ಮತ್ತೆ ಲಾಕ್‌ಡೌನ್ ಇಲ್ಲ; ವೈರಸ್ ಜೊತೆಗೆ ಬದುಕಬೇಕು: ಯಡಿಯೂರಪ್ಪ

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್’ಡೌನ್ ಮಾಡುವುದಿಲ್ಲ. ಜನರು ಭಯ ಪಡದೆ, ಸಾಕಷ್ಟು ಮುಂಜಾಗ್ರತೆಯೊಂದಿಗೆ  ವೈರಸ್ ಜೊತೆಗೆ ಬದುಕಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಲಾಕ್’ಡೌನ್ ಭೀತಿಯಿಂದಾಗಿ ವಲಸೆ ಕಾರ್ಮಿಕರು ತವರುಗಳಿಗೆ ಮರಳುತ್ತಿದ್ದಾರೆ. ಆದರೆ, ಮತ್ತೆ ಲಾಕ್‌ಡೌನ್‌ ಮಾಡುವುದಿಲ್ಲ. ಜನರು ಭೀತಿಗೊಳಗಾಗಬಾರದು. ಮುಂಜಾಗ್ರತಾ ಕ್ರಮಗಳೊಂದಿಗೆ ವೈರಸ್ ಜೊತೆಗೆ ಜೀವಿಸುವುದನ್ನು ಕಲಿಯಬೇಕಿದೆ. ವೈರಸ್ ಮಟ್ಟಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ 450 ಹೆಚ್ಚುವರಿ ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರಕ್ಕೆ ಜನರು ಸಹಕಾರ ನೀಡಬೇಕು. ಈ ಹಿಂದೆ ಪ್ರಧಾನಿ ಮೋದಿಯವರು ಕೂಡ ಜನರು ಕೊರೊನಾ ಜೊತೆಗೆ ಬದುಕಬೇಕು ಎಂದು ಹೇಳಿದ್ದರು. ಸದ್ಯಕ್ಕೆ ನಮ್ಮೆದುರಿಗಿರುವುದು ಅದೇ ದಾರಿ. ನಿಮ್ಮ ಜೀವ ಅತ್ಯಮೂಲ್ಯವಾದದ್ದು. ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನಲ್ಲಿ 10,000 ಹಾಸಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights