ಗಾಂಧಿ ಕುಟುಂಬದ ಟ್ರಸ್ಟ್‌ಗಳ ತನಿಖೆಗೆ ಸಮಿತಿ ರಚಿಸಿದ ಸರ್ಕಾರ!

ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ಆರ್ಥಿಕ ಪ್ರಮಾದಗಳಿಗಾಗಿ ತನಿಖೆ ನಡೆಸಲಾಗುವುದು ಎಂದು ಸರ್ಕಾರ ಇಂದು ತಿಳಿಸಿದೆ. ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಗಳು ಆದಾಯ ತೆರಿಗೆ ಮತ್ತು ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆ ಮಾಡಿದೆ. ಅದರ ಕುರಿತು ತನಿಖೆಯನ್ನು ನಡೆಸಲು ಕೇಂದ್ರ ಗೃಹ ಸಚಿವಾಲಯವು ಒಂದು ಸಮಿತಿ ಯನ್ನು ರಚಿಸಿದೆ ಎಂದು ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಗಾಂಧಿ ಕುಟುಂಬ ನಡೆಸುವ ಟ್ರಸ್ಟ್‌ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ (PMLA), ಆದಾಯ ತೆರಿಗೆ ಕಾಯ್ದೆ, ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಯಲಿದೆ. ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ರಾಜೀವ್ ಗಾಂಧಿ ಪ್ರತಿಷ್ಠಾನವನ್ನು ಜೂನ್ 1991 ರಲ್ಲಿ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅನ್ನು 2002 ರಲ್ಲಿ ಸ್ಥಾಪಿಸಲಾಯಿತು; 1991 ರಲ್ಲಿ ಹತ್ಯೆಗೀಡಾದ ಮಾಜಿ ರಾಜೀವ್‌ ಗಾಂಧಿಯವರ ಪತ್ನಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇದರ ನೇತೃತ್ವ ವಹಿಸಿದ್ದಾರೆ.

ಎಲ್ಲಾ ಹಣಕಾಸಿನ ನಿರ್ವಹಣೆಯ ಕುರಿತು ಲೆಕ್ಕಪರಿಶೋಧನೆ ನಡೆಸಲಾಗಿದೆ. ಇಲ್ಲಿ ಯಾವುದೇ ತಪ್ಪುಗಳಾಗಿಲ್ಲ. ತಮ್ಮ ವಿರುದ್ಧದ ಇತ್ತೀಚಿಗೆ ಕೆಲವು ಸಂಚುಗಳನ್ನು ನಡೆಸುತ್ತಿದ್ದು, ಇವೆಲ್ಲಾ ರಾಜಕೀಯ ಕಾರಣಗಳಿಗಾಗಿ ಹೆಣೆಯಲ್ಪಟ್ಟ ತನಿಖೆಗಳಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

“RGF ವಹಿವಾಟಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಪಾರದರ್ಶಕತೆಗೆ ಬದ್ಧವಾಗಿದೆ” ಎಂದು ಆಡಳಿತಾರೂಢ BJP ಬಿಜೆಪಿ ಹೇಳಿದೆ.

ಕಳೆದ ತಿಂಗಳು ಬಿಜೆಪಿ, “ಇದು ಕಾಂಗ್ರೆಸ್ ಟ್ರಸ್ಟ್‌ಗಳಿಗೆ ಸಂಬಂಧಿಸಿರುವ ಲಜ್ಜೆಗೆಟ್ಟ ವಂಚನೆ ಎಂದು ಆರೋಪಿಸಿತ್ತು. ತಾನು ಅಧಿಕಾರದಲ್ಲಿದ್ದಾಗ, ಮನಮೋಹನ್ ಸಿಂಗ್ ಸರ್ಕಾರದ ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹಣವನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಿತ್ತು ಎಂದು ಆರೋಪಿಸಿದರು.

“ಯುಪಿಎ ತನ್ನ ಆಡಳಿತದಲ್ಲಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಹಣವನ್ನು ದಾನ ಮಾಡುತ್ತಿತ್ತು. PMNRF ಮಂಡಳಿಯಲ್ಲಿ ಕುಳಿತಿದ್ದವರು ಶ್ರೀಮತಿ ಸೋನಿಯಾ ಗಾಂಧಿ. RGF ಅಧ್ಯಕ್ಷರು ಶ್ರೀಮತಿ ಸೋನಿಯಾ ಗಾಂಧಿಯಾಗಿದ್ದರು. ಇದು ಸಂಪೂರ್ಣವಾಗಿ ಖಂಡನೀಯ” ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಜೂನ್ 15 ರಂದು ಚೀನಾ ಜೊತೆಗಿನ ಗಡಿ ಘರ್ಷಣೆಯ ಕುರಿತ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ದೈನಂದಿನ ದಾಳಿಗೆ ಪ್ರತಿಯಾಗಿ 2005 ರಲ್ಲಿ ಚೀನಾದ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಪ್ರತಿಷ್ಠಾನವು ಹಣವನ್ನು ಪಡೆದುಕೊಂಡಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ.

“ಆಗಿನ ಯುಪಿಎ ಸರ್ಕಾರ ಚೀನಿಯರಿಂದ ಲಂಚ ಪಡೆದಿದೆಯೇ? ಈ ದೇಣಿಗೆಯನ್ನು ತೆಗೆದುಕೊಂಡ ನಂತರ, ಪ್ರತಿಷ್ಠಾನವು ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಶಿಫಾರಸು ಮಾಡಿತು, ಅದು ಚೀನೀಯರ ಪರವಾಗಿ ಹೆಚ್ಚು ಒಲವು ತೋರಿತು” ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದರು.

1991 ರಲ್ಲಿ ಹಣಕಾಸು ಸಚಿವರಾಗಿ ತಮ್ಮ ಬಜೆಟ್ ಭಾಷಣದಲ್ಲಿ ಮನಮೋಹನ್ ಸಿಂಗ್ ಅವರು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು ಎಂದು ಬಿಜೆಪಿ ಆರೋಪಿಸಿದೆ.

ಸೋನಿಯಾ ಗಾಂಧಿಯವರಲ್ಲದೆ, ರಾಜೀವ್ ಗಾಂಧಿ ಪ್ರತಿಷ್ಠಾನದ ಮಂಡಳಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪಿ ಚಿದಂಬರಂ ಮತ್ತು ಮನಮೋಹನ್ ಸಿಂಗ್ ಸೇರಿದ್ದಾರೆ.

ಈ ಆರೋಪಗಳನ್ನೆಲ್ಲಾ ಅಲ್ಲಗಳೆದ ಕಾಂಗ್ರೇಸ್, ಚೀನಾ ಬಿಕ್ಕಟ್ಟನ್ನು ಸರ್ಕಾರ ಸರಿಯಾಗಿ ನಿಭಾಯಿಸುವುದರಿಂದ ಎಡವಿದೆ. ಹಾಗಾಗಿ ಈ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದು ಎಂದು ಕಾಂಗ್ರೆಸ್ ಹೇಳಿದೆ.


ಇದನ್ನೂ ಓದಿPM Cares ಮಾಹಿತಿ ನೀಡದ ಮೋದಿ ಸರ್ಕಾರ: ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮದ ವಾಸನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights