ ನೀಡದ ಸುಪ್ರೀಂ ಕೋರ್ಟ್‌!

ವಿಶ್ವ ಪ್ರಸಿದ್ಧ ತಿರುವನಂತಪುರಂನ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಹಕ್ಕು ತಿರುವಂಕೂರು ರಾಜಕುಟುಂಬಕ್ಕೆ, ತಿರುವನಂತಪುರದ ಶ್ರೀಅನಂತ ಪದ್ಮನಾಭಸ್ವಾಮಿ ದೇವಾಲಯವನ್ನು ರಾಜಮನೆತನದ ವಶಕ್ಕೆ ನೀಡುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಇಂದು ಮಲ್ಹೋತ್ರಾ​​ ಅವರಿದ್ದ ಸ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ತಿರುವಾಂಕೂರು ರಾಜ ವಂಶಕ್ಕೆ ಸಿಕ್ಕ ಐತಿಹಾಸಿಕ ಜಯದಿಂದಾಗಿ ಅನಂತ ಪದ್ಮನಾಭಸ್ವಾಮಿ ದೇಗುಲದ ಎಲ್ಲಾ ಅಧಿಕಾರ ಅವರಿಗೆ ಸಿಗಲಿದೆ. ಕೇರಳ ಸರಕಾರಕ್ಕೆ ದೇವಾಲಯದ ಮೇಲೆ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಅನಂತ ಪದ್ಮನಾಭ ಸ್ವಾಮಿ ದೇಗುಲದ ಬಿ ಕೊಠಡಿಯನ್ನು ಓಪನ್ ಮಾಡಲು ಕಮಿಟಿಗಳು ತೀರ್ಮಾನ ತೆಗೆದುಕೊಳ್ಳುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ತೀರ್ಪಿನಿಂದಾಗಿ ಪಿನಾರಾಯಿ ವಿಜಯನ್​ ನೇತೃತ್ವದ ಕಮ್ಯುನಿಸ್ಟ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಈಗ ಅಸ್ಥಿತ್ವದಲ್ಲಿರುವ ಕಮಿಟಿಗೆ ಜಿಲ್ಲಾ ನ್ಯಾಧೀಶರು ಮುಖ್ಯಸ್ಥರಾಗಿರುತ್ತಾರೆ. ಹೊಸ ಕಮಿಟಿ ಕೂಡ ರಚನೆ ಆಗಬೇಕು ಎಂದು ದ್ವಿಸದಸ್ಯ ಪೀಠ ಹೇಳಿದೆ.

“ಅನಂತಪದ್ಮನಾಭ ದೇವಸ್ಥಾನದ (ಬೆಲೆಕಟ್ಟಲಾಗದಷ್ಟು ಅಮೂಲ್ಯ) ಸಂಪತ್ತಿನ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು..” ಎಂದು ಇಂದು ಸುಪ್ರೀಂ ಕೋರ್ಟ್ ಹೇಳಿರುವ ಕುರಿತು ಸುದ್ದಿ ಬರುತ್ತಿದೆ!? (ಈ ಪ್ರಕರಣಕ್ಕೆ ಸಂಭಂದಿಸಿದಂತೆ ಕೋರ್ಟಿನ ಮುಂದಿರುವ ಫ್ಯಾಕ್ಟ್ಸ್ ಮತ್ತು ಮೆರಿಟ್ಸ್ ಬಗ್ಗೆ ನಾನು ಕಾಮೆಂಟ್ ಮಾಡ್ತಿಲ್ಲ) ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಕ್ಕು ಆಗಬೇಕಾದುದು ರಾಜಮನೆತನದ ಹಕ್ಕು ಹೇಗಾಗುತ್ತೋ ನನ್ನ ಅಲ್ಪ ಬುದ್ದಿಗೆ ತೋಚುತ್ತಿಲ್ಲ!? ನಾವು ದಿನನಿತ್ಯ ಪ್ರಜಾಪ್ರಭುತ್ವ, ಸಂವಿಧಾನ ಎಂದು ಭಜನೆ ಮಾಡುತ್ತಿರುತ್ತೇವೆ ಎಂದು ಹಿರಿಯ ವಕೀಲರಾದ ಸಿ.ಎಸ್‌.ದ್ವಾರಕಾನಾಥ್‌ ಹೇಳಿದ್ದಾರೆ.

ಸಂವಿಧಾನದ ಮೂಲ ಆಶಯವಾದ ಪ್ರಜಾಪ್ರಭುತ್ವದ ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ಸುಪ್ರೀಂ ಕೋರ್ಟ್ ಇನ್ನೂ ರಾಜಮನೆತನದ ಹಕ್ಕುಗಳ ರಕ್ಷಣೆಯ ಪರವಾಗಿ ಮಾತನಾಡುತ್ತಿದೆ!? ಈ ಎಲ್ಲದರ ನಡುವೆ
ನಾವು ರಾಜಮನೆತನಗಳ ಸ್ವಾಯತ್ತತೆಯನ್ನು ದೂಳೀಪಟ ಮಾಡಿದ ಸರ್ಧಾರ್ ವಲ್ಲಭಭಾಯಿ ಪಟೇಲರ 597 ಅಡಿ ಎತ್ತರದ ಉಕ್ಕಿನ ಪ್ರತಿಮೆಯನ್ನಿಟ್ಟು ಸಂಭ್ರಮಿಸುತ್ತಿದ್ದೇವೆ!! ಎಂಥಾ ವಿಪರ್ಯಾಸ..!! ಈ ದೇಶದಲ್ಲಿ ಏನು ನಡೆಯುತ್ತಿದೆ ಏನೂ ಅರ್ಥವಾಗುತ್ತಿಲ್ಲ!! ಎಲ್ಲವೂ ಗೊಂದಲಮಯವಾಗಿದೆ..! ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಅನಂತಪದ್ಮನಾಭ ದೇವಾಲಯವನ್ನು ರಾಜಮನೆತನದ ಒಡೆತನಕ್ಕೆ ನೀಡದ ಸುಪ್ರೀಂ ಕೋರ್ಟ್‌!

  • October 13, 2020 at 7:31 pm
    Permalink

    Thanks , I have just been looking for info about this subject for ages
    and yours is the best I have came upon so far. But, what about the conclusion? Are you positive in regards
    to the supply?

    Reply

Leave a Reply

Your email address will not be published.

Verified by MonsterInsights